Health Tips: ನೀವು ಸೇವಿಸುವ ಆಹಾರದಲ್ಲಿ ನಿಂಬೆಹಣ್ಣು ಸೇರಿದ್ರೆ ದೊಡ್ಡ ಮ್ಯಾಜಿಕ್!
ನಿಂಬೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿರುವ ಕಾರಣ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ನಿಂಬೆ ರಸವು ದೇಹದಿಂದ ವಿಷಕಾರಿ ವಸ್ತು ಹೊರಹಾಕಲು ಸಹಾಯ ಮಾಡುತ್ತದೆ. ರಕ್ತ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಮೂತ್ರಪಿಂಡದ ಕಲ್ಲು ಸಮಸ್ಯೆ ಬರದಂತೆ ತಡೆಯಲು ಸಹ ಸಹಾಯ ಮಾಡುತ್ತದೆ.
ನಿಂಬೆಹಣ್ಣು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ ಮತ್ತು ಜೀವಕೋಶಗಳಿಗೆ ಹಾನಿ ಉಂಟುಮಾಡುವ ಸ್ವತಂತ್ರ ರಾಡಿಕಲ್ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಇತರ ಪದಾರ್ಥಗಳೊಂದಿಗೆ ನಿಂಬೆ ರಸವನ್ನು ಮಿಶ್ರಣ ಮಾಡಿ ಚರ್ಮ ಮತ್ತು ಕೂದಲಿಗೆ ಹಚ್ಚಿದಾಗ ಚರ್ಮದ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ.
ನಿಂಬೆಹಣ್ಣು ವಿಟಮಿನ್ B 6, ತಾಮ್ರ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಸತು, ಫ್ಲೇವನಾಯ್ಡ್ಗಳು, ಉತ್ಕರ್ಷಣ ನಿರೋಧಕಗಳು ಮತ್ತು ರಂಜಕದಿಂದ ಸಮೃದ್ಧವಾಗಿದೆ. ನಿಮ್ಮ ತೂಕ ಇಳಿಸುವ ಆಹಾರದಲ್ಲಿ ಇದನ್ನು ಸೇರಿಸುವುದರಿಂದ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ.