Zimbabwe vs India: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 42 ರನ್ ಗಳ ಭರ್ಜರಿ ಗೆಲುವು, 4-1 ಅಂತರದಲ್ಲಿ ಸರಣಿ ವಶ

Mon, 15 Jul 2024-4:43 am,

ಜಿಂಬಾಬ್ವೆ ವಿರುದ್ದ ನಡೆದ ಐದನೇ ಟಿ ೨೦ ಪಂದ್ಯದಲ್ಲಿ ಟೀಮ್ ಇಂಡಿಯಾ 42 ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ.ಆ ಮೂಲಕ 4-1 ಅಂತರದಲ್ಲಿ ಟಿ 20 ಸರಣಿಯನ್ನು ವಶಪಡಿಸಿಕೊಂಡಿದೆ.

ಟೀಮ್ ಇಂಡಿಯಾದ ಪರವಾಗಿ ಮಾರಕ ಬೌಲಿಂಗ್ ದಾಳಿ ನಡೆಸಿದ ಮುಕೇಶ್ ಕುಮಾರ್ ನಾಲ್ಕು ವಿಕೆಟ್ ಗಳನ್ನು ಪಡೆದರೆ ಶಿವಂ ದುಬೆ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಗೆಲುವು ಭಾರತದತ್ತ ವಾಲುವಂತೆ ಮಾಡಿದರು.

ಟೀಮ್ ಇಂಡಿಯಾ ನೀಡಿದ 168 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ ತಂಡವು ಟೀಮ್ ಇಂಡಿಯಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 18.3 ಓವರ್ ಗಳಲ್ಲಿ 125 ರನ್ ಗಳಿಗೆ ಆಲೌಟ್ ಆಯಿತು.

ಟೀಮ್ ಇಂಡಿಯಾದ ಪರವಾಗಿ ಸಂಜು ಸ್ಯಾಮ್ಸನ್ ಕೇವಲ 45 ಎಸೆತಗಳಲ್ಲಿ 58 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.

ಟಾಸ್ ಗೆದ್ದ ಜಿಂಬಾಬ್ವೆ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇದೆ ವೇಳೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 167 ರನ್ ಗಳ ಗುರಿಯನ್ನು ನೀಡಿತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link