ಧಾರವಾಡದಲ್ಲಿ ಮಹಿಳಾ ಟೆನಿಸ್ ಪಂದ್ಯಾವಳಿಗಳು ಆರಂಭಗೊಳ್ಳಲಿ- ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್

Tue, 17 Oct 2023-4:02 pm,

ಕಾರ್ಯಕ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಸಂತೋಷಕುಮಾರ ಬಿರಾದಾರ ಉಪಸ್ಥಿತರಿದ್ದರು. ಟೆನ್ನಿಸ್ ಅಸೋಸಿಯೇಷನ್ ಕಾರ್ಯದರ್ಶಿ ಸಂದೀಪ ಬಣವಿ ವಂದಿಸಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, 17 ವರ್ಷದ ನಂತರ ಧಾರವಾಡದಲ್ಲಿ ಅಂತರಾಷ್ಟ್ರೀಯ ಟೆನ್ನಿಸ್ ಪಂದ್ಯಾವಳಿ ಜರುಗುತ್ತಿದ್ದು, 12 ದೇಶಗಳ 45 ಆಟಗಾರರು ಭಾಗವಹಿಸಲಿದ್ದಾರೆ. ಅಂತಿಮ ಡಬಲ್ಸ್ 21 ರಂದು ಹಾಗೂ ಸಿಂಗಲ್ಸ್ 22 ರಂದು ಜರುಗಲಿವೆ ಎಂದರು.

 

ಈ ಸಂದರ್ಭದಲ್ಲಿ ಮೊಹಮ್ಮದ್ ಅಜರುದ್ದೀನ್ ಅವರಿಗೆ ಧಾರವಾಡ ಪೇಡಾ ಕಾಣಿಕೆಯಾಗಿ ನೀಡಲಾಯಿತು.

 

1937 ರಲ್ಲಿ ಆರಂಭಗೊಂಡಿರುವ ಈ ಟೆನ್ನಿಸ್ ಕೋರ್ಟ್‍ನಲ್ಲಿ 5 ಸೌರಚಾಲಿತ ಹಸಿರು ಕೋರ್ಟ್‍ಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಈ ಪಂದ್ಯಾವಳಿಯು ಇಡೀ ಉತ್ತರ ಕರ್ನಾಟಕಕ್ಕೆ ಮನ್ನಣೆ ತಂದಿದೆ ಎಂದು ತಿಳಿಸಿದರು. ಸದ್ಯ ಕ್ರಿಕೆಟ್ ಹೆಚ್ಚಾಗಿ ಬೆಳೆದಿದೆ. ಉಳಿದ ಕ್ರೀಡೆಗಳಿಗೂ ಮನ್ನಣೆ ದೊರೆಯಬೇಕಿದೆ. ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದ ಪಂದ್ಯಗಳು ಧಾರವಾಡದಲ್ಲಿ ನಡೆಯಲಿ ಎಂದು ಸಚಿವ ಸಂತೋಷ್ ಲಾಡ್ ಅವರು ಹಾರೈಸಿದರು.

ಪಂದ್ಯಾವಳಿಯನ್ನು ಉದ್ಘಾಟಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಧಾರವಾಡದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಿರುವ ಮೊಹಮ್ಮದ್ ಅಜರುದ್ದೀನ್ ಪಾಲ್ಗೊಂಡಿರುವುದು ಗೌರವ ತಂದಿದೆ ಎಂದರು. ಪಂದ್ಯಾವಳಿಗಳನ್ನು ಅತ್ಯುತ್ತಮವಾಗಿ ಅಚ್ಚುಕಟ್ಟಾಗಿ ಆಯೋಜಿಸಿರುವ ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ವಿಶೇಷ ಕಾಳಜಿ ಹಾಗೂ ಶ್ರಮ ವಹಿಸಿರುವುದು ಸರಕಾರಕ್ಕೆ ಗೌರವ ತಂದಿದೆ. 

ಈ ಬಾರಿ ಕೇವಲ ಪುರುಷರಿಗೆ ಈ ಪಂದ್ಯಾವಳಿ ಸೀಮಿತವಾಗಿದ್ದು, ಮುಂದಿನ ಬಾರಿ ಧಾರವಾಡ ಜಿಲ್ಲೆಯಲ್ಲಿ ಮಹಿಳಾ ಟೆನ್ನಿಸ್ ಆಯೋಜಿಸಿದ್ದಲ್ಲಿ ಹೆಚ್ಚು ಆಕರ್ಷಣೀಯವಾಗಲಿದೆ ಎಂದರು.

ಈ ಪುರುಷರ ಟೆನ್ನಿಸ್ ಪಂದ್ಯಾವಳಿಯಲ್ಲಿ ವಿದೇಶಿ ಆಟಗಾರರು ಸಹ ಪಾಲ್ಗೊಳ್ಳುತ್ತಿರುವುದರಿಂದ ಅವರಿಗೆ ಸ್ಥಳೀಯ ಪ್ರದೇಶದ ಬಗ್ಗೆ ಪರಿಚಯವಾಗುತ್ತದೆ. 

ತಮಗೆ ಹೆಚ್ಚಾಗಿ ಕ್ರಿಕೆಟ್ ಉದ್ಘಾಟನೆಗೆ ಆಹ್ವಾನವಿರುತ್ತದೆ. ಕ್ರಿಕೆಟ್‍ಗೆ ವಿಶ್ವದಲ್ಲೆಡೆ ಹೆಚ್ಚು ಪ್ರೋತ್ಸಾಹ ದೊರೆತಂತೆ ಉಳಿದ ಆಟಗಳಿಗೂ ಹೆಚ್ಚೆಚ್ಚು ಉತ್ತೇಜನ ಪ್ರೋತ್ಸಾಹ ದೊರೆಯಬೇಕೆಂಬ ಉದ್ದೇಶದಿಂದ ನಾನು ಟೆನ್ನಿಸ್ ಪಂದ್ಯಾವಳಿಗೆ ಬಂದಿರುವುದಾಗಿ ಅವರು ತಿಳಿಸಿದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link