BREAKING NEWS

  • ರಾಜ್ಯದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಆಯ್ಕೆ!
  • ನೂತನ ಸಿಎಂ ಆಯ್ಕೆ ಬೆನ್ನೆಲೆ ಮೂರುವ 'ಡಿಸಿಎಂ' ಗಳ ಆಯ್ಕೆ

BMW S1000R Bike Launched In India: ಭಾರತೀಯ ಮಾರುಕಟ್ಟೆಗೆ S1000R ಬಿಡುಗಡೆ ಮಾಡಿದ BMW, ಇಲ್ಲಿದೆ ಈ ಸೂಪರ್ ಬೈಕ್ ವೈಶಿಷ್ಟ್ಯ ಹಾಗೂ ಬೆಲೆ ವಿವರ

BMW S1000R Bike Launched In India - ಜರ್ಮನಿಯ (Germany) ಐಶಾರಾಮಿ ವಾಹನ ತಯಾರಕ ಕಂಪನಿಯಾಗಿರುವ BMW Motorrad India ಮಂಗಳವಾರ ಭಾರತದಲ್ಲಿ 2021 S1000R ನೇಕೆಡ್ ಸ್ಪೋರ್ಟ್ಸ್ ಬೈಕ್ ಅನ್ನು 17,90,000  ರೂ. ಎಕ್ಸ್-ಷೋರೂಂ ಬೆಲೆಗೆ ಬಿಡುಗಡೆ ಮಾಡಿದೆ. ಕಂಪನಿ ಎಲ್ಲಾ ಭಾರತೀಯ ಮೊಟರಾಡ್ ಇಂಡಿಯಾ ಡೀಲರ್ ಶಿಪ್ ಬಳಿ ಈ ಹೊಸ ಮೋಟರ್ ಸೈಕಲ್  ಬುಕಿಂಗ್ ಆರಂಭಿಸಿದೆ. ಹಾಗಾದರೆ ಬನ್ನಿ ಈ ಸೂಪರ್ ಬೈಕ್ (Super Bike) ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ.

ಇದನ್ನೂ ಓದಿ- Maruti, Hyundai, Mahindra ಲಾಂಚ್ ಮಾಡುತ್ತಿದೆ ಈ 6 ಅದ್ಬತ ಕಾರು, ವೈಶಿಷ್ಟ್ಯ ಬೆಲೆ ಎಷ್ಟಿರಲಿದೆ ಗೊತ್ತಾ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

1 /7

1. ಪಾವರ್ ಪ್ಯಾಕ್ದ್ ರೋಡ್ ಸ್ಟರ್ ರೂಪದ ಡಿಸೈನ್ - ಈ ಕುರಿತು ಹೇಳಿಕೆ ನೀಡಿರುವ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ವಿಕ್ರಮ್ ಪವಾಹ್, “ಎಲ್ಲಾ ಹೊಸ ಬಿಎಂಡಬ್ಲ್ಯು ಎಸ್ 1000 ಆರ್ ನ ಎರಡನೇ ತಲೆಮಾರಿನ ಮಾದರಿಗಳನ್ನು ಪವರ್-ಪ್ಯಾಕ್ಡ್ ರೋಡ್ಸ್ಟರ್ ಆಗಿ ವಿನ್ಯಾಸಗೊಳಿಸಲಾಗಿದೆ. ಇದು ಅತ್ಯುತ್ತಮ ಸವಾರಿ ಡೈನಾಮಿಕ್ಸ್, ಗರಿಷ್ಠ ಸುರಕ್ಷತೆ ಮತ್ತು ದೈನಂದಿನ ಪ್ರಾಯೋಗಿಕತೆಯೊಂದಿಗೆ ಅಥ್ಲೆಟಿಕ್ ಅನುಭವ ನೀಡುತ್ತದೆ. ಭಾರತದಲ್ಲಿ ಸವಾರಿ ಉತ್ಸಾಹಿಗಳಿಗೆ ಮತ್ತೊಂದು ಅತ್ಯುತ್ತಮ ಉತ್ಪನ್ನವನ್ನು ಪರಿಚಯಿಸಲು ನಮಗೆ ಅತೀವ ಸಂತಸವಾಗುತ್ತಿದೆ' ಎಂದಿದ್ದಾರೆ.

