Flight ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ! ಈಗ ವಿಮಾನಯಾನಕ್ಕೆ Extra Charge!

Tue, 05 Jan 2021-3:03 pm,

ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಧಾನಿಯಿಂದ ಅಂದರೆ ದೆಹಲಿ ವಿಮಾನ ನಿಲ್ದಾಣದಿಂದ ವಿಮಾನ ಹಿಡಿಯಲು ನೀವು ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ. ಫೆಬ್ರವರಿ 1 ರಿಂದ ಹೆಚ್ಚುವರಿ ಶುಲ್ಕ ವಿಧಿಸಲು ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ (ಡಿಐಎಎಲ್) ಗೆ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್ಎ) ಅನುಮೋದನೆ ನೀಡಿದೆ.

ಫೆಬ್ರವರಿ 1 ರಿಂದ ದೆಹಲಿಯಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ಹಿಡಿಯಲು ನೀವು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 2021 ರ ಫೆಬ್ರವರಿ 1 ರಿಂದ ಮಾರ್ಚ್ 31 ರವರೆಗೆ ನೀವು ದೆಹಲಿ ವಿಮಾನ ನಿಲ್ದಾಣದಿಂದ ಬೇರೆ ಯಾವುದೇ ಸ್ಥಳಕ್ಕೆ ವಿಮಾನಯಾನ ಮಾಡುತ್ತಿದ್ದಾರೆ ನೀವು ಹೆಚ್ಚುವರಿಯಾಗಿ 65.98 ರೂ. ಜೊತೆಗೆ ತೆರಿಗೆಯನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗುತ್ತದೆ. ಇದರ ನಂತರ ಈ ಶುಲ್ಕವನ್ನು ಏಪ್ರಿಲ್ 1, 2021 ರಿಂದ ಕಡಿತಗೊಳಿಸಲಾಗುವುದು. ಈ ಶುಲ್ಕವನ್ನು 2021-22ರ ಹಣಕಾಸು ವರ್ಷಕ್ಕೆ 53 ರೂ., 2022-23ರ ಹಣಕಾಸು ವರ್ಷಕ್ಕೆ 52.56 ರೂ. ಮತ್ತು 2023-24ರ ಹಣಕಾಸು ವರ್ಷಕ್ಕೆ 51.97 ರೂ. ಎಂದು ನಿಗದಿಗೊಳಿಸಲಾಗಿದೆ.

ದೆಹಲಿ ವಿಮಾನ ನಿಲ್ದಾಣದಿಂದ ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಯಾನಕ್ಕಾಗಿ 200 ಮತ್ತು 300 ರೂಪಾಯಿಗಳ ಹೆಚ್ಚುವರಿ ಶುಲ್ಕವನ್ನು ಡಿಐಎಎಲ್ ಕೋರಿದ್ದರೂ, ಮೂಲಗಳ ಪ್ರಕಾರ, ಈ ಬೇಡಿಕೆಗೆ ಈ ಸಮಯದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿಲ್ಲ. ದೆಹಲಿ ವಿಮಾನ ನಿಲ್ದಾಣವು (Delhi Airport) ಈ ಶುಲ್ಕವನ್ನು 2024 ರವರೆಗೆ ಜಾರಿಗೆ ತರಬೇಕೆಂದು ಬಯಸಿದೆ, ಆದರೆ ಈಗ ವಿಮಾನ ನಿಲ್ದಾಣ ಪ್ರಾಧಿಕಾರವು 2022ರ ನಂತರವೇ ಅದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬಯಸಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಸರ್ಕಾರದ ಮಹತ್ವದ ನಿರ್ಧಾರ: ಈಗ ನೀವು ಚಾರ್ಟರ್ಡ್ ವಿಮಾನಗಳಲ್ಲೂ ಪ್ರಯಾಣಿಸಬಹುದು

ಕರೋನಾವೈರಸ್ (Coronavirus) ಸಾಂಕ್ರಾಮಿಕದಿಂದಾಗಿ ಏಪ್ರಿಲ್ 2020 ರಿಂದ ಮಾರ್ಚ್ 2024 ರವರೆಗೆ ಸುಮಾರು 3538 ಕೋಟಿ ರೂ.ಗಳ ಹಾನಿ ಉಂಟಾಗಿದೆ ಎಂದು ಅಂದಾಜಿಸಿರುವುದಾಗಿ DIAL ಹೇಳಿದೆ. ಆದ್ದರಿಂದ ಏಪ್ರಿಲ್ 2024ರ ವೇಳೆಗೆ ಹಣಕಾಸಿನ ನೆರವು ಅಗತ್ಯವಾಗಿರುತ್ತದೆ. ಹಾಗಾಗಿ ಹೆಚ್ಚುವರಿ ಶುಲ್ಕ ಅಗತ್ಯವಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ವಾಯು ಇಂಧನ ಬೆಲೆಯಲ್ಲಿ ಭಾರಿ ಏರಿಕೆ: ವಿಮಾನಯಾನ ದುಬಾರಿಯಾಗುವ ಸಾಧ್ಯತೆ

ವಿಮಾನ ನಿಲ್ದಾಣದ ಸುಂಕವನ್ನು ನಿಗದಿಪಡಿಸುವಾಗ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಆದಾಯದ ಕುಸಿತದ ಪರಿಣಾಮವನ್ನು ನೆನಪಿನಲ್ಲಿಡಿ ಎಂದು ಈ ಹಿಂದೆ DIAL ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿದ್ದರು. ಹೀಗೆ ಮಾಡದಿದ್ದರೆ ಹಣದ ಕೊರತೆ ಎದುರಾಗಬಹುದು, ಇದು ವಿಮಾನ ನಿಲ್ದಾಣದ (Airport) ಸುಗಮ ಕಾರ್ಯವೈಖರಿಗೆ ಅಡಚಣೆ ಉಂಟುಮಾಡಲಿದೆ ಎಂದು ಅಳಲು ತೋಡಿಕೊಂಡಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link