ಒಡೆದ ಹಿಮ್ಮಡಿಗೆ ಜೇನುತುಪ್ಪ ಅತ್ಯುತ್ತಮ ಮನೆಮದ್ದು: ಹೀಗೆ ಬಳಸಿದ್ರೆ ನೋವಿನ ಜೊತೆ ಒಡೆತವೂ ಮಾಯ
ಆದರೆ ನೈಸರ್ಗಿಕ ಮಾರ್ಗವನ್ನು ಹುಡುಕುತ್ತಿದ್ದರೆ, ಜೇನುತುಪ್ಪಕ್ಕಿಂತ ಉತ್ತಮವಾದ ಆಯ್ಕೆ ಇನ್ನೊಂದಿಲ್ಲ. ಜೇನುತುಪ್ಪವು ನೈಸರ್ಗಿಕ ಮಾಯಿಶ್ಚರೈಸರ್ ಆಗಿದೆ. ಚರ್ಮವು ಶುಷ್ಕ ಮತ್ತು ಬಿರುಕು ಬಿಟ್ಟರೆ, ಜೇನುತುಪ್ಪವನ್ನು ಹಚ್ಚುವುದರಿಂದ ಉತ್ತಮ ಪರಿಹಾರವನ್ನು ನೀಡುತ್ತದೆ.
ಜೇನುತುಪ್ಪವನ್ನು ನಿಯಮಿತವಾಗಿ ಬಳಸಿದರೆ, ಮಾತ್ರ ಖಂಡಿತವಾಗಿಯೂ ಪ್ರಯೋಜನವನ್ನು ಪಡೆಯುತ್ತೀರಿ.1 ಚಮಚ ಅಕ್ಕಿ ಹಿಟ್ಟು, 1 ಟೀಚಮಚ ಜೇನುತುಪ್ಪ, 1 ಟೀಚಮಚ ರೋಸ್ ವಾಟರ್, ಇದಕ್ಕೆ ಪ್ರಮುಖವಾಗಿ ಬೇಕಾಗಿರುವ ಪದಾರ್ಥಗಳು.
ಒಂದು ಬಟ್ಟಲಿನಲ್ಲಿ ಅಕ್ಕಿ ಹಿಟ್ಟು, ರೋಸ್ ವಾಟರ್ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ. ಈ ಮಿಶ್ರಣದಿಂದ ಒಡೆದ ಹಿಮ್ಮಡಿಗಳನ್ನು ನಿಧಾನವಾಗಿ ಸ್ಕ್ರಬ್ ಮಾಡಿ. 10 ನಿಮಿಷಗಳ ಕಾಲ ಹಿಮ್ಮಡಿಯ ಮೇಲೆ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)