IPL 2021: ಈ ಆಟಗಾರರ ಭವಿಷ್ಯವನ್ನು ಹೊಳೆಯುವಂತೆ ಮಾಡಿದ ಐಪಿಎಲ್ 2021, 100 ಕೋಟಿ ಕ್ಲಬ್‌ಗೆ ಸೇರಿದ ಆಟಗಾರರಿವರು
ಎಂಎಸ್ ಧೋನಿ (MS Dhoni):- ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ (MS Dhoni) ಐಪಿಎಲ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ. ಧೋನಿ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 3 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಸಿಎಸ್‌ಕೆ ಅವರಿಗೆ 15 ಕೋಟಿ ಸಂಬಳ ನೀಡುತ್ತದೆ. ಧೋನಿ ಇದುವರೆಗೆ ಐಪಿಎಲ್ ನಿಂದ 137 ಕೋಟಿ ರೂ.ಗಿಂತ ಹೆಚ್ಚು ಸಂಪಾದಿಸಿದ್ದಾರೆ ಮತ್ತು ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಕೀರ್ತಿಗೂ ಇವರು ಪಾತ್ರರಾಗಿದ್ದಾರೆ.
ರೋಹಿತ್ ಶರ್ಮಾ (Rohit Sharma):- ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ (Rohit Sharma) ಅತ್ಯಂತ ಯಶಸ್ವಿ ಐಪಿಎಲ್ ನಾಯಕ. ಅವರು 2019ರಲ್ಲಿ ಐಪಿಎಲ್ ಗೆದ್ದ ತಕ್ಷಣ ದಾಖಲೆಯ 5 ಪ್ರಶಸ್ತಿಗಳನ್ನು ಸಾಧಿಸಿದ್ದರು. ಈ ಪಟ್ಟಿಯಲ್ಲಿ ರೋಹಿತ್ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್‌ನಿಂದ ಇದುವರೆಗೆ ಅವರ ಗಳಿಕೆ 131 ಕೋಟಿಗಿಂತಲೂ ಹೆಚ್ಚಾಗಿದೆ.
ವಿರಾಟ್ ಕೊಹ್ಲಿ (Virat Kohli) :- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಈ ಐಪಿಎಲ್ ಸರಣಿಯ ನಂತರ, ಅವರು ರೋಹಿತ್ ಮತ್ತು ಧೋನಿಯೊಂದಿಗೆ 130 ಕೋಟಿ ಕ್ಲಬ್‌ಗೆ ಸೇರುತ್ತಾರೆ. ಇದುವರೆಗೂ ಐಪಿಎಲ್‌ನಿಂದ ವಿರಾಟ್ ಗಳಿಕೆ 126.6 ಕೋಟಿ. ಅವರ ವೇತನ 17 ಕೋಟಿ ರೂ.
ಇದನ್ನೂ ಓದಿ- ಇವರೇ Virat Kohli ನಂತರ ಟೀಂ ಇಂಡಿಯಾ ಟಿ 20 ಸಾರಥ್ಯ ವಹಿಸಲಿರುವ ಆಟಗಾರ
ಸುರೇಶ್ ರೈನಾ (Suresh Raina) :- ಚೆನ್ನೈ ಸೂಪರ್ ಕಿಂಗ್ಸ್‌ನ ಸುರೇಶ್ ರೈನಾ (Suresh Raina) 2021 ರ ಸೀಸನ್‌ನಲ್ಲಿ 100 ಕ್ಲಬ್‌ಗೆ ಸೇರ್ಪಡೆಯಾದ ಭಾರತದ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದಾರೆ. ಅವರ ಸಂಬಳ 11 ಕೋಟಿ ಮತ್ತು ಇಲ್ಲಿಯವರೆಗೆ ಅವರು 99.7 ಕೋಟಿ ಗಳಿಸಿದ್ದರು, ಆದರೆ ಅವರು ಐಪಿಎಲ್ 2021 ರಲ್ಲಿ 100 ಕೋಟಿ ಕ್ಲಬ್‌ಗೆ ಸೇರಿದ್ದಾರೆ.
ಇದನ್ನೂ ಓದಿ- ಕರ್ನಾಟಕದ ಈ ಆಟಗಾರ ಭಾರತೀಯ ತಂಡದ ಭವಿಷ್ಯದ ನಾಯಕನಾಗಬೇಕು ಎಂದ ಗವಾಸ್ಕರ್
ಎಬಿ ಡಿ ವಿಲಿಯರ್ಸ್ (AB de Villiers) :- ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಎಬಿ ಡಿ ವಿಲಿಯರ್ಸ್ (AB de Villiers) 100 ಕ್ಲಬ್‌ಗೆ ಸೇರ್ಪಡೆಗೊಂಡ ಮೊದಲ ವಿದೇಶಿ ಆಟಗಾರ. ಅವರ ಸಂಬಳ 11 ಕೋಟಿ ರೂ. ಮತ್ತು ಅವರು ಐಪಿಎಲ್ 2021 ಸೀಸನ್‌ನಲ್ಲಿ ಈ ಕ್ಲಬ್‌ಗೆ ಸೇರಿಕೊಂಡಿದ್ದಾರೆ. ಈ ಸರಣಿಯ ಕೊನೆಯಲ್ಲಿ, ಅವರ ಗಳಿಕೆ 102.51 ಆಗಿರುತ್ತದೆ.