ಭಾರತೀಯ ರೈಲ್ವೆಯ ವಿಶೇಷ ಟಿಕೆಟ್: ಒಂದೇ ಟಿಕೆಟ್‌ನಲ್ಲಿ ವಿವಿಧ ಮಾರ್ಗಗಳಲ್ಲಿ ಸತತ 56 ದಿನ ಪ್ರಯಾಣಿಸಬಹುದು
ರೈಲಿನಲ್ಲಿ ಎಲ್ಲಿಗಾದರೂ ಪ್ರಯಾಣಿಸುವಾಗ ಟಿಕೆಟ್ ಪಡೆದು ಪ್ರಯಾಣಿಸುತ್ತೇವೆ. ದೂರದ ಪ್ರಯಾಣಕ್ಕಾಗಿ ಮೊದಲೇ ಟಿಕೆಟ್ ರಿಸರ್ವ್ ಮಾಡುವ ಸೌಲಭ್ಯವೂ ಇದೆ. ಆದರರಿದು ಎರಡು ನಿಲ್ದಾಣಗಳು ಅಥವಾ ಗಮ್ಯಸ್ಥಾನಗಳ ನಡುವೆ ಪ್ರಯಾಣವನ್ನು ಅನುಮತಿಸುತ್ತದೆ.
ನೀವು ಮತ್ತೆ ಮತ್ತೆ ಟಿಕೆಟ್ ಖರೀದಿಸುವ ಜಂಜಾಟವಿಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಬಯಸಿದರೆ ಇದಕ್ಕಾಗಿ ವಿಶೇಷ ಟಿಕೆಟ್ ಸೌಕರ್ಯವೂ ಕೂಡ ಲಭ್ಯವಿದೆ. ಅದುವೇ, ಸರ್ಕ್ಯುಲರ್ ಜರ್ನಿ ಟಿಕೆಟ್.
ಸರ್ಕ್ಯುಲರ್ ಜರ್ನಿ ಟಿಕೆಟ್ ರೈಲ್ವೇಯಿಂದ ಲಭ್ಯವಿರುವ ವಿಶೇಷ ಟಿಕೆಟ್ ಆಗಿದೆ. ಒಮ್ಮೆ ಟಿಕೆಟ್ ಬುಕ್ ಮಾಡುವ ಮೂಲಕ 56 ದಿನಗಳವರೆಗೆ ಪ್ರಯಾಣಿಸಬಹುದು.
ಸರ್ಕ್ಯುಲರ್ ಜರ್ನಿ ಟಿಕೆಟ್ ಪಡೆಯುವ ಮೂಲಕ ಪ್ರಯಾಣಿಕರು ಒಂದೇ ಟಿಕೆಟ್‌ನಲ್ಲಿ 8 ವಿಭಿನ್ನ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಸಬಹುದು. ಆದರೆ, ಈ ಟಿಕೆಟ್‌ಗಳನ್ನು ನೇರವಾಗಿ ಟಿಕೆಟ್ ಕೌಂಟರ್‌ನಲ್ಲಿ ಖರೀದಿಸಲಾಗುವುದಿಲ್ಲ.
ವೆಬ್‌ಸೈಟ್ ಅಥವಾ ಟಿಕೆಟ್ ಕೌಂಟರ್ ಮೂಲಕ ಸರ್ಕ್ಯುಲರ್ ಟಿಕೆಟ್‌ಗಳ ಬುಕಿಂಗ್ ಸಾಧ್ಯವಿಲ್ಲ. ಸರ್ಕ್ಯುಲರ್ ಜರ್ನಿ ಟಿಕೆಟ್ ಅನ್ನು ಪಡೆಯಲು ಮೊದಲು ಝೋನಲ್/ವಲಯ ರೈಲ್ವೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
ನೀವು ಸುದೀರ್ಘ ಪ್ರವಾಸದಲ್ಲಿದ್ದರೆ ನೀವು ಹಲವಾರು ನಿಲ್ದಾಣಗಳಿಂದ ಟಿಕೆಟ್ ಖರೀದಿಸುವ ಅಗತ್ಯವಿಲ್ಲ. ಬದಲಿಗೆ ಈ ಸರ್ಕ್ಯುಲರ್ ಟಿಕೆಟ್ ಪಡೆಯುವ ಮೂಲಕ ಆರಾಮದಾಯಕಾವಿ ಪ್ರಯಾಣಿಸಬಹುದು. ಇದಕ್ಕಾಗಿ, ನಿಮ್ಮ ಉದ್ದೇಶಿತ ಪ್ರಯಾಣದ ಮಾರ್ಗದ ಬಗ್ಗೆ ರೈಲ್ವೆಗೆ ಮಾಹಿತಿ ನೀಡಬೇಕಾಗುತ್ತದೆ.
