Health Tips: ಮೊಸರು ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯಕರ ಲಾಭಗಳಿವೆ
ಮೊಸರು ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ಪ್ರೋಟಿನ್‍ನಿಂದ ಸಮೃದ್ಧವಾಗಿದೆ. ಇದಲ್ಲದೆ ದೇಹಕ್ಕೆ ಬೇರೆ ಆಹಾರಗಳಿಂದಲೂ ವಿಟಮಿನ್ಸ್ ಮತ್ತು ಮಿನರಲ್ಸ್ ಹೀರಿಕೊಳ್ಳಲು ಮೊಸರು ಸಹಾಯ ಮಾಡುತ್ತದೆ.
ಗಟ್ಟಿ ಮೊಸರು ದೇಹಕ್ಕೆ ಉಷ್ಣವನ್ನು ಹೆಚ್ಚಿಸುತ್ತದೆ. ಹೀಗಾಗಿ ಮೊಸರನ್ನು ಮಜ್ಜಿಗೆ ಮಾಡಿ ಅಥವಾ ಸಕ್ಕರೆ ಬೆರೆಸಿ ಲಸ್ಸಿ ಮಾಡಿ ಕುಡಿದರೆ ದೇಹಕ್ಕೆ ತಂಪು ನೀಡುತ್ತದೆ. ಹೊಟ್ಟೆ ನೋವು, ಮಲ ವಿಸರ್ಜನೆಯಲ್ಲಿ ತೊಂದರೆ ಇದ್ದರೆ ಈ ರೀತಿ ಮೊಸರು ಸೇವಿಸಬಹುದು. ಅಲ್ಸರ್ ನಂತಹ ಸಮಸ್ಯೆಗಳಿಗೂ ಮೊಸರು ತುಂಬಾ ಉಪಯೋಗಕಾರಿ.
ಮೊಸರು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಲವು ಇನ್ಫೆಕ್ಷನ್‍ಗಳಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ಮೊಸರನ್ನು ಹೆಚ್ಚಾಗಿ ಬಳಸಬಹುದು.
ಮೊಸರು ಸೇವನೆ ದೇಹದ ಮೂಳೆಯನ್ನು ಗಟ್ಟಿ ಮಾಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಅಂಶ ಹೇರಳವಾಗಿರುತ್ತದೆ. ಇದರಿಂದ ದೇಹದ ಮೂಳೆಗಳು ಅಷ್ಟೇ ಅಲ್ಲದೆ ಹಲ್ಲುಗಳು ಗಟ್ಟಿಯಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ, ರಕ್ತದೊತ್ತಡ, ಮೂತ್ರಪಿಂಡಗಳ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳನ್ನು ಹೋಗಲಾಡಿಸುವ ಗುಣವನ್ನು ಹೊಂದಿದೆ.
ಮೊಸರು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಬೆಳೆಯದಂತೆ ತಡೆಯುತ್ತದೆ. ದೇಹದ ತೂಕ ಹೆಚ್ಚಿಸಲು ಇಷ್ಟಪಡುವವರು ದೈನಂದಿನ ಆಹಾರದಲ್ಲಿ ಮೊಸರನ್ನು ಸೇವಿಸಬಹುದು. ಮೊಸರು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಅನೇಕ ಕಾಯಿಲೆಗಳಿಂದ ಮುಕ್ತಿ ಸಹ ಪಡೆಯಬಹುದು.