2 /7

2. ಅತ್ಯುತ್ತಮ ಕಲರ್ ಆಪ್ಶನ್ ಗಳು - BMW S1000R ಬೈಕ್ ಅನ್ನು ಹಲವಾರು ಕಲರ್ ಆಯ್ಕೆಗಳಲ್ಲಿ ಪ್ರಸ್ತುತಪಡಿಸಲಾಗಿದೆ. ಬೇಸಿಕ್ ರೇಸಿಂಗ್ ರೆಡ್ ನಾನ್-ಮೋಟರ್ ಸೈಕ್ಲಿಕ್ ಕಲರ್ ಅನ್ನು ಹೊರತುಪಡಿಸಿ, ಬೈಕ್ ನ ಸ್ಟೈಲ್ ಸ್ಪೋರ್ಟ್ಸ್ ಆಪ್ಸನ್ ಅನ್ನು ಹಾಕೆನಹಾಯೇಮ್ ಸಿಲ್ವರ್ ಮೆಟ್ಯಾಲಿಕ್ ನ ಜವರ್ದಸ್ಟ್ ಶೆಡ್ ಜೊತೆಗೆ ಲಾಂಚ್ ಮಾಡಲಾಗಿದೆ. ಈ ಸೂಪರ್ ಬೈಕ್ ನಲ್ಲಿ ರಿಯರ್ ಫ್ರೇಮ್ ಸೆಕ್ಷನ್ ಹಾಗೂ ಇಂಜಿನ್ ನ ಸೈಡ್ ಕವರ್ ಅನ್ನು ಮ್ಯಾಟ್ ಕಾಪರ್ ಮೆಟ್ಯಾಲಿಕ್ ಕಂಪೋನೆಂಟ್ ಜೊತೆಗೆ ಗ್ರೇ ಏನೋಡೈಸ್ಡ್ ನೊಂದಿಗೆ ಪ್ರಸ್ತುತಪಡಿಸಲಾಗಿದ್ದು, ಇದು ಈ ರೋಡ್ಸ್ಟರ್ ನ ಟೆಕ್ನಿಕಲ್ ಹೈಲೈಟ್ಸ್ ಅನ್ನು ಎತ್ತಿ ತೋರಿಸುತ್ತದೆ. ಇದರಲ್ಲಿ ನಿಮಗೆ ಒಂದು ಎಂ ಮೋಟರ್ಸ್ಪೋರ್ಟ್ಸ್ ಪೇಂಟ್ ಫಿನಿಶ್ ಕೂಡ ಸಿಗುತ್ತದ್ದು, ಇದು ಸ್ಟೈಲ್ ಸ್ಪೋರ್ಟ್ ಹಾಗೂ ಎಂ ಪ್ಯಾಕೇಜ್ ನೊಂದಿಗೆ ಸಿಗುತ್ತಿದೆ.

3 /7

3. ಸ್ಪರ್ಧೆ - ಭಾರತೀಯ ಸ್ಪೀಕ್ BMW S1000R ಮೋಟರ್ ಸೈಕಲ್, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಮಾರಾಟ ಮಾಡಲಾಗುತ್ತಿರುವ ಯುನಿಟ್ ನಂತೆಯೇ ಇದೆ.  BMW S1000R ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ ದುಕಾತಿ ಸ್ಟ್ರೀಟ್ ಫೈಟರ್ ವಿ4 (Dukati Street Fighter V4) ನೆಕೆಡ್ ಸ್ಪೋರ್ಟ್ಸ್ ಬೈಕ್ ನೊಂದಿಗೆ ಸ್ಪರ್ಧಿಸಲಿದೆ.

4 /7

4. ಹೊಸ ಸ್ಟೈಲ್ ಮತ್ತು ಲುಕ್ - ಹೊಸ  BMW S1000R ತನ್ನ ಹಿಂದಿನ ಆವೃತ್ತಿಯ ಹೋಲಿಕೆಯಲ್ಲಿ ಸಾಕಷ್ಟು ಮಾಡಿಫಿಕೇಶನ್ ಗಳ ಮೂಲಕ ಬಿಡುಗಡೆಗೊಂಡಿದೆ. ಈ ಬೈಕ್ ನ ಎಕ್ಸ್ಟೀರಿಯರ್ ತುಂಬಾ ಸ್ಟೈಲಿಶ್ ಆಗಿದೆ. ಈ ಬೈಕ್ ನಲ್ಲಿ ಅಪ್ಡೇಟೆಡ್ ಇಂಜಿನ್ ಹಾಗೂ ಸಾಕಷ್ಟು ಎಲೆಕ್ಟ್ರಿಕ್ ವೈಶಿಷ್ಟ್ಯಗಳನ್ನು ನೀಡಲಾಗಿದೆ. ಹೊಸ ಬೈಕ್ ನಲ್ಲಿ 6.5 ಇಂಚಿನ ಒಂದು TFT ಮಲ್ಟಿಫಂಕ್ಷನಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ನೀಡಲಾಗಿದೆ.