ನೀವು ಸರ್ಕ್ಯುಲರ್ ಟಿಕೆಟ್ ಖರೀದಿಸುವಾಗ ಎಲ್ಲಿಂದ ಪ್ರಯಾಣ ಆರಂಭಿಸುತ್ತೀರಿ, ಪ್ರಯಾಣ ಎಲ್ಲಿ ಕೊನೆಗೊಳ್ಳುತ್ತದೆ ಎಂಬ ಬಗ್ಗೆ ಝೋನಲ್ ರೈಲ್ವೇಗೆ ನಿಮ್ಮ ಪ್ರಯಾಣದ ಸಂಪೂರ್ಣ ಮಾಹಿತಿಯನ್ನು ನೀಡಬೇಕು.
ನಿಮ್ಮ ವೇಳಾಪಟ್ಟಿಯನ್ನು ಅನುಸರಿಸಿ ಸರ್ಕ್ಯುಲರ್ ಪ್ರಯಾಣದ ಟಿಕೆಟ್‌ಗಳನ್ನು ಖರೀದಿಸಬಹುದು. ಸರ್ಕ್ಯುಲರ್ ಟಿಕೆಟ್ ಪಡೆಯುವುದರಿಂದ ಹಲವಾರು ನಿಲ್ದಾಣಗಳಲ್ಲಿ ಪದೇ ಪದೇ ಟಿಕೆಟ್ ಖರೀದಿಸುವ ಚಿಂತೆ ಇರುವುದಿಲ್ಲ. ಇದು ಸಮಯವನ್ನಷ್ಟೇ ಅಲ್ಲ ಹಣವನ್ನೂ ಉಳಿಸುತ್ತದೆ.
ವಿವಿಧ ನಿಲ್ದಾಣಗಳಲ್ಲಿ ಟಿಕೆಟ್‌ಗಳನ್ನು ಖರೀದಿಸುವಾಗ ಅದರ ಬೆಲೆ ಹೆಚ್ಚಾಗಿರುತ್ತದೆ. ಆದರೆ, ಸರ್ಕ್ಯುಲರ್ ಟಿಕೆಟ್‌ನಲ್ಲಿ ಪ್ರಮಾಣಿತ ಪಾಯಿಂಟ್-ಟು-ಪಾಯಿಂಟ್ ದರಗಳಿಗಿಂತ ಕಡಿಮೆ ಬೆಲೆಯಲ್ಲಿ ಟಿಕೆಟ್ ಲಭ್ಯವಿರುತ್ತದೆ. ಇದನ್ನು ಟೆಲಿಸ್ಕೋಪಿಕ್ ದರ ಎಂದು ಕರೆಯಲಾಗುತ್ತದೆ.
ಈ ಸರ್ಕ್ಯುಲರ್ ಟಿಕೆಟ್ ಬಳಸಿ ನೀವು ಎಂಟು ನಿಲ್ದಾಣಗಳಲ್ಲಿ ಪ್ರಯಾಣಿಸಬಹುದು. ಇದು 56 ದಿನಗಳ ಮಾನ್ಯತೆಯನ್ನು ಹೊಂದಿರುತ್ತದೆ. ಅಗತ್ಯವಿದ್ದಲ್ಲಿ ನೀವು ವಲಯದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರನ್ನು ಅಥವಾ ಕೆಲವು ಪ್ರಮುಖ ನಿಲ್ದಾಣಗಳ ನಿಲ್ದಾಣ ವ್ಯವಸ್ಥಾಪಕರನ್ನು ಸಹ ಸಂಪರ್ಕಿಸಬಹುದು.