ದೀಪಾವಳಿ ರಂಗೋಲಿ ಹಾಕುವಾಗ ಈ ವಿಚಾರಗಳ ಬಗೆ ಇರಲಿ ಗಮನ

Fri, 21 Oct 2022-5:06 pm,

ದೀಪಾವಳಿಯ ದಿನದಂದು  ಹಾಕುವ  ರಂಗೋಲಿಯನ್ನು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮೀ  ದೇವಿತನ್ನು ಸ್ವಾಗತಿಸಲು ಮನೆಯ ಹೊರಗೆ ಮತ್ತು ಒಳಗೆ ರಂಗೋಲಿಯನ್ನು ಬಿಡಿಸಲಾಗುತ್ತದೆ. ದೀಪಾವಳಿಯಂದು ಐಶ್ವರ್ಯ ಮತ್ತು ಅದೃಷ್ಟವನ್ನು ಹೆಚ್ಚಿಸುವ ರಂಗೋಲಿಯನ್ನು ಮನೆಯ ಯಾವ ಮೂಲೆಯಲ್ಲಿಬಿಡಿಸಬೇಕು ? ಅದರ ಧಾರ್ಮಿಕ ಮಹತ್ವವೇನು ಎಂಬುದರ ಕುರಿತು ತಿಳಿಯುವುದು ಮುಖ್ಯ

ರಂಗೋಲಿ ಎಂಬ ಪದವು 'ರಂಗ್' ಮತ್ತು 'ಅವಲ್ಲಿ' ಎಂಬ ಎರಡು ಪದಗಳಿಂದ  ರಚಿತವಾಗಿದೆ. ಅಂದರೆ - ಬಣ್ಣಗಳ ಸಾಲು. ಹಬ್ಬದ ಸಲುವಾಗಿ ಮನೆಯ ಒಳಗೆ ಮತ್ತು ಹೊರಗೆ ಹಲವಾರು ರೀತಿಯ ರಂಗೋಲಿಗಳನ್ನು  ಹಾಕಲಾಗುತ್ತದೆ. ದೀಪಾವಳಿಯಂದು ಕಮಲದ ವಿನ್ಯಾಸದೊಂದಿಗೆ ರಂಗೋಲಿಯನ್ನು  ಬಿಡಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.   

ರಂಗೋಲಿ ಬಿಡಿಸುವಾಗ ಹಿಟ್ಟು, ಅಕ್ಕಿ, ಅರಿಶಿನ, ಕುಂಕುಮ, ಹೂವುಗಳು ಮತ್ತು ಎಲೆಗಳನ್ನು ಬಳಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. 

ಲಕ್ಷ್ಮೀ ದೇವಿಯ ಸ್ಥಾನವೆಂದು ಪರಿಗಣಿಸಲಾದ ಕಮಲದ ರಂಗೋಲಿಯನ್ನು  ಹಾಕಿದರೆ ಅವಳು ಶೀಘ್ರದಲ್ಲೇ ಸಂತೋಷಪಡುತ್ತಾಳೆ. ವಾಸ್ತು ಪ್ರಕಾರ ದೀಪಾವಳಿಯ ದಿನದಂದು ಮನೆಯ ಮುಖ್ಯದ್ವಾರದಲ್ಲಿ ರಂಗೋಲಿ ಹಾಕಬೇಕು. ಈ ಸ್ಥಳದಲ್ಲಿ ರಂಗೋಲಿ ಮಾಡಲು ಕೆಂಪು, ಹಳದಿ, ಹಸಿರು, ಗುಲಾಬಿ, ಕಿತ್ತಳೆ ಬಣ್ಣಗಳನ್ನು ಬಳಸಬೇಕು. 

ವಾಸ್ತು ಪ್ರಕಾರ, ಈ ಬಣ್ಣಗಳನ್ನು ಬಳಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ರಂಗೋಲಿಗೆ ಕಪ್ಪು ಬಣ್ಣವನ್ನು ಬಳಸಬಾರದು.

ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link