QR ಕೋಡ್ ಪ್ಯಾನ್ ಕಾರ್ಡ್ ಪಡೆಯಲು ಎಷ್ಟು ಹಣ ಪಾವತಿಸಬೇಕು? PAN 2.0 ಪಡೆಯಬೇಕಾದರೆ ಏನು ಮಾಡಬೇಕು ? ಅಪ್ಗ್ರೇಡ್ ಮಾಡಲು ಕೊನೆಯ ಗಡುವು ಯಾವುದು ?
ಕೇಂದ್ರ ಸರ್ಕಾರ ಪ್ಯಾನ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಹೊಸ ಆವೃತ್ತಿಯ ಪ್ಯಾನ್ ಕಾರ್ಡ್ (ಪ್ಯಾನ್ ಕಾರ್ಡ್ 2.0) ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ.ಹೊಸ ಪ್ಯಾನ್ ಕಾರ್ಡ್‌ನಲ್ಲಿ ಕ್ಯೂಆರ್ ಕೋಡ್ ಇರಲಿದೆ.
ಈ ಹೊಸ ಕಾರ್ಡ್ ಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಜನರ ಮನದಲ್ಲಿ ಮೂಡುತ್ತಿದೆ. ಈ ಕಾರ್ಡ್ ಪಡೆಯಬೇಕಾದರೆ ತೆರಬೇಕಾದ ಶುಲ್ಕ ಎಷ್ಟು ಎನ್ನುವುದು ಸದ್ಯಕ್ಕೆ ಎಲ್ಲರ ಮನದಲ್ಲಿ ಮೂಡಿರುವ ಪ್ರಶ್ನೆ.
ಹೊಸ ಕಾರ್ಡ್‌ಗಾಗಿ ಎಲ್ಲಿಯೂ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಥವಾ ಯಾವುದೇ ಫಾರ್ಮ್ ಅನ್ನು ಭರ್ತಿ ಮಾಡಬೇಕಾಗಿಲ್ಲ. ಹೊಸ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಮನೆಗೆ ತಲುಪಿಸಲಾಗುತ್ತದೆ.
ಸರ್ಕಾರವು ಕ್ಯೂಆರ್ ಕೋಡ್‌ನೊಂದಿಗಿನ ಹೊಸ ಪ್ಯಾನ್ ಕಾರ್ಡ್ ಅನ್ನು ನೇರವಾಗಿ ನಿಮ್ಮ ವಿಳಾಸಕ್ಕೆ ಕಳುಹಿಸುತ್ತದೆ. ಇದರರ್ಥ ಇದಕ್ಕಾಗಿ ಅರ್ಜಿ ಸಲ್ಲಿಸುವ ತೊಂದರೆ ಅಥವಾ ಹಣವನ್ನು ಖರ್ಚು ಮಾಡುವ ಅಗತ್ಯವಿಲ್ಲ.
ಈ ಹೊಸ ಸ್ವರೂಪದ ಪ್ಯಾನ್ ಕಾರ್ಡ್ ಪಡೆಯಲು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಆದಾಯ ತೆರಿಗೆ ಇಲಾಖೆಯಿಂದ ನಿಮ್ಮ ನೋಂದಾಯಿತ ವಿಳಾಸಕ್ಕೆ ಹೊಸ ಪ್ಯಾನ್ ಕಾರ್ಡ್ ಕಳುಹಿಸಲಾಗುತ್ತದೆ. ಅಂದರೆ ನಿಮ್ಮ ಅಸ್ತಿತ್ವದಲ್ಲಿರುವ ಪ್ಯಾನ್ ಸ್ವಯಂಚಾಲಿತವಾಗಿ ಅಪ್‌ಗ್ರೇಡ್ ಆಗುತ್ತದೆ.
ಭವಿಷ್ಯದಲ್ಲಿ ಪ್ಯಾನ್ ಕಾರ್ಡ್ ಯುನಿವರ್ಸಲ್ ಐಡಿಯಂತೆ ಕಾರ್ಯನಿರ್ವಹಿಸುವುದರಿಂದ ಹೊಸ ವ್ಯವಸ್ಥೆಯ ಅಗತ್ಯವು ಉದ್ಭವಿಸಿದೆ.
ಹೊಸ ಕಾರ್ಡ್ ನಿಮ್ಮ ಕೈಗೆ ಬರುವವರೆಗೆ, ನೀವು ಹಳೆಯ ಪ್ಯಾನ್ ಕಾರ್ಡ್‌ನೊಂದಿಗೆ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಬಹುದು.