ತಮ್ಮ ಐಪಿಎಲ್ ಫ್ರಾಂಚೈಸಿಯಿಂದ ಒಂದೇ ಒಂದು ಬಾರಿಯೂ ಬಿಡುಗಡೆಯಾಗದ ಐವರು ಲೆಜೆಂಡ್‌ಗಳು! ಇವರಿದ್ರೇನೇ ಆ ತಂಡಕ್ಕೆ ಗೌರವವಂತೆ, ಬೆಲೆಯಂತೆ...

Tue, 29 Oct 2024-2:47 pm,

IPL 2025ರ ಮೆಗಾ ಹರಾಜು ಈ ವರ್ಷದ ಕೊನೆಯಲ್ಲಿ ನಡೆಯಲಿದೆ. ಇದು ಐಪಿಎಲ್‌ನ ಐದನೇ ಮೆಗಾ ಹರಾಜು. ಇದಕ್ಕೂ ಮೊದಲು 2011, 2014, 2018 ಮತ್ತು 2022 ರ ಸೀಸನ್‌ಗಳಿಗೆ ಹರಾಜು ನಡೆಸಲಾಗಿತ್ತು. ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು, ಹೆಚ್ಚಿನ ಆಟಗಾರರನ್ನು ಬಿಡುಗಡೆ ಮಾಡಿ, ಕೆಲವು ಆಟಗಾರರನ್ನು ಉಳಿಸಿಕೊಳ್ಳುತ್ತವೆ. ಅಂದಹಾಗೆ ಇದುವರೆಗೆ ನಡೆದ 16 ಸೀಸನ್‌ಗಳಲ್ಲಿ ಕೆಲವೇ ಕೆಲವು ಆಟಗಾರರು ಮಾತ್ರ ಒಂದು ಬಾರಿಯೂ ರಿಲೀಸ್‌ ಆಗಿಲ್ಲ.

ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್‌ ಪರವೇ ಮೊದಲಿನಿಂದಲೂ ಆಡುತ್ತಿದ್ದಾರೆ ಎಂದು ಕೆಲವರು ಭಾವಿಸಿರಬಹುದು. ಆದರೆ ಅದಕ್ಕೂ ಮೊದಲು ಡೆಕ್ಕನ್ ಚಾರ್ಜಸ್‌ ತಂಡದ ಭಾಗವಾಗಿದ್ದರು. ಅಲ್ಲಿಂದ ರಿಲೀಸ್‌ ಆದ ಬಳಿಕ ಮುಂಬೈ ಸೇರಿದರು.

ಜಸ್ಪ್ರೀತ್‌ ಬುಮ್ರಾ: ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ಪರ ಮಾತ್ರ ಆಡಿದ್ದಾರೆ. ಆದರೆ 2013 ರಲ್ಲಿ ಒಂದು ಬಾರಿ ಅವರನ್ನು ರಿಲೀಸ್‌ ಮಾಡಿದ್ದಾದರೂ, ಆ ನಂತರ ಅದೇ ತಂಡ ಅವರನ್ನು ಮತ್ತೆ ಹರಾಜಿನಲ್ಲಿ ಖರೀದಿಸಿತು.

ವಿರಾಟ್ ಕೊಹ್ಲಿ: ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದಾರೆ. 2008 ರಲ್ಲಿ, ಅವರನ್ನು 12 ಲಕ್ಷ ರೂಪಾಯಿಗೆ ತಂಡಕ್ಕೆ ಸೇರಿಸಲಾಯಿತು. ಅಲ್ಲಿಂದ ಇದೇ ತಂಡದಲ್ಲಿ ಆಡುತ್ತಿದ್ದಾರೆ. ಒಂದೇ ತಂಡದ ಪರವಾಗಿ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ಆಟಗಾರ ಕೊಹ್ಲಿ.

