ಕೈಯಿಂದ ಈ ಐದು ವಸ್ತುಗಳು ಬೀಳುವುದು ಅಶುಭ ! ಜೀವನದಲ್ಲಿ ಬಿರುಗಾಳಿ ಏಳುವ ಮುನ್ಸೂಚನೆ .!
ಜ್ಯೋತಿಷ್ಯ ಶಾಸ್ತ್ರದಲ್ಲಿ, ಹಾಲು ಚೆಲ್ಲುವುದು ಅಥವಾ ಕುದಿಯುವ ಸಮಯದಲ್ಲಿ ಚೆಲ್ಲುವುದು ಅಶುಭ . ಹಾಲಿಗೂ ಚಂದ್ರನಿಗೂ ನೇರ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಈ ಹಿನ್ನೆಲೆಯಲ್ಲಿ ಹಾಲು ಚೆಲ್ಲಿದರೆ ಅದು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು ಎನ್ನುವುದನ್ನು ಸೂಚಿಸುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಆಹಾರವನ್ನು ಬಡಿಸುವಾಗ ಜಾಗರೂಕರಾಗಿರಬೇಕು. ಆಹಾರದ ತಟ್ಟೆಯನ್ನು ಕೈಯಿಂದ ಬೀಳಿಸುವುದು ಅಶುಭ. ಆಹಾರದ ತಟ್ಟೆ ಕೈಯಿಂದ ಬೀಳುತ್ತದೆ ಎಂದರೆ ನಕಾರಾತ್ಮಕತೆ ಮತ್ತು ಬಡತನ ಮನೆಗೆ ಕಾಲಿಡಲಿದೆ ಎಂದರ್ಥ.
ಪೂಜೆ ಮಾಡುವಾಗ, ಅನೇಕ ಬಾರಿ ಜನರು ತಮ್ಮ ಕೈಯಿಂದ ತಟ್ಟೆಯನ್ನು ಬೀಳಿಸಿಕೊಳ್ಳುತ್ತಾರೆ. ಹೀಗಾದಾಗ ದೇವರ ಕೃಪೆ ಕಡಿಮೆಯಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತದೆ ಜ್ಯೋತಿಷ್ಯ.
ಎಣ್ಣೆಯನ್ನು ಬಳಸುವಾಗ ವ್ಯಕ್ತಿ ಯಾವಾಗಲೂ ಜಾಗರೂಕರಾಗಿರಬೇಕು. ಎಣ್ಣೆ ಬೀಳುವುದು ಅಶುಭ ಸಂಕೇತವನ್ನು ಸೂಚಿಸುತ್ತದೆ. ವ್ಯಕ್ತಿಯ ಕೈಯಿಂದ ಪದೇ ಪದೇ ಎಣ್ಣೆ ಕೆಳಗೆ ಬೀಳುತ್ತಿದ್ದರೆ, ಜೀವನದಲ್ಲಿ ಏನಾದರೂ ದೊಡ್ಡ ಸಮಸ್ಯೆ ಬರಲಿದೆ ಎಂದರ್ಥ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೈಯಿಂದ ಉಪ್ಪು ಬೀಳುವುದನ್ನು ಅಶುಭವೆಂದು ಹೇಳಲಾಗುತ್ತದ. ಯಾರ ಕೈಯ್ಯಿಂದ ಉಪ್ಪು ಪದೇ ಪದೇ ಕೆಳಗೆ ಬೀಳುತ್ತಿರುತ್ತದೆಯೋ ಅವರ ಜಾತಕದಲ್ಲಿ ಶುಕ್ರ ಮತ್ತು ಚಂದ್ರ ದುರ್ಬಲರಾಗಿದ್ದಾರೆ ಎನ್ನಲಾಗುತ್ತದೆ. ಈ ಕಾರಣದಿಂದಾಗಿ ವ್ಯಕ್ತಿಯು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು.
(Disclaimer: ಈ ಲೇಖನವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಅದನ್ನು ಖಚಿತಪಡಿಸುವುದಿಲ್ಲ.)