e-Scooter Price Cut: 18,000 ರೂ.ವರೆಗೆ ಅಗ್ಗವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳು
FAME-II (Faster Adoption and Manufacturing of Electric Vehicles in India) ಯೋಜನೆಯಡಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಸಬ್ಸಿಡಿಯನ್ನು 50% ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದ್ವಿಚಕ್ರ ವಾಹನ ತಯಾರಕರಿಗೆ ನೀಡುವ ಸಬ್ಸಿಡಿಯನ್ನು ಪ್ರತಿ ವಾಹನಕ್ಕೆ ಪ್ರತಿ KWH ಗೆ 10,000 ರೂ.ಗಳಿಂದ ಕೆಡಬ್ಲ್ಯೂಎಚ್‌ಗೆ 15 ಸಾವಿರ ರೂ.ಗೆ ಸರ್ಕಾರ ಹೆಚ್ಚಿಸಿದೆ. ಇದಲ್ಲದೆ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪ್ರೋತ್ಸಾಹವನ್ನು ವಾಹನದ ವೆಚ್ಚದ 40 ಪ್ರತಿಶತದಷ್ಟು ಹೆಚ್ಚಿಸಲಾಗಿದೆ, ಇದು ಮೊದಲು 20 ಪ್ರತಿಶತದಷ್ಟಿತ್ತು.
FAME-II ನಲ್ಲಿ ಪಡೆದ ಸಬ್ಸಿಡಿಯ ನಂತರ, ಟಿವಿಎಸ್ ಮೋಟಾರ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆಯನ್ನು ಕಡಿಮೆ ಮಾಡಿದೆ. ಕಂಪನಿಯು ನೇರವಾಗಿ ಸ್ಕೂಟರ್‌ನ ಬೆಲೆಯನ್ನು 11,250 ರೂ. ಕಡಿತಗೊಳಿಸಿದೆ. ಐಕ್ಯೂಬ್‌ನ ಇತ್ತೀಚಿನ ಆವೃತ್ತಿಯ ಬೆಲೆ ದೆಹಲಿಯಲ್ಲಿ 100,777 ಮತ್ತು ಬೆಂಗಳೂರಿನಲ್ಲಿ 110,506 ರೂ. ಈ ಹಿಂದೆ ದೆಹಲಿಯಲ್ಲಿ 112,027 ರೂ. ಮತ್ತು ಬೆಂಗಳೂರಿನಲ್ಲಿ 121,756 ರೂ. ಆಗಿತ್ತು.
ಇದನ್ನೂ ಓದಿ- Piaggio One ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ತಿಳಿಯಿರಿ ಇದರ ವೈಶಿಷ್ಟ್ಯ
ಬೆಂಗಳೂರು ಮೂಲದ ಎಲೆಕ್ಟ್ರಿಕ್ ವೆಹಿಕಲ್ ಕಂಪನಿ ಅಥರ್ ಎನರ್ಜಿ ತನ್ನ ಸ್ಕೂಟರ್ ಅಥರ್ 450 ಎಕ್ಸ್ (Ather 450X) ಬೆಲೆಯನ್ನು ಕಡಿಮೆ ಮಾಡಿದೆ. ಕಂಪನಿಯು ಇದರ ಮೇಲೆ ಸುಮಾರು 14,500 ರೂ.ಗಳನ್ನು ಕಡಿಮೆ ಮಾಡಿದೆ. ಈಗ ಬೆಲೆ ಇಳಿಕೆಯ ನಂತರ ಬೆಂಗಳೂರಿನಲ್ಲಿ ಅಥರ್ 450 ಎಕ್ಸ್‌ನ ಹೊಸ ಎಕ್ಸ್‌ಶೋರೂಂ ಬೆಲೆ 1,44,500 ರೂ., ದೆಹಲಿಯಲ್ಲಿ ಇದರ ಬೆಲೆ 1,32,426 ರೂ. ಅದೇ ರೀತಿ ಬೆಂಗಳೂರಿನಲ್ಲಿ 450 ಪ್ಲಸ್‌ನ ಎಕ್ಸ್‌ಶೋರೂಂ ಬೆಲೆ 1,25,490 ರೂ., ದೆಹಲಿಯಲ್ಲಿ ಈಗ ಅದರ ಬೆಲೆ 1,33,416 ರೂ.ಗೆ ಇಳಿದಿದೆ.
ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಒಕಿನಾವಾ ಆಟೊಟೆಕ್ (Okinawa Autotech) ತನ್ನ ಸಂಪೂರ್ಣ ಉತ್ಪನ್ನಗಳ ಬಂಡವಾಳವನ್ನು ಕಡಿತಗೊಳಿಸಿದೆ ಎಂದು ಬುಧವಾರ ತಿಳಿಸಿದೆ. ಕಂಪನಿಯು ಇ-ಸ್ಕೂಟರ್‌ಗಳ ಬೆಲೆಯನ್ನು 7,209 ರಿಂದ 17,892 ರೂ.ಗೆ ಇಳಿಸಿದೆ. FAME II ನೀತಿಯ ನಂತರ ಇತ್ತೀಚೆಗೆ ಈ ಕಡಿತವನ್ನು ಮಾಡಲಾಗಿದೆ. ಕಂಪನಿಯ Praise+ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಈಗ 99,708 ರೂ.ಗೆ ಇಳಿದಿದೆ. ಅದು ಮೊದಲು 1,17,600 ರೂ. ಇತ್ತು. ಆದರೆ Praise Pro ಹೊಸ ಬೆಲೆ 76,848 ರೂ.ಗೆ ಇಳಿದಿದೆ, ಅದು ಮೊದಲು 84,795 ರೂಗಳಿಗೆ ಮಾರಾಟವಾಗಿತ್ತು, ಅಂದರೆ ಸಂಪೂರ್ಣ 7,947 ರೂ.ಗಳನ್ನು ಕಡಿತಗೊಳಿಸಲಾಗಿದೆ.