Indian Railways : ಪ್ರವಾಸಿಗರಿಗಾಗಿ ಅದ್ಭುತ ಉಡುಗೊರೆ ನೀಡಿದ ಭಾರತೀಯ ರೈಲ್ವೆ

Wed, 30 Dec 2020-8:19 am,

ನವದೆಹಲಿ: ಭಾರತೀಯ ರೈಲ್ವೆ (Indian Railways) ವಿಶೇಷವಾಗಿ ದೇಶದಲ್ಲಿ ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು ಹೊಸ ವಿನ್ಯಾಸದ ಆಧುನಿಕ ರೈಲ್ವೆ ಬೋಗಿಗಳನ್ನು ಸಿದ್ಧಪಡಿಸುತ್ತಿದೆ. ಈ ನಿಟ್ಟಿನಲ್ಲಿ 2020 ರಲ್ಲಿ 10 ಬೋಗಿಗಳನ್ನು ತಯಾರಿಸಲು ಯೋಜಿಸಲಾಗಿತ್ತು. ಈಗ ಅದರ ಎರಡು ಆಧುನಿಕ ಬೋಗಿಗಳು ಸಿದ್ಧವಾಗಿವೆ ಮತ್ತು ಉಳಿದ ಬೋಗಿಗಳನ್ನು ಮಾರ್ಚ್ 31 ರೊಳಗೆ ಸಿದ್ಧಪಡಿಸುವ ಗುರಿ ಹೊಂದಲಾಗಿದೆ. ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರುವ ಈ ಬೋಗಿಗಳಲ್ಲಿ ನೀವು ಗಣ್ಯ ವರ್ಗದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತೀರಿ. ರೈಲ್ವೆ ಮಾಡರ್ನ್ ಕೋಚ್  ಪ್ರವಾಸಿಗರನ್ನು ಆಕರ್ಷಿಸುವ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಪ್ರವಾಸಿಗರ ಅನುಕೂಲಕ್ಕೆ ಅನುಗುಣವಾಗಿ ಕೋಚ್ ಅನ್ನು ವಿಶಿಷ್ಟ ವೈಶಿಷ್ಟ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.

ಫೋಟೋ ಕೃಪೆ : Indian Railaway

ಭಾರತೀಯ ರೈಲ್ವೆಯ (Indian Railways) ಮಾಡರ್ನ್ ಕೋಚ್‌ನಲ್ಲಿ ಪ್ರಯಾಣಿಕರ ಸೌಲಭ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದೆ.

ಈ ಆಧುನಿಕ ಕೋಚ್‌ನಲ್ಲಿ ನೀವು ಯಾವುದೇ ಪ್ರಸಿದ್ಧ ವ್ಯಕ್ತಿಗಳ ಡ್ರಾಯಿಂಗ್ ರೂಂನಲ್ಲಿ ಕುಳಿತುಕೊಳ್ಳುವ ಭಾವನೆಯನ್ನು ಪಡೆಯುತ್ತೀರಿ.

ಇದನ್ನೂ ಓದಿ: Indian Railways: ಇನ್ಮುಂದೆ ಕೇವಲ ಚಾಟ್ ಮಾಡಿ IRCTC ಟಿಕೆಟ್ ಕಾಯ್ದಿರಿಸಿ... ಹೇಗೆ? ಇಲ್ಲಿದೆ ವಿವರ

ಈ ವಿಶೇಷ ಕೋಚ್‌ನಲ್ಲಿ ನೀವು ಜಿಪಿಎಸ್, ವೈಫೈ (Wifi) ಸೌಲಭ್ಯವನ್ನೂ ಪಡೆಯುತ್ತೀರಿ.

ಈ ಪ್ಯಾಂಟ್ರಿಯಲ್ಲಿ ನಿಮ್ಮ ಆಯ್ಕೆಯ ಆಹಾರ ಪದಾರ್ಥಗಳು ನಿಮಗೆ ಲಭ್ಯವಾಗಲಿವೆ.

ಇದನ್ನೂ ಓದಿ: Vistadome Coach Train: ಗಂಟೆಗೆ 180 ಕಿ.ಮೀ ವೇಗದಲ್ಲಿ ಓಡಿದ ವಿಸ್ಟಾಡಾಮ್ ಬೋಗಿ ಹೊಂದಿದ ರೈಲು

ಕೋಚ್‌ನ ಶೌಚಾಲಯವು ಪಂಚತಾರಾ ಹೋಟೆಲ್‌ನಂತೆ ಆರೋಗ್ಯಕರ ಮತ್ತು ಸ್ವಚ್ಛವಾಗಿದೆ.

ನೆಚ್ಚಿನ ತಾಣಗಳಿಗೆ ಪ್ರಯಾಣಿಸಲು ನೀವು ಈ ಕೋಚ್‌ನಲ್ಲಿ ಆರಾಮದಾಯಕ ಆಸನದ ಮೇಲೆ ಕುಳಿತಾಗ ಮಾಲ್‌ನಲ್ಲಿ ಸಿನೆಮಾ ನೋಡುವಂತೆ ನಿಮಗೆ ಭಾಸವಾಗುತ್ತದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link