Health Tips: ಆಹಾರ ಸೇವಿಸಿದ ತಕ್ಷಣ ಈ 5 ಕೆಲಸಗಳನ್ನು ಮಾಡಲೇಬಾರದು
ಆರೋಗ್ಯ ತಜ್ಞರ ಪ್ರಕಾರ, ನಾವು ಆಹಾರ ಸೇವಿಸಿದ ಕೂಡಲೇ ಮಾಡುವ ಕೆಲವು ಕೆಲಸಗಳು ನಮ್ಮ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. ಹಾಗಾಗಿ, ಆಹಾರ ಸೇವಿಸಿದ ತಕ್ಷಣ ಈ 5 ಕೆಲಸಗಳನ್ನು ಮಾಡದಂತೆ ನಿಗಾವಹಿಸುವುದು ತುಂಬಾ ಅಗತ್ಯ. ಅವುಗಳೆಂದರೆ...
ನೀರು: ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವ ಅಭ್ಯಾಸ ನಮ್ಮಲ್ಲಿ ತುಂಬಾ ಜನರಿಗೆ ಇರುತ್ತದೆ. ಆದರೆ, ಈ ತಪ್ಪು ಆಹಾರವನ್ನು ಜೀರ್ಣಿಸಿಕೊಳ್ಳಲು ತೊಂದರೆ ಉಂಟು ಮಾಡುತ್ತದೆ.
ಚಹಾ: ನಮ್ಮಲ್ಲಿ ಕೆಲವರಿಗೆ ಆಹಾರ ಸೇವನೆ ಬಳಿಕ ಅದರಲ್ಲೂ ತಿಂಡಿ ತಿಂದ ತಕ್ಷಣ ಟೀ ಕುಡಿಯುವ ಅಭ್ಯಾಸ ಇರುತ್ತದೆ. ಇದು ಸಹ ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ನಿದ್ರೆ: ತಿಂದ ತಕ್ಷಣ ಮಲಗುವ ಅಭ್ಯಾಸ ಒಳ್ಳೆಯದಲ್ಲ. ನಿಮ್ಮ ಈ ತಪ್ಪು ಉದರದ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದು ಗ್ಯಾಸ್‌ನಂತಹ ಸಮಸ್ಯೆಗಳನ್ನು ಉಲ್ಬಣಿಸುತ್ತದೆ.
ಜಾಗಿಂಗ್: ತಿಂದ ಕೂಡಲೇ ವಾಕ್ ಮಾಡುವುದು ಒಳ್ಳೆಯದೇ. ಆದರೆ, ದೀರ್ಘ ನಡಿಗೆ ಮತ್ತು ಜಾಗಿಂಗ್ ಮಾಡುವುದನ್ನು ತಪ್ಪಿಸಬೇಕು. ಇದರಿಂದ ರಕ್ತ ಪರಿಚಲನೆ ಕಡಿಮೆಯಾಗುತ್ತದೆ.
ಸ್ನಾನ: ಏನನ್ನಾದರೂ ತಿಂದ ಕೂಡಲೇ ಸ್ನಾನ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ. ಇದು ಜೀರ್ಣಕ್ರಿಯೆಯನ್ನು ಹಾನಿಗೊಳಿಸುವುದರ ಜೊತೆಗೆ ದೇಹಕ್ಕೆ ದೊಡ್ಡ ಹಾನಿಯುಂಟು ಮಾಡಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.