5 /7

5. ಬೈಕ್ ನ ರೇಂಜ್ (BMW S1000R Bike Price In India) ಎಷ್ಟಿದೆ? - ಆಲ್ ನ್ಯೂ  BMW S1000R ಬೈಕ್ ಅನ್ನು Standard, Pro, Pro M Sport ಎಂಬ ಮೂರು ಟ್ರಿಮ್ಸ್ ಗಳಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿ ಬೇಸಿಕ್  BMW S1000R ಟ್ರಿಮ್ ಬೆಲೆಯನ್ನು 17.90 ಲಕ್ಷ ರೂ. Pro ವೇರಿಯಂಟ್ ಅನ್ನು 19.75 ಲಕ್ಷ ರೂ. ಹಾಗೂ Pro M Sport ಬೆಲೆಯನ್ನು 22.50 ಲಕ್ಷ ರೂ. ನಿಗದಿಪಡಿಸಿದೆ. ಇವು ಈ ಬೈಕ್ ನ ಎಕ್ಸ್ ಷೋರೂಂ ಬೆಲೆಗಳಾಗಿವೆ.

6 /7

6. ಇಂಜಿನ್ ಹಾಗೂ ಪವರ್ -  ಹೊಸ  BMW S1000R ಬೈಕ್ ನಲ್ಲಿ ಯುರೋ5 /BS-6 ಸ್ಟ್ಯಾಂಡರ್ಡ್ ಹೊಂದಿರುವ 999 ಸಿಸಿ ಇನ್ಕಾಲಿನ್ 4-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಇಂಜಿನ್ ನೀಡಲಾಗಿದೆ. ಈ ಇಂಜಿನ್ 11,000 rpm ಮೇಲೆ 165 bhp ಗಳಷ್ಟು ಗರಿಷ್ಟ ಪಾವರ್ ಹಾಗೂ 9,250 rpm ಮೇಲೆ 114 Nm ಗಳಷ್ಟು ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಇಂಜಿನ್ ಗೆ 6 ಸ್ಪೀಡ್ ಗಿಯರ್ ಬಾಕ್ಸ್ ನೀಡಲಾಗಿದೆ.

7 /7

7. ಒಟ್ಟು ನಾಲ್ಕು ಡ್ರೈವಿಂಗ್ ಮೋಡ್ ಗಳನ್ನು ನೀಡಲಾಗಿದೆ - ಈ ಬೈಕ್ ನಲ್ಲಿ Rain, Road, Dynamic ಹಾಗೂ Dynamic Pro ಎಂಬ ನಾಲ್ಕು ಡ್ರೈವಿಂಗ್ ಮೋಡ್ ಗಳನ್ನು ನೀಡಲಾಗಿದೆ. ಈ ಡ್ರೈವಿಂಗ್ ಮೋಡ್ ಗಳಿಗೆ ಇಂಜಿನ್ (ಥ್ರಟಲ್), ಇಂಜಿನ್ ಬ್ರೇಕ್, ಟ್ರ್ಯಾಕ್ಶನ್ ಕಂಟ್ರೋಲ್, ವೀಲ್ ಕಂಟ್ರೋಲ್, ಎಬಿಎಸ್ ಹಾಗೂ ಎಬಿಎಸ್ ಪ್ರೊಗಳಂತಹ ಪೆರ್ಫಾರ್ಮ್ ಮತ್ತು ಸೇಫ್ಟಿಗಳಂತಹ ವೈಶಿಷ್ಟ್ಯಗಳಿಗೆ ಕಾನ್ಫಿಗರ್ ಮಾಡಲಾಗಿದೆ. 

You May Like

Sponsored by Taboola