Karnataka Election 2023: ವರುಣಾದಲ್ಲಿ ಸಿದ್ದರಾಮಯ್ಯಗೆ ಸಾಥ್ ನೀಡಿದ ಸ್ಟಾರ್ ನಟ-ನಟಿಯರು
ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪರ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತಯಾಚನೆ ಮಾಡಿದ್ದಾರೆ. ರೋಡ್ ಶೋನಲ್ಲಿ ಭಾಗಿಯಾದ ಶಿವಣ್ಣ ಸಿದ್ದರಾಮಯ್ಯರಗೆ ಮತ ನೀಡುವಂತೆ ಕ್ಷೇತ್ರದ ಜನರಲ್ಲಿ ಮನವಿ ಮಾಡಿದರು.
ಮಾಜಿ ಸಿಎಂ ಸಿದ್ದರಾಮಯ್ಯರ ಪರ ನಟಿ ನಿಶ್ವಿಕಾ ನಾಯ್ಡು ಸಹ ಮತಪ್ರಚಾರ ನಡೆಸಿದ್ದಾರೆ. ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ಅವತ ಪತ್ನಿ ಗೀತಾ ಶಿವರಾಜಕುಮಾರ್ ಜೊತೆಗೆ ನಟಿ ನಿಶ್ಚಿಕಾ ಸಹ ರೋಡ್ ಶೋನಲ್ಲಿ ಭಾಗಿಯಾಗಿ ಸಿದ್ದರಾಮಯ್ಯರ ಪರ ಮತಬೇಟೆ ನಡೆಸಿದರು.
ಸ್ಯಾಂಡಲ್‍ವುಡ್ ನಟಿ, ಮಾಜಿ ಸಂಸದೆ ರಮ್ಯಾ ಕೂಡ ಮಾಜಿ ಸಿಎಂ ಸಿದ್ದರಾಮಯ್ಯರ ಪರ ವರುಣಾ ಕ್ಷೇತ್ರದಲ್ಲಿ ಮತಪ್ರಚಾರ ನಡೆಸಿದರು. ಸಿದ್ದರಾಮಯ್ಯರಿಗೆ ಮತ ನೀಡಬೇಕೆಂದು ರಮ್ಯಾ ಇದೇ ವೇಳೆ ಜನರಲ್ಲಿ ಮನವಿ ಮಾಡಿಕೊಂಡರು.
ಸ್ಯಾಂಡಲ್‍ವುಡ್ ಕರಿಚಿರತೆ ಖ್ಯಾತಿಯ ನಟ ದುನಿಯಾ ವಿಜಯ್ ಸಹ ಮಾಜಿ ಸಿಎಂ ಸಿದ್ದರಾಮಯ್ಯ ಪರ ಭರ್ಜರಿ ಪ್ರಚಾರ ನಡೆಸಿದರು. ಸಿದ್ದರಾಮಯ್ಯರಿಗೆ ಮತ ನೀಡಬೇಕೆಂದು ವಿಜಿ ಕ್ಷೇತ್ರದ ಜನರಲ್ಲಿ ಮನವಿ ಮಾಡಿಕೊಂಡರು.
ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ 9 ದಿನ ಬಾಕಿ ಇದೆ. ಹೀಗಾಗಿ ವರುಣಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಸಿದ್ದರಾಮಯ್ಯರನ್ನು ಮಣಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಆದರೆ ವಿ.ಸೋಮಣ್ಣ ವಿರುದ್ಧ ಸಿದ್ದರಾಮಯ್ಯರೇ ಗೆಲ್ಲುವುದು ಅಂತಾ ಕ್ಷೇತ್ರದ ಜನರು ಹೇಳುತ್ತಿದ್ದಾರೆ.