ಜೂನ್ 18ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ Hyundai SUV Alcazar
ಹ್ಯುಂಡೈನ ಎಸ್ಯುವಿ ಅಲ್ಕಾಜಾರ್ ಜೂನ್ 18 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ನಿನ್ನೆಯಿಂದಲೆ ಇದರ ಪ್ರೀ ಬುಕ್ಕಿಂಗ್ ಆರಂಭವಾಗಿದೆ. ಈ ಕಾರಿನ ಪ್ರೀ ಬುಕ್ಕಿಂಗ್ ಗಾಗಿ, ಹ್ಯುಂಡೈನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಪ್ರೀ ಬುಕ್ಕಿಂಗ್ ವೇಳೆ, ಗ್ರಾಹಕರು 25 ಸಾವಿರ ರೂಗಳನ್ನು ಪಾವತಿಸಬೇಕಾಗುತ್ತದೆ.
ಈ ಕಾರಿನ ಲಾಂಚಿಂಗ್ ದಿನಾಂಕ ಹೊರಬೀಳುತ್ತಿದ್ದಂತೆ ಇದೀಗ ಇದರ ಬೆಲೆ ಎಷ್ಟಿರ ಬಹುದು ಎಂಬ ಚರ್ಚೆ ಆರಂಭವಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತ ಮಾರುಕಟ್ಟೆಯಲ್ಲಿ ಇದರ ಬೆಲೆ 12 ರಿಂದ 18 ಲಕ್ಷದವರೆಗೆ ಇರಬಹುದು ಎನ್ನಲಾಗಿದೆ.
3-Row SUVಯನ್ನು 7 ಸೀಟರ್ ಮತ್ತು 6 ಸೀಟರ್ ಎರಡೂ ಆವೃತ್ತಿಗಳಲ್ಲಿ ಬಿಡುಗಡೆ ಮಾಡಲಾಗುವುದು. ಹೊಸ ಅಲ್ಕಾಜಾರ್ ಅನ್ನು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಎಂಜಿನ್ ಗಳ ಆಯ್ಕೆಗಳೊಂದಿಗೆ ನೀಡಲಾಗುವುದು ಎಂದು ಹ್ಯುಂಡೈ ಹೇಳಿದೆ. ಇದರ ಪೆಟ್ರೋಲ್ ವೇರಿಯೆಂಟ್ ನಲ್ಲಿ 2.0-ಲೀಟರ್ ಕ್ಷಮತೆಯುಳ್ಳ ಎಂಜಿನ್ ಹೊಂದಿದ್ದು, ಇದು 1599PS ಪವರ್ ಮತ್ತು 192 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಡೀಸೆಲ್ ವೇರಿಯೆಂಟ್ ನಲ್ಲಿ 1.5-ಲೀಟರ್ ಕ್ಷಮತೆಯುಳ್ಳ ಎಂಜಿನ್ ಅನ್ನು ಬಳಸಲಾಗಿದ್ದು, ಇದು 115 PS ಪವರ್ ಮತ್ತು 250Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 6 ಸ್ಪೀಡ್ ಮ್ಯಾನುವಲ್ ಮತ್ತು ಸ್ಪೀಡ್ ಟಾರ್ಕ್ ಕನ್ ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನೊಂದಿಗೆ ಬರಲಿದೆ.
Hyundai Alcazar ಅನ್ನು ಪ್ರೆಸ್ಟೀಜ್, ಪ್ಲ್ಯಾಟಿನಮ್ ಮತ್ತು ಸಿಗ್ನೇಚರ್ ಎಂಬ ಮೂರು ವಿಭಿನ್ನ ವೇರಿಯೆಂಟ್ ಗಳಲ್ಲಿ ಬಿಡುಗಡೆ ಮಾಡಲಾಗುವುದು. ಇದಲ್ಲದೆ ಇದು 6 ಸಿಂಗಲ್ ಟೋನ್ ಮತ್ತು ಎರಡು ಡ್ಯುಯಲ್ ಟೋನ್ ಬಣ್ಣಗಳಲ್ಲಿಯೂ ಲಭ್ಯವಿರುತ್ತದೆ. ಸೀಮಗಲ್ ಟೋನ್ ನಲ್ಲಿ ಫ್ಯಾಂಟಮ್ ಬ್ಲ್ಯಾಕ್, ಪೋಲಾರ್ ವೈಟ್, ಸ್ಟಾರಿ ನೈಟ್, ಟೈಗಾ ಬ್ರೌನ್, ಟೈಟಾನ್ ಗ್ರೇ ಮತ್ತು ಟೈಫೂನ್ ಸಿಲ್ವರ್ ಸೇರಿವೆ. ಇನ್ನು ಡ್ಯುಯಲ್ ಟೋನ್ ನಲ್ಲಿ ಫ್ಯಾಂಟಮ್ ಬ್ಲಾಕ್, ಪೋಲಾರ್ ವೈಟ್ ಟೈಟಾನ್ ಗ್ರೇ ಲಭ್ಯವಿರುತ್ತದೆ.
ಹ್ಯುಂಡೈ ಅಲ್ಕಾಜರ್ ನಲ್ಲಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸಿಗಲಿದೆ. ಇದು ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್-ಪ್ಲೇ ಅನ್ನು ಬೆಂಬಲಿಸುತ್ತದೆ. ಬ್ಲೂಲಿಂಕ್ ಕನೆಕ್ಟಿವಿಟಿಯೊಂದಿಗೆ ವಾಯ್ಸ್ ರೆಕಗ್ನಿಶನ್, 7.0-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಪನೋರಮಿಕ್ ಸನ್‌ರೂಫ್, 6 ಏರ್‌ಬ್ಯಾಗ್, ವಾಹನ ಸ್ಥಿರತೆ ನಿರ್ವಹಣೆ, Isofix ಮೌಂಟೆಡ್ ಸೀಟ್, ಹಿಲ್ ಸ್ಟಾರ್ಟ್, ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ABS) ಮುಂತಾದ ವೈಶಿಷ್ಟ್ಯಗಳಿವೆ.