Weight Loss: ಬೆಲ್ಲಿ ಫ್ಯಾಟ್ ಬೆಣ್ಣೆಯಂತೆ ಕರಗಿಸಲು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಈ 5 ಪಾನೀಯ ಸೇವಿಸಿ
ಪ್ರಸ್ತುತ ಕಾಲಮಾನದಲ್ಲಿ ತೂಕ ಇಳಿಕೆ ಯಾವುದೇ ದೊಡ್ಡ ಸವಾಲಿಗಿಂತಲೂ ಕಡಿಮೆಯಿಲ್ಲ.
ಒಂದೊಮ್ಮೆ ದೇಹದ ತೂಕ ಇಳಿಕೆಯಾದರೂ ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸುವುದು ಕಬ್ಬಿಣದ ಕಡಲೆಯಂತೆ.
ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಐದು ಬಗೆಯ ಪಾನೀಯಗಳನ್ನು ರೂಢಿಸಿಕೊಳ್ಳುವುದರಿಂದ ಹೊಟ್ಟೆಯ ಫ್ಯಾಟ್ ಸಲೀಸಾಗಿ ಕರಗುತ್ತೆ.
ವಿಟಮಿನ್ಗಳು, ಉತ್ಕರ್ಷಣ ನಿರೋಧಕಗಳಿದ್ನ ಸಮೃದ್ಧವಾಗಿರುವ ನಿಂಬೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಹೊಟ್ಟೆಯಲ್ಲಿ ಶೇಖರಣೆಯಾಗಿರುವ ಬೊಜ್ಜನ್ನು ಕರಗಿಸಲು ದಿವ್ಯೌಷಧವಾಗಿ ಕಾರ್ಯ ನಿರ್ವಹಿಸುತ್ತದೆ.
ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಚಯಾಪಚಯ ಹೆಚ್ಚಾಗಿ, ಹೆಚ್ಚಿನ ಕ್ಯಾಲೋರಿಗಳನ್ನು ಸುಡಲು ಸಹಕಾರಿ ಆಗಲಿದೆ.
ಬೆಳಿಗ್ಗೆ ನಾರ್ಮಲ್ ಟೀ ಕುಡಿಯುವುದಕ್ಕಿಂತ ಶುಂಠಿ ಟೀ ಕುಡಿಯುವುದರಿಂದ ಉದರದ ಆರೋಗ್ಯ ಸುಧಾರಿಸುವುದರ ಜೊತೆಗೆ ಇದು ತೂಕವನ್ನು ಕಳೆದುಕೊಳ್ಳಲು ಮುಖ್ಯವಾಗಿ ಬೆಲ್ಲಿ ಫ್ಯಾಟ್ ಕರಗಿಸಲು ಪ್ರಯೋಜನಕಾರಿ ಆಗಿದೆ.
ಒಂದು ಲೋಟ ಬಿಸಿ ನೀರಿಗೆ ಒಂದು ಸ್ಪೂನ್ ಆಪಲ್ ಸೈಡರ್ ವಿನೆಗರ್ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ದೇಹದಲ್ಲಿ ಅಧಿಕವಾಗಿರುವ ಕೊಬ್ಬನ್ನು ಕರಗಿಸಲು ತುಂಬಾ ಸಹಕಾರಿ ಆಗಿದೆ.
ಎರಡು ಲೋಟ ನೀರಿಗೆ ಎರಡು ಸ್ಪೂನ್ ಮೆಂತ್ಯ ಹಾಕಿ ಅದು ಅರ್ಧ ಆಗುವವರೆಗೂ ಕುದಿಸಿ ಶೋಧಿಸಿ ಕುಡಿಯುತ್ತಾ ಬಂದರೆ ಕೆಲವೇ ದಿನಗಳಲ್ಲಿ ಹೊಟ್ಟೆಯ ಫ್ಯಾಟ್ ಕರಗಿ ಸ್ಲಿಮ್ ಆದ ಬಳುಕುವ ಸೊಂಟ ನಿಮ್ಮದಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.