ನಿಮಗೆ ಲೈಂಗಿಕ ಆಸಕ್ತಿ ಕಡಿಮೆ ಇದ್ಯಾ? ಈ ಸಿಂಪಲ್‌ ಟಿಪ್ಸ್‌ ಫಾಲೋ ಮಾಡಿ..!

Thu, 29 Aug 2024-6:47 pm,

ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಸೆಕ್ಸ್‌ ಲೈಫ್ ಬಗ್ಗೆ ಇಂಟೆರೆಸ್ಟ್‌ ಕಡಿಮೆ ಆಗುವುದು ಅಥವಾ ಸೆಕ್ಸ್‌ ಎಂಜಾಯ್‌ ಮಾಡಲು ಅಡ್ಡಿಯಾಗುವುದು ನಮ್ಮಲ್ಲಿನ ಉದ್ವೇಗ ಅಥವಾ ಆಂಗ್ಸೈಟಿ. ಇಂದಿನ ಒತ್ತಡದ ಜೀವನಶೈಲಿಯಲ್ಲಿ ಗಂಡು-ಹೆಣ್ಣು ಇಬ್ಬರನ್ನೂ ಕಾಡುವ ದೊಡ್ಡ ಸಮಸ್ಯೆಯೇ ಇದು. ಇದು ಲೈಂಗಿಕ ತೃಪ್ತಿ ಸಿಗದ ಹಾಗೆ ಮಾಡುತ್ತದಂತೆ. ಹೆಚ್ಚುವ ಜವಾಬ್ದಾರಿ, ಕೆಲಸದ ಒತ್ತಡ ಮುಂತಾದ ಸ್ಟ್ರೆಸ್‌ ಫ್ಯಾಕ್ಟರ್‌ಗಳಿಂದ ಉದ್ವೇಗ ಹೆಚ್ಚಾಗುತ್ತದಂತೆ. ಉದ್ವೇಗ ಕಡಿಮೆ ಮಾಡಬೇಕು ಅಂದ್ರೆ ಪ್ರತಿದಿನ ಬೆಳಗ್ಗೆ ಬೇಗ ಏಳಬೇಕು, ಸೂರ್ಯನ ಬಿಸಿಲಲ್ಲಿ ಓಡಾಡಬೇಕು & ವ್ಯಾಯಾಮದ ಮೂಲಕ ಬೆವರಿಳಿಸಬೇಕು.

ನಿಮ್ಮನ್ನು ತಲ್ಲೀನಗೊಳಿಸುವ ಉತ್ತಮ ವಿಚಾರಗಳಿಗೆ ದಿನದಲ್ಲಿ ಕನಿಷ್ಠ ಒಂದು ಗಂಟೆ ಮೀಸಲಿಡಬೇಕು. ಓದುವುದು, ಸಂಗೀತ ಆಲಿಸುವುದು, ನಿಮ್ಮಿಷ್ಟದ ಆಟ ಆಡುವುದು, ಸಿನಿಮಾ ನೋಡುವುದು... ಹೀಗೆ ಯಾವುದೇ ವಿಷಯದಲ್ಲಿ ಇಷ್ಟವಿದ್ರೂ ಅದಕ್ಕೆ ಸಮಯ ನೀಡಬೇಕು. ನಿಮ್ಮ ಸಂಗಾತಿಯ ಜೊತೆಗೆ ವಾಕಿಂಗ್‌ ಮತ್ತು ಹರಟೆ ಅಗತ್ಯವಾಗಿರುತ್ತದೆ. ಸಂಗಾತಿ ಜೊತೆಗೆ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳುವುದು ತುಂಬಾ ಮುಖ್ಯ. ಯಾವುದೇ ಸಂಬಂಧದಲ್ಲಿ ಶುರು ಶುರುವಿಗೆ ಇರುವ ಆಕರ್ಷಣೆ ಆಮೇಲೆ ಇರುವುದಿಲ್ಲ.

