ಖ್ಯಾತ ನಟಿಗೆ ಸಿನಿರಂಗದಿಂದ ಬ್ಯಾನ್ ಮಾಡಿದ ನಿರ್ಮಾಪಕರ ಸಂಘ
Sandra Thomas: ನಟಿ ಸಂದ್ರಾ ಥಾಮಸ್ ಅವರನ್ನು ಮಲಯಾಳಂ ಚಿತ್ರರಂಗದ ನಿರ್ಮಾಪಕರ ಸಂಘವು ಬ್ಯಾನ್ ಮಾಡಿದೆ. ಸಂದ್ರಾ ಥಾಮಸ್ ಅಶಿಸ್ತು ತೋರಿದ್ದಾರೆಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ನಿರ್ಮಾಪಕರ ಸಂಘ ಇಂಥ ನಿರ್ಧಾರ ತೆಗೆದುಕೊಂಡಿದೆ.
ನಟಿ, ನಿರ್ಮಾಪಕಿ ಸಂದ್ರಾ ಥಾಮಸ್ ಅವರನ್ನು ಸಿನಿರಂಗದಿಂದ ಬ್ಯಾನ್ ಮಾಡಿ ನಿರ್ಮಾಪಕರ ಸಂಘ ಆದೇಶ ಹೊರಡಿಸಿದೆ. ಶಿಸ್ತು ಉಲ್ಲಂಘಿಸಿದ ಆರೋಪದ ಹಿನ್ನೆಲೆ ಸಂದ್ರಾ ಥಾಮಸ್ ಅವರನ್ನು ನಿಷೇಧಿಸಿದೆ.
ಹೇಮಾ ಕಮಿಟಿ ವರದಿ ಬಳಿಕ ನಟಿ ಸಂದ್ರಾ ಥಾಮಸ್, ಕೇರಳ ಫಿಲ್ಮ್ಂ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಹಾಗೂ ಇತರೆ ಕೆಲವು ಮಲಯಾಳಂ ಚಿತ್ರರಂಗದ ಸಂಘ-ಸಂಸ್ಥೆಗಳ ಬಗ್ಗೆ ಹಲವು ಆರೋಪಗಳನ್ನು ಮಾಡಿದ್ದರು
ಹೇಮಾ ಸಮಿತಿ ವರದಿ ಬಿಡುಗಡೆಯಾದ ನಂತರ ನಿರ್ಮಾಪಕರ ಸಂಘ ನಟಿ ಸಂದ್ರಾ ಥಾಮಸ್ ಬಳಿ ಸಂಘಟನೆ ವಿರುದ್ಧ ಟೀಕಿಸಿದ ವಿಚಾರವಾಗಿ ವಿವರಣೆ ಕೇಳಿತ್ತು. ಆದರೆ ನಟಿ ಸಂದ್ರಾ ಥಾಮಸ್ ಕೊಟ್ಟ ವಿವರಣೆ ಈ ಅತೃಪ್ತಿಕರವಾಗಿದೆ ಹೇಳಿ ಶೋಕಾಸ್ ನೋಟಿಸ್ ಸಹ ನೀಡಿತ್ತು.
ಈಗ ನಿರ್ಮಾಪಕರ ಸಂಘದ ಕಾರ್ಯದರ್ಶಿ ರಾಜೇಶ್, ಸಂದ್ರಾ ಥಾಮಸ್ ಅವರನ್ನು ಬ್ಯಾನ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. 1991 ರಿಂದಲೂ ಮಲಯಾಳಂ ಚಿತ್ರರಂಗದಲ್ಲಿ ನಟಿಯಾಗಿ ಹಾಗೂ ನಿರ್ಮಾಪಕಿಯಾಗಿ ಸಂದ್ರಾ ಥಾಮಸ್ ಗುರುತಿಸಿಕೊಂಡಿದ್ದಾರೆ.