ಕ್ಯಾನ್ಸರ್ ಕೂಡ ಗುಣವಾಗುವ ಶಕ್ತಿಯುತ ಹಣ್ಣು.. ದಿನಕ್ಕೆ ಒಂದು ಸೇವಿಸಿದರೂ ಸಾಕು ಬ್ಲಡ್ ಶುಗರ್ ಕಂಪ್ಲೀಟ್ ಕಂಟ್ರೋಲ್‌ಗೆ ಬರುತ್ತದೆ !
ಅತ್ತಿ ಹಣ್ಣು ಎಲ್ಲಡೆ ಸಿಗುವ ಸಾಮಾನ್ಯ ಹಣ್ಣಾಗಿದೆ. ಇದು ಮಧುಮೇಹವನ್ನು ದೂರ ಮಾಡುವ ಶಕ್ತಿ ಹೊಂದಿದೆ. ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ ಎತ್ತರದ ಅತ್ತಿ ಮರವನ್ನು ನೋಡಬಹುದು.
ಅತ್ತಿ ಹಣ್ಣುಗಳು ಆರೋಗ್ಯಕ್ಕೆ ಸಂಜೀವಿನಿಯಂತೆ ಕಾರ್ಯ ನಿರ್ವಹಿಸುತ್ತವೆ. ಗೊಂಚಲಿನ ರೀತಿಯಲ್ಲಿ ಬಿಡುವ ಅತ್ತಿ ಹಣ್ಣು ಅನೇಕ ರೋಗಗಳ ನಿವಾರಣೆ ಮಾಡುತ್ತವೆ. ಅತ್ತಿ ಹಣ್ಣು ಸೇವನೆ ಮಾಡಿದರೆ ಮುಟ್ಟಿನ ನೋವು ಕಡಿಮೆಯಾಗುತ್ತದೆ.
ಅತ್ತಿ ಹಣ್ಣಿನ ರಸವನ್ನು ಗೋಧಿ ಹಿಟ್ಟಿನಲ್ಲಿ ಬೆರೆಸಿ ಕೀಲು ನೋವಿನಿಂದ ಊದಿಕೊಂಡ ಜಾಗದಲ್ಲಿ ಹಚ್ಚಿದರೆ ನೋವು ಗುಣವಾಗುತ್ತದೆ. ಜೊತೆಗೆ ಊತ ಕೂಡ ಕಡಿಮೆಯಾಗುವುದು. ಅತ್ತಿ ಹಣ್ಣು ಸಧಿವಾತಕ್ಕೆ ರಾಮಬಾಣವಾಗಿದೆ.
ಅತ್ತಿ ಹಣ್ಣಿನಲ್ಲಿ ವಿಟಮಿನ್ ಬಿ 2 ಅಂಶ ಸಮೃದ್ಧವಾಗಿ ಸಿಗುತ್ತದೆ. ಇದನ್ನು ತಿನ್ನುವುದರಿಂದ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚುತ್ತದೆ. ಅತ್ತಿ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಇದರಲ್ಲಿ ಹುಳುಗಳಿದ್ದು, ಊದಿ ತಿನ್ನಬೇಕು.
ಅತ್ತಿ ಮರದ ತೊಗಟೆಯನ್ನು ಒಣಗಿಸಿ ನಯವಾದ ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಕುಡಿಯುತ್ತಾ ಬಂದರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತದೆ. ಅತ್ತಿ ಹಣ್ಣು ತಿನ್ನುವುದರಿಂದ ಮಧುಮೇಹ ಗುಣವಾಗುತ್ತದೆ.
ಅತ್ತಿ ಹಣ್ಣಿನ ಸೇವನೆಯಿಂದ ಕಣ್ಣುಗಳ ಆರೋಗ್ಯ ಸುಧಾರಿಸುತ್ತದೆ. ಇದು ದೃಷ್ಟಿ ದೋಷವನ್ನು ನಿವಾರಿಸುವ ಸಾಮರ್ಥ್ಯ ಹೊಂದಿದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.