ಕೆಲ ಸಂದರ್ಭದಲ್ಲಿ ಸಂಗಾತಿಯ ನೆಗೆಟಿವ್‌ ವಿಚಾರಗಳೇ ನಿಮಗೆ ಎದ್ದು ಕಾಣುತ್ತಿರುತ್ತವೆ. ಅವರ ಸೌಂದರ್ಯಕ್ಕಿಂತ ಅವರಲ್ಲಿರುವ ಕೊರತೆ ಕಾಡಲಾರಂಭಿಸುತ್ತದೆ. ಅವರ ಮೇಲಿನ ಆಸಕ್ತಿ ನಿಧಾನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ಇದು ಎಲ್ಲಾ ಸಂಬಂಧಗಳ ಹಣೇಬರಹ. ಆದರೆ ನಿಮ್ಮ ಸಂಗಾತಿಯನ್ನು ಅವರು ಇರುವ ಹಾಗೆ ಒಪ್ಪಿಕೊಂಡರೆ ಈ ಸಮಸ್ಯೆ ಕಡಿಮೆಯಾಗುತ್ತದೆ. ಅದಕ್ಕೆ ಪರಸ್ಪರ ಸಮಯ ನೀಡುವುದು ಬಹಳ ಮುಖ್ಯ. ಆದರೆ ಹಾಗೆ ಸಮಯ ಕೊಡುವಾಗ ಅಲ್ಲಿ ನೀವಿಬ್ಬರೇ ಇರಬೇಕು. ಮನೆಯಲ್ಲಿ ಈ ವಾತಾವರಣ ಸಿಗುವುದು ತುಂಬಾನೇ ಕಷ್ಟ. ಹೀಗಾಗಿ ನೀವು ಔಟಿಂಗ್‌ ಹೋಗಬಹುದು. ಎರಡ್ಮೂರು ದಿನ ಎಲ್ಲಾದರೂ ಹಾಯಾಗಿದ್ದು ಬರಬಹುದು. ಆಗ ಎಲ್ಲವೂ ಮರೆತು ಸಂಗಾತಿಯ ಬಗ್ಗೆ ಪ್ರೀತಿ ಮತ್ತು ಲೈಂಗಿಕ ಆಸಕ್ತಿ ಬೆಳಸಿಕೊಳ್ಳಲು ಸಹಕಾರಿಯಾಗುತ್ತದೆ.  

ಫೋರ್‌ ಪ್ಲೇ ಇದ್ದರೆ ಲೈಂಗಿಕ ಅನುಭವ ಹೆಚ್ಚುತ್ತದೆ. ಸೆಕ್ಸ್‌ ಮಾಡಲು ಟೈಮ್‌ ಲಿಮಿಟ್‌ ಹಾಕಿಕೊಳ್ಳಬಾರದು. ಒಂದಿನ ಮೊಬೈಲ್‌ ನೋಡುವುದನ್ನು ಕಡಿಮೆ ಮಾಡಿ ಟೈಮ್‌ ಮ್ಯಾನೇಜ್‌ ಮಾಡಬೇಕು. ಆದರೆ ಲೈಂಗಿಕತೆ ವಿಚಾರಕ್ಕೆ ಅಲರಾಂ ಇಟ್ಟುಕೊಳ್ಳುವುದು ಮೂರ್ಖತನ. ಫೋರ್‌ ಪ್ಲೇಗೆ ಹೆಚ್ಚಿನ ಟೈಮ್‌ ನೀಡಬೇಕು. ಈ ಮುದ್ದಾಟದಿಂದ ನಿಮ್ಮಲ್ಲಿ ಲೈಂಗಿಕ ಆಸಕ್ತಿ ಹೆಚ್ಚಾಗುತ್ತೆ.

ನೀವು ಯಾವುದೇ ಕಾರಣಕ್ಕೂ ನಿದ್ದೆ ಕಡಿಮೆ ಮಾಡಬಾರದು. ನಿದ್ದೆ ಕಡಿಮೆಯಾದರೆ ಆಲಸ್ಯ ಹೆಚ್ಚಾಗುತ್ತದೆ. ಸೆಕ್ಸ್‌ ಅಷ್ಟೇ ಅಲ್ಲ ಯಾವುದೇ ವಿಷಯದ ಬಗೆಗೂ ಆಸಕ್ತಿ ಇರುವುದಿಲ್ಲ. ನಿದ್ದೆ, ಆಯಾಸವು ನಿಮ್ಮನ್ನು ಎಳೆಯುತ್ತಿರುತ್ತದೆ. ನನಗೆ ಏನೂ ಬೇಡ, ಸುಮ್ಮನೆ ನಿದ್ರೆ ಮಾಡೋಣ ಅನ್ನಿಸುತ್ತಿರುತ್ತದೆ. ಹೀಗಾಗಿ ಚೆನ್ನಾಗಿ ನಿದ್ದೆ ಮಾಡುವುದು ಅತ್ಯವಶ್ಯಕ. ನಿಮಗೆ ಎಷ್ಟು ನಿದ್ದೆ ಬೇಕೋ ಅಷ್ಟು ನಿದ್ದೆ ಮಾಡಲು ಪ್ರಯತ್ನಿಸಬೇಕು. ನಿದ್ರೆ ನಿಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link