ಮಹೇಂದ್ರ ಸಿಂಗ್ ಧೋನಿ: ಧೋನಿ ಕೂಡ ಸಿಎಸ್‌ಕೆಯಿಂದ ಬಿಡುಗಡೆಯಾಗಿಲ್ಲ. 2008ರಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಸೇರಿದಾಗ ಅವರಿಗೆ 6 ಕೋಟಿ ರೂ. ಸಂಭಾವನೆ ನೀಡಲಾಗಿತ್ತು. ಈ ಫ್ರಾಂಚೈಸಿಯೊಂದಿಗೆ 15 ವರ್ಷಗಳ ಕಾಲ ಕ್ರಿಕೆಟ್ ಆಡಿದ್ದಾರೆ. ರೈಸಿಂಗ್ ಪುಣೆ ಸೂಪರ್ ಜೈಂಟ್ಸ್‌ ಪರ ಎರಡು ಋತುಗಳನ್ನು ಆಡಿದ್ದು, ಆದರೆ ಎಂದಿಗೂ ತಂಡದಿಂದ ಬಿಡುಗಡೆಯಾಗಲಿಲ್ಲ. 2018 ರಲ್ಲಿ ಅವರು ಮತ್ತೆ ಚೆನ್ನೈ ಸೂಪರ್ ಕಿಂಗ್ಸ್‌ʼಗೆ ಮರಳಿದರು.

ಸುನಿಲ್ ನರೈನ್: ಸುನಿಲ್ ನರೈನ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಕೇವಲ ಒಂದು ತಂಡಕ್ಕಾಗಿ ಆಡಿದ್ದು,ಎಂದಿಗೂ ಬಿಡುಗಡೆಯಾಗಲಿಲ್ಲ. ನರೈನ್ 2012ರಲ್ಲಿ ಕೆಕೆಆರ್ ಸೇರಿದ್ದರು. ಈ ಆಲ್ ರೌಂಡರ್ ಕೆಕೆಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಅತ್ಯಂತ ಮೌಲ್ಯಯುತ ಆಟಗಾರ ಎಂದು ಹೆಸರಿಸಲ್ಪಟ್ಟ ಏಕೈಕ ಆಟಗಾರ ಎಂದರೆ ಅದು ಇವರೇ.

ರಿಷಬ್ ಪಂತ್: ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್ ಅವರ ಐಪಿಎಲ್ ವೃತ್ತಿಜೀವನವು 9 ವರ್ಷಗಳಾಗಿರಬಹುದು. ಆದರೆ ತವರು ತಂಡ ಡೆಲ್ಲಿ ಕ್ಯಾಪಿಟಲ್ಸ್‌ ಪರವಷ್ಟೇ ಇದುವರೆಗೆ ಆಡಿದ್ದಾರೆ ಮತ್ತು ಫ್ರಾಂಚೈಸಿ ಅವರನ್ನು ಬಿಡುಗಡೆ ಮಾಡಿಲ್ಲ.

ಸಚಿನ್ ತೆಂಡೂಲ್ಕರ್: ಸಚಿನ್ ತೆಂಡೂಲ್ಕರ್ ಐಪಿಎಲ್ ಆರಂಭಿಕ ಋತುವಿನಲ್ಲಿ ಭಾಗವಹಿಸಿದ್ದರು.  2008 ರಿಂದ 2013 ರವರೆಗೆ ಈ ಲೀಗ್‌ನ ಭಾಗವಾಗಿದ್ದರು. ಈ ಎಲ್ಲಾ ವರ್ಷಗಳಲ್ಲಿ ಮುಂಬೈ ಇಂಡಿಯನ್ಸ್‌ʼನೊಂದಿಗೆ ಸಂಬಂಧ ಹೊಂದಿದ್ದು, ಈ ತಂಡ ಅವರನ್ನು ಬಿಡುಗಡೆ ಮಾಡಲೇ ಇಲ್ಲ. ಅಷ್ಟೇ ಅಲ್ಲದೆ, ನಿವೃತ್ತಿಯ ನಂತರವೂ ಅವರು ತಂಡದೊಂದಿಗೆ ಸಂಬಂಧ ಹೊಂದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link