ಹಲ್ಲುಗಳಲ್ಲಿ ಅಂಟಿ ಕುಳಿತಿರುವ ಹಳದಿ ಕಲೆ ತೆಗೆಯಲು ಈ ಹಣ್ಣುಗಳನ್ನು ಕಚ್ಚಿ ತಿನ್ನಬೇಕು !ಈ ಹಣ್ಣಿನ ರಸವೇ ಹಲ್ಲುಗಳನ್ನು ಹೊಳೆಯುವಂತೆ ಮಾಡುತ್ತದೆ
ದಂತ ವೈದ್ಯರ ಬಳಿಗೆ ಹೋಗಿ ಹಳದಿ ಹಲ್ಲುಗಳನ್ನು ಮತ್ತೆ ಹೊಳೆಯುವಂತೆ ಮಾಡಬಹುದು. ಆದರೆ,ಇದಕ್ಕೆ ದುಬಾರಿ ವೆಚ್ಚ ತೆರಬೇಕಾಗುತ್ತದೆ. ಇದರ ಬದಲು ನೈಸರ್ಗಿಕವಾಗಿ ಹಳದಿ ಹಲ್ಲುಗಳು ಮುತ್ತಿನಂತೆ ಹೊಳೆಯುವಂತೆ ಮಾಡಬಹುದು
ಕೆಲವು ಹಣ್ಣುಗಳನ್ನು ಜಗಿದು ತಿನ್ನುವ ಮೂಲಕ ಹೊರ ಬರುಅ ಹಣ್ಣಿನ ರಸದಿಂದಲೇ ಹಲ್ಲಿನ ಹಳದಿ ಕಲೆಗಳನ್ನು ತೆಗೆದು ಹಾಕಬಹುದು. ಬಾಯಿಯಿಂದ ಬರುವ ದುರ್ವಾಸನೆಯಿಂದಲೂ ಇದು ಮುಕ್ತಿ ನೀಡುತ್ತದೆ.
ಸ್ಟ್ರಾಬೆರಿಯಲ್ಲಿ ಮ್ಯಾಲಿಕ್ ಆಸಿಡ್ ಇರುತ್ತದೆ. ಈ ಆಸಿಡ್ ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿದ್ದು ಹಲ್ಲುಗಳ ಮೇಲೆ ಅಂಟಿಕೊಂಡಿರುವ ಈ ಹಳದಿ ಪದರವನ್ನು ತೆಗೆದು ಹಾಕುವ ಕೆಲಸ ಮಾಡುತ್ತದೆ.
ಕಲ್ಲಂಗಡಿ ಹಣ್ಣಿನಲ್ಲಿ ಸ್ಟ್ರಾಬೆರಿಗಿಂತ ಹೆಚ್ಚು ಪ್ರಮಾಣದಲ್ಲಿ ಮ್ಯಾಲಿಕ್ ಆಸಿಡ್ ಇರುತ್ತದೆ. ಇದು ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಹಲ್ಲುಗಳಿಂದ ಪ್ಲೇಕ್ ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಅನಾನಸ್ ಹಣ್ಣು ಕೂಡಾ ಹಲ್ಲುಗಳಲ್ಲಿ ಅಂಟಿಕೊಂಡಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಇದು ಬ್ರೋಮೆಲೈನ್ ಎಂಬ ಪ್ರೋಟಿಯೋಲೈಟಿಕ್ ಕಿಣ್ವವನ್ನು ಹೊಂದಿದ್ದು, ಹಲ್ಲುಗಳ ಹಳದಿ ಪದರವನ್ನು ಒಡೆಯುವ ಕೆಲಸ ಮಾಡುತ್ತದೆ.
ಪ್ರೋಟಿಯೋಲೈಟಿಕ್ ಕಿಣ್ವ ಹೊಂದಿರುವ ಇನ್ನೊಂದು ಹಣ್ಣು ಪಪ್ಪಾಯ. ಇದರಲ್ಲಿರುವ ಕಿಣ್ವವನ್ನು ಪಪೈನ್ ಎಂದು ಕರೆಯಲಾಗುತ್ತದೆ.ಇದು ಹಲ್ಲುಗಳಿಗೆ ಹಾನಿ ಮಾಡುವ ಪ್ರೋಟೀನ್ ಅನ್ನು ತೆಗೆದುಹಾಕುತ್ತದೆ.
ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ಬಾಯಿಯಲ್ಲಿ ಲಾಲಾರಸದ ಉತ್ಪಾದನೆ ಹೆಚ್ಚಾಗುತ್ತದೆ.ಇದು ನೈಸರ್ಗಿಕವಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ, ZEE NEWS ಅದನ್ನು ಖಚಿತಪಡಿಸುವುದಿಲ್ಲ.