ಅತಿಯಾದ ಅರಿಶಿನದ ಬಳಕೆಯೂ ಆರೋಗ್ಯಕ್ಕೆ ಅಪಾಯಕಾರಿ
ಅರಿಶಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಗಂತ ಇದನ್ನು ಅತಿಯಾಗಿ ಬೆಳೆಸಿದರೆ ಇದು ಆರೋಗ್ಯದ ಮೇಲೆ ಕೆಲವು ಕೆಟ್ಟ ಪರಿಣಾಮಗಳನ್ನು ಉಂಟು ಮಾಡಬಹುದು. ಅವುಗಳೆಂದರೆ...
ಉದರ ಬಾಧೆ: ಅತಿಯಾದ ಅರಿಶಿನದ ಬಳಕೆಯೂ ಅದರ ಸೂಕ್ಷ್ಮತೆಯ ಕಾರಣದಿಂದಾಗಿ ಹೊಟ್ಟೆಯ ಕಿರಿಕಿರಿಯನ್ನು ಉಂಟು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.
ಗ್ಯಾಸ್ಟ್ರಿಕ್ : ದೈನಂದಿನ ಆಹಾರದಲ್ಲಿ ಹೆಚ್ಚಾಗಿ ಅರಿಶಿನ ಬಳಸುವುದರಿಂದ ಇದು ಎದೆಯುರಿ, ಆಮ್ಲೀಯತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ವಾಕರಿಕೆ: ಅಧಿಕ ಪ್ರಮಾಣದಲ್ಲಿ ಅರಿಶಿನ ಪೂರಕಗಳ ಸೇವನೆಯಿಂದ ವಾಕರಿಕೆ ಸಮಸ್ಯೆ ಕಾಡಬಹುದು.
ರಕ್ತಸ್ರಾವದ ಅಸ್ವಸ್ಥತೆ: ಅರಿಶಿನವು ಹೆಪ್ಪುಗಟ್ಟುವಿಕೆಯ ವಿರೋಧಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ರಕ್ತಸ್ರಾವದ ಅಸ್ವಸ್ಥತೆಯಿರುವ ಜನರು ಹೆಚ್ಚು ಅರಿಶಿನ ಸೇವಿಸದಂತೆ ಸಲಹೆ ನೀಡಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.