ವೃಷಭದಲ್ಲಿ ಗುರು.. ಈ ರಾಶಿಗಳ ಅದೃಷ್ಟ ಚಿನ್ನದಂತೆ ಹೊಳೆಯಲಿದೆ, ಗುರುಬಲದಿಂದ ವೃತ್ತಿಯಲ್ಲಿ ಅಪಾರ ಯಶಸ್ಸು.. ಸಂಪತ್ತು ದುಪ್ಪಟ್ಟಾಗುವುದು !

Tue, 25 Jun 2024-6:35 am,

ಮೇ 1 ರಂದು ವೃಷಭ ರಾಶಿಗೆ ಗುರು ಪ್ರವೇಶಿಸಿದ್ದಾನೆ. ಈ ಗುರು ಸಂಚಾರದಿಂದ ಕೆಲವು ರಾಶಿಗಳಿಗೆ ಆರ್ಥಿಕ ಲಾಭ ಮತ್ತು ವೃತ್ತಿಯಲ್ಲಿ ಅಪಾರ ಯಶಸ್ಸನ್ನು ತರುತ್ತದೆ. ಅದೃಷ್ಟ ಸದಾಕಾಲ ನಿಮ್ಮ ಜೊತೆಗಿರುತ್ತದೆ.  

ವೃಷಭ ರಾಶಿ: ವೃತ್ತಿಯಲ್ಲಿ ಪ್ರಗತಿ ಕಾಣುವಿರಿ. ಹಣಕ್ಕೆ ಸಂಬಂಧಿಸಿದ ಕೆಲವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಲು ಉತ್ತಮ ಸಮಯ. ಜೀವನದಲ್ಲಿ ಆರ್ಥಿಕ ಸ್ಥಿರತೆ ಇರುತ್ತದೆ.

ವೃಶ್ಚಿಕ ರಾಶಿ: ವ್ಯಾಪಾರದಲ್ಲಿ ಅಪಾರ ಲಾಭ ಪಡೆಯುತ್ತಾರೆ. ವೃತ್ತಿಜೀವನದಲ್ಲಿ ನೀವು ಎದುರಿಸುತ್ತಿರುವ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ. ಪ್ರಭಾವಿ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತೀರಿ.

ಸಿಂಹ ರಾಶಿ: ಉದ್ಯೋಗದಲ್ಲಿನ ಪ್ರಗತಿಯಿಂದಾಗಿ ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ವೇತನ ಹೆಚ್ಚಳದ ಜತೆಗೆ ಬಡ್ತಿಯೂ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಲಾಭ ಸಿಗುವುದು. ಬಹುದಿನದ ಕನಸೊಂದು ನನಸಾಗುವುದು.

ಮೇಷ ರಾಶಿ: ಅವಿವಾಹಿತರಿಗೆ ದುವೆ ಫಿಕ್ಸ್‌ ಆಗಲಿದೆ. ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯುವಿರಿ. ನಿಮ್ಮ ಆದಾಯ ಹೆಚ್ಚಾಗುವುದು. ಅದೃಷ್ಟದ ಬಲದಿಂದ ಹಿಡಿದ ಕೆಲಸಗಳಲ್ಲಿ ಜಯ ಸಿಗುವುದು. ಸಂತೋಷ ಹೆಚ್ಚಾಗುವುದು.

ಮಕರ ರಾಶಿ: ವೃತ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ. ಹೊಸ ಉದ್ಯೋಗಾವಕಾಶಗಳನ್ನು ಸಹ ಪಡೆಯಬಹುದು. ಆರ್ಥಿಕ ಜೀವನದಲ್ಲಿ ಪ್ರಗತಿ ಕಂಡುಬರಲಿದೆ. ಆದಾಯವು ಹೆಚ್ಚಾಗುತ್ತದೆ.

ಕರ್ಕ ರಾಶಿ: ಅನೇಕ ಒಳ್ಳೆಯ ಸುದ್ದಿಗಳು ಬರಲಿವೆ. ವೃತ್ತಿಜೀವನದಲ್ಲಿ ಅಪಾರ ಯಶಸ್ಸನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಬಡ್ತಿಯೊಂದಿಗೆ ಉತ್ತಮ ಇನ್ಕ್ರಿಮೆಂಟ್ ಪಡೆಯಬಹುದು. ವ್ಯಾಪಾರದಲ್ಲಿಯೂ ನೀವು ಲಾಭವನ್ನು ಪಡೆಯುತ್ತೀರಿ.   

ಸೂಚನೆ: ಪ್ರಿಯ ಓದುಗರೇ ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link