ಜನಧನ್ ಖಾತೆದಾರರು 1.30 ಲಕ್ಷ ರೂ. ಪ್ರಯೋಜನ ಪಡೆಯಲು ಇಂದೇ ಈ ಕೆಲಸ ಮಾಡಿ

Thu, 12 Nov 2020-9:46 am,

ನವದೆಹಲಿ: ನೀವು ಜನ ಧನ್ ಖಾತೆ (PM Jan Dhan Account) ಹೊಂದಿರುವವರಾಗಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿದೆ. ಸರ್ಕಾರದ ವತಿಯಿಂದ ಯಾವುದೇ ಪ್ರಯೋಜನವನ್ನು ಪಡೆಯಲು ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಜನ ಧನ್ ಖಾತೆಗೆ ಲಿಂಕ್ ಮಾಡಬೇಕು.

ವಾಸ್ತವವಾಗಿ ಜನ ಧನ್ ಖಾತೆ ಗ್ರಾಹಕರಿಗೆ ಅನೇಕ ಸೌಲಭ್ಯಗಳೊಂದಿಗೆ 1 ಲಕ್ಷ ರೂ. ಅಪಘಾತ ವಿಮೆ ಕೂಡ ದೊರೆಯುತ್ತದೆ. ಆದರೆ ನಿಮ್ಮ ಖಾತೆಯನ್ನು ನೀವು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮಗೆ ಈ ಲಾಭ ದೊರೆಯುವುದಿಲ್ಲ. ಇದರಿಂದಾಗಿ ನೀವು ಒಂದು ಲಕ್ಷ ರೂಪಾಯಿಗಳನ್ನು ಕಳೆದುಕೊಳ್ಳುತ್ತೀರಿ. ಇದಲ್ಲದೆ ನೀವು 30000 ರೂ.ಗಳ ಆಕ್ಸಿಡೆಂಟಲ್ ಡೆತ್ ಇನ್ಶುರೆನ್ಸ್ ಕವರ್ ಅನ್ನು ಸಹ ಪಡೆಯುತ್ತೀರಿ. ಇದು ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದರೆ ಮಾತ್ರ ಲಭ್ಯವಿದೆ.

ಇದನ್ನೂ ಓದಿ : ಉಳಿತಾಯ ಖಾತೆಯನ್ನು JanDhan ಖಾತೆಯಾಗಿ ಬದಲಾಯಿಸಿ ಪಡೆಯಿರಿ ಸರ್ಕಾರದ ಹಲವು ಪ್ರಯೋಜನ

1. ನೀವು ಬ್ಯಾಂಕ್‌ಗೆ ಹೋಗಿ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು. 2. ನಿಮ್ಮ ಪಾಸ್‌ಬುಕ್ ಆಧಾರ್ ಕಾರ್ಡ್‌ನ ಫೋಟೋ ನಕಲನ್ನು ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ಬ್ಯಾಂಕಿನಲ್ಲಿ ನೀಡಿ. 3. ಅನೇಕ ಬ್ಯಾಂಕುಗಳು ಈಗ ಸಂದೇಶಗಳ ಮೂಲಕ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುತ್ತಿವೆ.  

1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಸಂದೇಶ ಪೆಟ್ಟಿಗೆಯಲ್ಲಿ ಹೋಗಿ ಯುಐಡಿ <SPACE> ಆಧಾರ್ ಸಂಖ್ಯೆ <SPACE> ಖಾತೆ ಸಂಖ್ಯೆಯನ್ನು 567676 ಗೆ ಕಳುಹಿಸಿ, ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ಗೆ ಲಿಂಕ್ ಮಾಡಲಾಗುತ್ತದೆ. 2. ನಿಮ್ಮ ಆಧಾರ್ ಮತ್ತು ಬ್ಯಾಂಕ್ ನೀಡಿದ ಮೊಬೈಲ್ ಸಂಖ್ಯೆಗಳು ವಿಭಿನ್ನವಾಗಿದ್ದರೆ ಲಿಂಕ್ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. 3. ಇದಲ್ಲದೆ ನಿಮ್ಮ ಹತ್ತಿರದ ಎಟಿಎಂನಿಂದ ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.  

ಆಧಾರ್ ಕಾರ್ಡ್ ಪಾಸ್‌ಪೋರ್ಟ್ ಡ್ರೈವಿಂಗ್ ಲೈಸೆನ್ಸ್  ಪ್ಯಾನ್ ಕಾರ್ಡ್ ಮತದಾರರ ಕಾರ್ಡ್ ಎನ್‌ಆರ್‌ಇಜಿಎ ಜಾಬ್ ಕಾರ್ಡ್

ZEENEWS TRENDING STORIES

By continuing to use the site, you agree to the use of cookies. You can find out more by Tapping this link