ಆಧಾರ್ ಗೆ ಸಂಬಂಧಿಸಿದಂತೆ ಈ ಐದು ವಿಚಾರಗಳ ಬಗ್ಗೆ ನಿರ್ಲಕ್ಷ್ಯ ಬೇಡ
ಯುಐಡಿಎಐನಿಂದ ಕಾಲಕಾಲಕ್ಕೆ ಸಲಹೆಗಳನ್ನು ನೀಡಲಾಗುತ್ತದೆ. ಅವರ ಪ್ರಕಾರ, ಇ-ಆಧಾರ್ ಅನ್ನು ಡೌನ್ಲೋಡ್ ಮಾಡಲು ಇಂಟರ್ ನೆಟ್ ಕೆಫೆ ಅಥವಾ ಕಿಯೋಸ್ಕ್‌ನಲ್ಲಿ ಸಾರ್ವಜನಿಕ ಕಂಪ್ಯೂಟರ್ ಅನ್ನು ಎಂದಿಗೂ ಬಳಸಬಾರದು. ಉಚಿತ ವೈಫೈ ಅಥವಾ ಸಾರ್ವಜನಿಕ ವೈಫೈ ಬಳಸದಿರಲು ಪ್ರಯತ್ನಿಸಿ.
ಆಧಾರ್ ಒಟಿಪಿಯನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಇದು ವಂಚನೆಗೆ ಪ್ರಮುಖ ಕಾರಣವಾಗಬಹುದು. ವೈಯಕ್ತಿಕ ವಿವರಗಳನ್ನು ಯಾರಿಗೂ ನೀಡಬೇಡಿ. ಸಾಮಾನ್ಯವಾಗಿ, KYC ಅಪ್ಡೇಟ್ ಹೆಸರಿನಲ್ಲಿ, ವಂಚಕರು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ವೈಯಕ್ತಿಕ ವಿವರಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನುವುದು ನೆನೆಪಿರಲಿ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ಯಾವಾಗಲೂ ಆಧಾರ್‌ನಲ್ಲಿ ಅಪ್‌ಡೇಟ್ ಮಾಡಿ. ಆಧಾರ್ ಲಿಂಕ್ಡ್ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯೊಂದಿಗೆ ಯಾವುದೇ ಸಂದೇಹಗಳಿದ್ದಲ್ಲಿ, ಆಧಾರ್ ವೆಬ್‌ಸೈಟ್ https://resident.uidai.gov.in/verify-email-mobile ಗೆ ಭೇಟಿ ನೀಡುವ ಮೂಲಕ ಅದನ್ನು ತಕ್ಷಣವೇ ವೆರಿಫೈ ಮಾಡಿಕೊಳ್ಳಿ.
ಈಗ 16 ಅಂಕಿಯ ಆಧಾರ್ ಸಂಖ್ಯೆಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲ. ಬದಲಾಗಿ ನೀವು ವಿಐಡಿ (ವರ್ಚುವಲ್ ಐಡಿ) ಅಥವಾ ಮಾಸ್ಕ್ದ್ ಆಧಾರ್ ಅನ್ನು ಬಳಸಬಹುದು.
UIDAI ಎಂದಿಗೂ ಆಧಾರ್ OTP ಮಾಹಿತಿಗಾಗಿ ಫೋನ್, SMS ಅಥವಾ ಇಮೇಲ್ ಕಳುಹಿಸುವುದಿಲ್ಲ. ಹಾಗಾಗಿ ನಿಮಗೆ ಅಂತಹ ಸಂದೇಶ ಬಂದರೆ ಜಾಗರೂಕರಾಗಿರಿ.