ವಾಯು ಇಂಧನ ಬೆಲೆಯಲ್ಲಿ ಭಾರಿ ಏರಿಕೆ: ವಿಮಾನಯಾನ ದುಬಾರಿಯಾಗುವ ಸಾಧ್ಯತೆ

ತೈಲ ಮಾರುಕಟ್ಟೆ ಕಂಪನಿ (HPCL, BPCL, IOC) ವಾಯು ಇಂಧನ (ATF) ಬೆಲೆಯನ್ನು ಶೇಕಡಾ 16.3 ರಷ್ಟು ಹೆಚ್ಚಿಸಿದೆ. ದೆಹಲಿಯಲ್ಲಿ ಎಟಿಎಫ್ (Aviation Turbine Fuel) ಹೊಸ ಬೆಲೆ ಜೂನ್ 16 ರಿಂದ ಪ್ರತಿ ಕೆಜಿ ಲೀಟರ್‌ಗೆ 39,069.87 ರೂ.  

Last Updated : Jun 16, 2020, 12:25 PM IST
ವಾಯು ಇಂಧನ ಬೆಲೆಯಲ್ಲಿ ಭಾರಿ ಏರಿಕೆ: ವಿಮಾನಯಾನ ದುಬಾರಿಯಾಗುವ ಸಾಧ್ಯತೆ title=

ನವದೆಹಲಿ: ಲಾಕ್‌ಡೌನ್ ನಂತರ ನೀವು ದೇಶದಲ್ಲಿ ಅಥವಾ ವಿದೇಶದಲ್ಲಿ ಎಲ್ಲೇ  ಪ್ರಯಾಣಿಸಲು ಯೋಜಿಸುತ್ತಿದ್ದರೆ, ನಿಮ್ಮ ಜೇಬಿನಲ್ಲಿ ಸ್ವಲ್ಪ ಹೆಚ್ಚು ಹಣ ಇರಿಸಿಕೊಂಡಿದ್ದರೆ ಒಳ್ಳೆಯದು. ಮುಂದಿನ ದಿನಗಳಲ್ಲಿ ಎಲ್ಲಾ ವಿಮಾನಯಾನ ಸಂಸ್ಥೆಗಳು ವಿಮಾನ (Flight) ಟಿಕೆಟ್‌ಗಳ ಬೆಲೆಯನ್ನು ಹೆಚ್ಚಿಸಬಹುದು. 15 ದಿನಗಳಲ್ಲಿ ತೈಲ ಮಾರುಕಟ್ಟೆ ಕಂಪನಿಗಳು ವೈಮಾನಿಕ ಟರ್ಬೈನ್‌ಗಳ (ಇಂಧನ) ಬೆಲೆಯನ್ನು ಹೆಚ್ಚಿಸಿವೆ. ಇದು ಸಾಮಾನ್ಯ ಪ್ರಯಾಣಿಕರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯಿದೆ.

ಎಟಿಎಫ್ ಬೆಲೆಗಳು ತಿಂಗಳಿಗೆ ಎರಡು ಬಾರಿ ಹೆಚ್ಚಾಗಿದೆ: 
ತೈಲ ಮಾರುಕಟ್ಟೆ ಕಂಪನಿ (HPCL, BPCL, IOC) ವಾಯು ಇಂಧನ (ATF) ಬೆಲೆಯನ್ನು ಶೇಕಡಾ 16.3 ರಷ್ಟು ಹೆಚ್ಚಿಸಿದೆ. ದೆಹಲಿಯಲ್ಲಿ ಎಟಿಎಫ್ (Aviation Turbine Fuel) ಹೊಸ ಬೆಲೆ ಜೂನ್ 16 ರಿಂದ ಪ್ರತಿ ಕೆಜಿ ಲೀಟರ್‌ಗೆ 39,069.87 ರೂ. ಅಂತೆಯೇ ಎಟಿಎಫ್ ದರವನ್ನು ಕೋಲ್ಕತ್ತಾದಲ್ಲಿ ಪ್ರತಿ ಕೆಜಿ ಲೀಟರ್‌ಗೆ 44,024.10 ರೂ, ಮುಂಬೈಯಲ್ಲಿ ಪ್ರತಿ ಕೆಜಿ ಲೀಟರ್‌ಗೆ 38,565.06 ಮತ್ತು ಚೆನ್ನೈನಲ್ಲಿ ಪ್ರತಿ ಕೆಜಿ ಲೀಟರ್‌ಗೆ 40,239.63 ರೂ.

ದುಬಾರಿಯಾಗಲಿದೆ ವಿಮಾನ ಪ್ರಯಾಣ :
ವಾಯು ಇಂಧನ ಬೆಲೆ ಹೆಚ್ಚಳವು ಪ್ರಯಾಣಿಕರ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ತಜ್ಞರು ಹೇಳುತ್ತಾರೆ. ವಾಸ್ತವವಾಗಿ ಲಾಕ್‌ಡೌನ್‌ (Lockdown) ನಿಂದಾಗಿ ದೇಶದ ಎಲ್ಲಾ ವಿಮಾನಯಾನ ಸಂಸ್ಥೆಗಳು ನಷ್ಟದಲ್ಲಿವೆ. ಹೆಚ್ಚಿನ ಕಂಪನಿಗಳಲ್ಲಿ ಹಣದ ಕೊರತೆಯಿದೆ, ಇದರಿಂದಾಗಿ ನೌಕರರ ವೇತನವನ್ನು ಕಡಿತಗೊಳಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ ದುಬಾರಿ ತೈಲ ಬೆಲೆಗಳ ಪರಿಣಾಮವು ಗ್ರಾಹಕರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ. ಮುಂದಿನ ದಿನಗಳಲ್ಲಿ ಹೊಸ ಬೆಲೆಗಳನ್ನು ಜಾರಿಗೆ ತರಬಹುದು ಎಂದು ನಿರೀಕ್ಷಿಸಲಾಗಿದೆ.

ಜೂನ್ 25 ರಿಂದ ದೇಶದಲ್ಲಿ ವಿಮಾನಯಾನಗಳನ್ನು ಷರತ್ತುಗಳೊಂದಿಗೆ ಪುನಃಸ್ಥಾಪಿಸಲಾಗಿದೆ ಮತ್ತು ಇದಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರವು ಮಾರ್ಗಸೂಚಿಗಳನ್ನು ಸಹ ನೀಡಿದೆ.

Trending News