ಇನ್ನೊಂದು ವಾರದಲ್ಲಿ ಖುಲಾಯಿಸುವುದು ಈ ರಾಶಿಯವರ ಅದೃಷ್ಟ
ಸಂಪತ್ತು ಮತ್ತು ಐಷಾರಾಮಿ ಪ್ರತೀಕವಾಗಿರುವ ಶುಕ್ರ ಮತ್ತು ಯಶಸ್ಸಿನ ಗ್ರಹವಾದ ಸೂರ್ಯನ ಸಂಯೋಜನೆಯು ಕೆಲವು ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ಸಮಯದಲ್ಲಿ ಈ ರಾಶಿಯವರ ಜೀವನ ಸುಖ ಸಂತೋಷದಿಂದ ತುಂಬಿಕೊಳ್ಳುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ದೊಡ್ಡ ಮಟ್ಟದ ಪ್ರಗತಿಯನ್ನು ಪಡೆಯುವ ಅವಕಾಶಗಳು ಎದುರಾಗಲಿವೆ. ಹಾಗಿದ್ದರೆ ಸೂರ್ಯ-ಶುಕ್ರ ಸಂಯೋಜನೆಯು ಯಾವ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ ನೋಡೋಣ.
ಮೇಷ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಜನೆಯು ಮೇಷ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಈ ರಾಶಿಯವರು ದೊಡ್ಡ ಮಟ್ಟದಲ್ಲಿ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ. ಆದಾಯದಲ್ಲಿ ಹೆಚ್ಚಳವಾಗಲಿದೆ. ಆರ್ಥಿಕವಾಗಿ, ಈ ಸಮಯವು ಉತ್ತಮವಾಗಿರಲಿದೆ. ಅಗತ್ಯವಿದ್ದಾಗ ಯಾವ ಮೂಲದಿಂದಾದರೂ ಹಣ ಬಂದು ಕೈ ಸೇರುತ್ತದೆ. ಕೆಲಸಕ್ಕೆ ಹೊಸ ಅವಕಾಶಗಳು ಸಿಗಲಿವೆ.
ವೃಷಭ ರಾಶಿ : ವೃಷಭ ರಾಶಿಯವರಿಗೆ ಸೂರ್ಯ ಮತ್ತು ಶುಕ್ರರ ಸಂಯೋಗವು ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ರಾಶಿಯವರು ಹೊಸ ಉದ್ಯೋಗದ ಆಫರ್ ಪಡೆಯಬಹುದು. ಇಲ್ಲಿಯವರೆಗೆ ನಿರೀಕ್ಷೆಯಲ್ಲಿದ್ದ ದೊಡ್ಡ ಪೋಸ್ಟ್ ತಾನಾಗಿಯೇ ಒಲಿದು ಬರಲಿದೆ. ಆದಾಯ ಹೆಚ್ಚಲಿದೆ. ಗೌರವ ಹೆಚ್ಚಾಗಲಿದೆ. ವ್ಯಾಪಾರಸ್ಥರಿಗೆ ಲಾಭವಾಗಲಿದೆ.
ಮಿಥುನ ರಾಶಿ : ಸೂರ್ಯ ಮತ್ತು ಶುಕ್ರರ ಸಂಯೋಜನೆಯು ಮಿಥುನ ರಾಶಿಯವರಿಗೆ ಸಂಪತ್ತನ್ನು ತಂದು ಕೊಡುತ್ತದೆ. ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟ ಬೆನ್ನಿಗೆ ನಿಲ್ಲುತ್ತದೆ. ಇಲ್ಲಿಯವರೆಗೆ ಪೂರ್ಣವಾಗದೆ ನಿಂತಿದ್ದ ಕೆಲಸಗಳು ಮತ್ತೆ ಚುರುಕು ಪಡೆಯಲಿವೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಕೆಲಸದ ನಿಮಿತ್ತ ಪ್ರಯಾಣ ಬೆಳೆಸಬೇಕಾಗಬಹುದು.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)