ಶೂʼಗಳಿಂದ ಬರುವ ಕೆಟ್ಟ ದುರ್ವಾಸನೆ ತೊಲಗಿಸಲು ಈ ಸರಳ ಸಲಹೆ ಪಾಲಿಸಿ.!
ಕೆಲವರು ತುಂಬಾ ಬೆವರುತ್ತಾರೆ. ಇದರಿಂದ ಶೂ ಬಹುಬೇಗನೆ ವಾಸನೆ ಬರುತ್ತದೆ. ಕೆಲವರು ಎಷ್ಟು ಬೆವರುತ್ತಾರೆಂದರೆ ಅವರು ಧರಿಸಿದ ಸಾಕ್ಸ್ ಸಹ ಒದ್ದೆಯಾಗುವುದು. ಒದ್ದೆಯಾದ ಸಾಕ್ಸ್ ಅಸಹನೀಯ ವಾಸನೆ ಬೀರುತ್ತದೆ. ಈ ವಾಸನೆ ತಪ್ಪಿಸಲು ಒಂದಷ್ಟು ಸಲಹೆ ಪಾಲಿಸಿ.
ಬಳಕೆಯ ನಂತರ ಶೂಗಳನ್ನು ಗಾಳಿಯಲ್ಲಿ ಹೊರಗೆ ಇಡಬೇಕು. ಸಾಕ್ಸ್ ಅನ್ನು ನಿಯಮಿತವಾಗಿ ತೊಳೆದು ಒಣಗಿಸಬೇಕು. ಆದರೆ ಕೆಲವರು ವಾರ ಪೂರ್ತಿ ಒಂದೇ ಜೋಡಿ ಸಾಕ್ಸ್ ಧರಿಸುತ್ತಾರೆ. ಇದರಿಂದ ಶೂ ವಾಸನೆ ಬರಲು ಪ್ರಾಂಭಿಸುತ್ತದೆ.
ಶೂ ಲೇಸ್ ಗಳನ್ನೂ ಕಾಲಕಾಲಕ್ಕೆ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬೇಕು. ಶೂಗಳನ್ನು ಸಹ ವಾರಕ್ಕೊಮ್ಮೆ ಸ್ವಚ್ಛವಾಗಿ ತೊಳೆಯಬೇಕು. ಹೀಗೆ ಮಾಡುವುದರಿಂದ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಇರುವುದಿಲ್ಲ.
ನಿಂಬೆ ಸಿಪ್ಪೆಯನ್ನು ಶೂಗಳಲ್ಲಿ ಹಾಕಿದರೆ ಕೆಟ್ಟ ವಾಸನೆ ಬರುವುದಿಲ್ಲ. ಅದಕ್ಕಾಗಿಯೇ ನಿಂಬೆ ಸಿಪ್ಪೆಯನ್ನು ರಾತ್ರಿ ಶೂಗಳ ಒಳಗೆ ಹಾಕಬೇಕು ಮತ್ತು ಬೆಳಿಗ್ಗೆ ತೆಗೆಯಬೇಕು. ಹೀಗೆ ಮಾಡುವುದರಿಂದ ಶೂಗಳಿಂದ ಯಾವುದೇ ವಾಸನೆ ಬರುವುದಿಲ್ಲ.
ಒದ್ದೆಯಾದ ಬೂಟುಗಳಿಗೆ ಅಡಿಗೆ ಸೋಡಾವನ್ನು ಸೇರಿಸಿದರೆ ದರ್ವಾಸನೆ ದೂರವಾಗುತ್ತದೆ. ಇದು ಶೂಗಳಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಅದಕ್ಕಾಗಿಯೇ ಬೂಟುಗಳು ವಾಸನೆ ಬಂದಾಗ ಅಡಿಗೆ ಸೋಡಾವನ್ನು ಬಳಸಬೇಕು.