Gemstones: ನಿಮ್ಮ ರಾಶಿಗೆ ಅನುಗುಣವಾಗಿ ಯಾವ ರತ್ನ ಧರಿಸಬೇಕು? ಇಲ್ಲಿದೆ ಮಾಹಿತಿ

Sat, 26 Jun 2021-11:15 am,

ಮೇಷ ರಾಶಿಯವರಿಗೆ ಮಂಗಳ ಅಧಿಪತಿ. ಜ್ಯೋತಿಷ್ಯ ಪ್ರಕಾರ, ಈ ರಾಶಿಚಕ್ರದ ಜನರು ಹವಳದ ರತ್ನಗಳನ್ನು ಧರಿಸಬೇಕು ಎಂದು ಹೇಳಲಾಗುತ್ತದೆ.

ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ. ಈ ರಾಶಿಚಕ್ರ ಜನರು ವಜ್ರ ಧರಿಸುವುದರಿಂದ ಪ್ರಯೋಜನ ಪಡೆಯುತ್ತಾರೆ.

ಮಿಥುನ ರಾಶಿಯ ಅಧಿಪತಿ ಬುಧ. ಈ ರಾಶಿಯವರು ಪಚ್ಚೆ ಧರಿಸುವುದರಿಂದ ಪ್ರಯೋಜನ ಪಡೆಯುತ್ತಾರೆ. 

ಕರ್ಕಾಟಕ ರಾಶಿಗೆ ಅಧಿಪತಿ ಚಂದ್ರ. ಹಾಗಾಗಿ ಈ ರಾಶಿಯ ಜನರು ಮುತ್ತನ್ನು ಧರಿಸಬೇಕು. ಮುತ್ತು ಧರಿಸುವುದರಿಂದ ಮಾನಸಿಕ ಶಾಂತಿ ಪಡೆಯುತ್ತಾರೆ ಎನ್ನಲಾಗುತ್ತದೆ.

ಇದನ್ನೂ ಓದಿ- Gemology: ರತ್ನಗಳನ್ನು ಧರಿಸುವಾಗ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ

ಸಿಂಹ ರಾಶಿಯ ಅಧಿಪತಿ ಸೂರ್ಯ. ಈ ರಾಶಿಯ ಜನರು ಸ್ಟಾರ್ ರೂಬಿ ರತ್ನವನ್ನು ಧರಿಸಿದರೆ ಒಳಿತು ಎಂದು ಹೇಳಲಾಗುತ್ತದೆ.

ಕನ್ಯಾ ರಾಶಿಯ ಅಧಿಪತಿ ಬುದ್ಧ (Budha). ಉತ್ತಮ ಫಲಿತಾಂಶಗಳನ್ನು ಪಡೆಯಲು ಈ ರಾಶಿಯವರು ಪಚ್ಚೆ ರತ್ನಗಳನ್ನು ಧರಿಸಲು ಸೂಚಿಸಲಾಗುತ್ತದೆ.

ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಚಕ್ರದ ಜನರು ವಜ್ರ ಧರಿಸುವುದರಿಂದ ಪ್ರಯೋಜನವಾಗುವುದು.

ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಈ ರಾಶಿಯ ಜನರು ಹವಳ ಧರಿಸುವುದರಿಂದ ಉತ್ತಮ ಪ್ರಯೋಜನ ಪಡೆಯುತ್ತಾರೆ.

ಇದನ್ನೂ ಓದಿ- Dream Interpretation: ಕನಸಿನಲ್ಲಿ ಯಾವ ದೇವರನ್ನು ಕಂಡರೆ ಏನು ಫಲ

ಧನು ರಾಶಿ ಚಕ್ರದ ಅಧಿಪತಿ ಗುರು. ಈ ರಾಶಿಯವರು ಕನಕ ಪುಷ್ಯರಾಗ ಧಾರಣೆ ಮಾಡಬಹುದು  

ಮಕರ ರಾಶಿಯ ಅಧಿಪತಿ ಶನಿ ದೇವ. ಈ ರಾಶಿಯ ಜನರು ನೀಲಮಣಿ ರತ್ನಗಳನ್ನು ಧರಿಸುವುದರಿಂದ ಪ್ರಯೋಜನ ಪಡೆಯುತ್ತಾರೆ.

ಕುಂಭ ರಾಶಿಗೂ ಕೂಡ ಶನಿ ದೇವರೇ ಅಧಿಪತಿ. ಈ ರಾಶಿಯ ಜನರು ನೀಲಮಣಿ ರತ್ನಗಳನ್ನು ಧರಿಸುವುದರಿಂದ ಪ್ರಯೋಜನ ಪಡೆಯುತ್ತಾರೆ. 

ಮೀನ ರಾಶಿಯ ಅಧಿಪತಿ ಗುರು. ಈ ರಾಶಿಯ ಜನರು ಕೂಡ ಕನಕ ಪುಷ್ಯರಾಗ ಧಾರಣೆ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ನಂಬಿಕೆಗಳ ಆಧಾರದ ಮೇಲೆ ಆಗಿದೆ. ಝೀ ಹಿಂದೂಸ್ಥಾನ್ ಕನ್ನಡ ಅವುಗಳನ್ನು ದೃಢೀಕರಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link