ಭಾರತದ ಮೂರನೇ ಶ್ರೀಮಂತ ಸಿಎಂ ಸಿದ್ದರಾಮಯ್ಯ !ಇವರು ಎಷ್ಟು ಕೋಟಿ ಆಸ್ತಿ ಒಡೆಯ? ನೀವೇ ನೋಡಿ !
ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್‌ನ ವರದಿಯ ಪ್ರಕಾರ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶದ ಮೂರನೇ ಸಿರಿವಂತ ಸಿಎಂ ಆಗಿ ಹೊರ ಹೊಮ್ಮಿದ್ದಾರೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶದ ಅರುಂಚಲ್ ಪ್ರದೇಶದ ಪೇಮಾ ಖಂಡು ನಂತರ ಕನಾಟಕ ಸಿಎಂ ಸಿದ್ದರಾಮಯ್ಯನವರೇ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ.
ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು 931 ಕೋಟಿ ಆಸ್ತಿ ಒಡೆಯನಾಗಿದ್ದರೆ, ಅರುಣಾಚಲ ಪ್ರದೇಶದ ಖಂಡು 332 ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಇನ್ನು ನಮ್ಮ ರಾಜ್ಯದ ಅಂದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 51 ಕೋಟಿ ರೂ. ಮೌಲ್ಯದ ಆಸ್ತಿ ಒಡೆಯ ಎಂದು ಹೇಳಲಾಗಿದೆ.
ಸಿಎಂ ಸಿದ್ದರಾಮಯ್ಯ 21.35 ಕೋಟಿ ಚರಾಸ್ತಿ ಹೊಂದಿದ್ದರೆ, 29.42 ಕೋಟಿ ಸ್ಥಿರಾಸ್ತಿ ಹೊಂದಿದ್ದರೆ. ಸಿದ್ದರಾಮಯ್ಯನ ಪತ್ನಿ ಪಾರ್ವತಿ ಹೆಸರಿನಲ್ಲಿ 11.26 ಕೋಟಿ ಸ್ಥಿರಾಸ್ತಿ ಇದೆ. ಜೊತೆಗೆ 20.85 ಕೋಟಿ ಮೌಲ್ಯದ ಚರಾಸ್ತಿಯನ್ನು ಕೂಡಾ ಹೊಂದಿದ್ದಾರೆ.
ಇತರ ಮುಖ್ಯಮಂತ್ರಿಗಳ ಆರ್ಥಿಕ ಸ್ಥಿತಿಯನ್ನೂ ವರದಿ ಎತ್ತಿ ತೋರಿಸುತ್ತದೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಜಮ್ಮು ಮತ್ತು ಕಾಶ್ಮೀರದ ಒಮರ್ ಅಬ್ದುಲ್ಲಾ ಮತ್ತು ಕೇರಳದ ಪಿಣರಾಯಿ ವಿಜಯನ್ ಅವರು ಅತ್ಯಂತ ಕಡಿಮೆ ಆಸ್ತಿಯನ್ನು ಹೊಂದಿದ್ದಾರೆ ಎಂದು ವರದಿ ಹೇಳುತ್ತದೆ. ಅವರ ಆಸ್ತಿ ಮೌಲ್ಯ ಕ್ರಮವಾಗಿ 15 ಲಕ್ಷ, 55 ಲಕ್ಷ ಮತ್ತು 1.18 ಕೋಟಿ ರೂ.ವಂತೆ.
ಭಾರತದ ಎಲ್ಲಾ ಮುಖ್ಯಮಂತ್ರಿಗಳ ಒಟ್ಟು ಆಸ್ತಿ ಒಟ್ಟು 1,630 ಕೋಟಿ ರೂ. ಪ್ರತಿ ಸಿಎಂ ಸರಾಸರಿ 52.59 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಹೆಚ್ಚುವರಿಯಾಗಿ, ಅವರ ಸ್ವಯಂ ವರದಿ ವಾರ್ಷಿಕ ಆದಾಯ ಸರಾಸರಿ ಸುಮಾರು 13.6 ಲಕ್ಷ ರೂ.ಆಗಿದೆ.
ಇನ್ನು ಯಾವ ಮುಖ್ಯಮಂತ್ರಿ ಮೇಲೆ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ನೋಡುವುದಾದರೆ 13 ಪ್ರಕರಣಗಳೊಂದಿಗೆ ಸಿದ್ದರಾಮಯ್ಯ ನಾಲ್ಕನೇ ಸ್ಥಾನದಲ್ಲಿದ್ದಾರೆ.ಈ ಪ್ರಕರಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡಿರುವ ಮುಡಾ ನಿವೇಶನ ಹಂಚಿಕೆ ಹಗರಣ ಸೇರಿಲ್ಲ.
ಹೆಚ್ಚು ಕಾನೂನು ಸವಾಲುಗಳನ್ನು ಎದುರಿಸುತ್ತಿರುವ ಸಿಎಂ ಎಂದರೆ ತೆಲಂಗಾಣದ ಕಾಂಗ್ರೆಸ್‌ನ ಅನುಮುಲಾ ರೇವಂತ್ ರೆಡ್ಡಿ. ಅವರ ವಿರುದ್ಧ 89 ಪ್ರಕರಣಗಳು ದಾಖಲಾಗಿವೆ.