ಏರಿಕೆ ಬೆನ್ನಲ್ಲೇ ಭಾರೀ ಇಳಿಕೆ ಕಂಡ ಚಿನ್ನದ ಬೆಲೆ, ಬೆಳ್ಳಿ ಬೆಲೆಯೂ ಅಗ್ಗ : ಬಂಗಾರ ಖರೀದಿಸುವುದಾದರೆ ಇದುವೇ ಒಳ್ಳೆಯ ಸಮಯ
ಕಳೆದ ವಾರ ಬಂಗಾರದ ಬೆಲೆ ಗಗನದತ್ತ ಮುಖ ಮಾಡಿತ್ತು. ಮದುವೆ ಸೀಸನ್ ನಲ್ಲಿ ಬಂಗಾರದ ಬೆಲೆ ಮತ್ತೆ ಏರಿಕೆಯಾಗಿದ್ದು ಸಾಮಾನ್ಯ ಜನರನ್ನು ಕಂಗೆಡಿಸಿತ್ತು. ಆದರೆ, ಇದೀಗ ಮತ್ತೆ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.
ದುರ್ಬಲ ಜಾಗತಿಕ ಪ್ರವೃತ್ತಿಯ ನಡುವೆ ಕಳೆದ ವಾರದ ಏರಿಕೆ ನಂತರ ಮತ್ತೆ ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. ಫ್ಯೂಚರ್ ಮಾರುಕಟ್ಟೆ ಎಂಸಿಎಕ್ಸ್ ನಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆ ಕುಸಿದಿದೆ.
ಇಂಡಿಯಾ ಬುಲಿಯನ್ ಅಂಡ್ ಜ್ಯುವೆಲರ್ಸ್ ಅಸೋಸಿಯೇಷನ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ 999 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,089 ರೂಪಾಯಿ ಇಳಿಕೆ ಕಂಡು ಬಂದಿದ್ದು, 76,698 ರೂ.ಗೆ ತಲುಪಿದೆ.
ಬೆಳ್ಳಿ ಬೆಲೆಯಲ್ಲಿಯೂ ಪ್ರತಿ ಕೆಜಿಗೆ 1,762 ರೂ.ನಷ್ಟು ಇಳಿಕೆ ಕಂಡು ಬಂದಿದ್ದು ಬೆಳ್ಳಿ ದರ 89,088 ರೂ.ಗೆ ತಲುಪಿದೆ.
ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ ಪ್ರಕಟಿಸಿರುವ ಬೆಲೆಯು ವಿಭಿನ್ನ ಶುದ್ಧತೆಯ ಚಿನ್ನದ ಪ್ರಮಾಣಿತ ಬೆಲೆಯ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇದರಲ್ಲಿ ತೆರಿಗೆ ಮತ್ತು ಮೇಕಿಂಗ್ ಚಾರ್ಜ್ ಅನ್ನು ಸೇರಿಸಲಾಗಿರುವುದಿಲ್ಲ.
ಚಿನ್ನಾಭರಣಗಳನ್ನು ಖರೀದಿಸುವಾಗ ಗ್ರಾಹಕರು ತೆರಿಗೆ ಮತ್ತು ಮೇಕಿಂಗ್ ಚಾರ್ಜ್, ಜಿಎಸ್ ಟಿಯನ್ನು ಒಳಗೊಂಡಿರುತ್ತದೆ. ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಬೆಲೆಯನ್ನು ಸಂಘದವರು ಚಿನ್ನದ ಬೆಲೆಯನ್ನು ಘೋಷಿಸುತ್ತಾರೆ.
ಇನ್ನು ನಿಮ್ಮ ನಗರದ ಬಂಗಾರದ ಇಂದಿನ ನಿಖರವಾದ ಬೆಲೆಯನ್ನು ತಿಳಿಯಲು ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಶನ್‌ನ ಅಧಿಕೃತ ವೆಬ್‌ಸೈಟ್ ibjarates.com ಅನ್ನು ಸಂಪರ್ಕಿಸಬಹುದು.