ನಮ್ಮ ಮೆಟ್ರೋಗೆ ಧ್ವನಿ ಆಗಿದ್ದ ಅಪರ್ಣಾ ಅವರ ಪತಿ ಯಾರು ಗೊತ್ತಾ? ನಿರೂಪಕಿಯ ಯಶಸ್ವಿ ಜರ್ನಿಯಲ್ಲಿ ಅವರದ್ದೇ ಬಹುಪಾಲು!!
ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ ಕ್ಯಾನ್ಸರ್ ಕಾಯಿಲೆಯಿಂದ ನಮ್ಮನ್ನೇಲ್ಲ ಅಗಲಿದ್ದಾರೆ.. ಈ ವಿಚಾರ ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ..
ಬರೀ ನಿರೂಪಕಿ ಮಾತ್ರವಲ್ಲದೇ ಸಿನಿಮಾ, ಕಿರುತೆರೆಯಲ್ಲೂ ಮಿಂಚಿದ್ದ ಅಪರ್ಣಾ ಅವರು ತಮ್ಮ ಬನಶಂಕರಿ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ..
ತಮ್ಮ ಅದ್ಭುತ ನಿರೂಪಣಾ ಶೈಲಿಯಿಂದ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಅಪರ್ಣಾ ಅವರ ಆಂಕರಿಂಗ್ ಇಲ್ಲವಾದರೇ ಚಿತ್ರರಂಗದ ಅಥವಾ ರಾಜಕೀಯ ಕಾರ್ಯಕ್ರಮಗಳು ಅಪೂರ್ಣ ಎನ್ನಿಸುತ್ತಿದ್ದವು.
ಇನ್ನು ನಿರೂಪಕಿ ಅಪರ್ಣಾ ಅವರ ಪತಿಯ ಹೆಸರು ನಾಗೇಶ್ ವಸ್ತಾರೆ... ವೃತ್ತಿಯಲ್ಲಿ ಇವರು ಆರ್ಕಿಟೆಕ್ಟ್ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡಿದ್ದಾರೆ.. ಕಥೆ, ಕಾದಂಬರಿ ಹೀಗೆ ಕನ್ನಡ ಸಾಹಿತ್ಯದಲ್ಲಿ ಗುರುತಿಸಿಕೊಂಡಿದ್ದಾರೆ..
ನಾಗರಾಜ ರಾಮಸ್ವಾಮಿ ವಸ್ತಾರೆ ಅವರ ಹೆಸರಿನಲ್ಲಿ ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಅಂಕರಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಅಲ್ಲದೇ ನಾಗರಾಜ ರಾಮಸ್ವಾಮಿ ವಸ್ತಾರೆ ಅವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.