ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ!
ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಶಾಕ್ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಇಲಾಖೆ ಅಧೀಕ್ಷಕ ಮೋಹನ್ ಕೆ, ಎನ್ ಕೆ ತಿಪ್ಪೇಸ್ವಾಮಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕನಿಗೆ ಶಾಕ್ ನೀಡಿದ್ದಾರೆ.
ಭ್ರಷ್ಟಾಚಾರ ಆರೋಪ ಕೇಳಿ ಬಂದಿರೋ ಹಿನ್ನೆಲೆ ಎಸ್ ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ದಾಳಿ ನಡೆಸಿರೋ ಲೋಕಾಯುಕ್ತ ಅಧಿಕಾರಿಗಳು, ಇಬ್ಬರು ಅಧಿಕಾರಿಗಳ ಮನೆ, ಕಚೇರಿ ಇನ್ನಿತರೆ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ.
ಲೋಕಾಯುಕ್ತ ದಾಳಿ ಸಂದರ್ಭದಲ್ಲಿ ಗಿರಿನಗರದ 4ನೇ ಫೇಸ್ ವಿಶ್ವೇಶ್ವರಯ್ಯ ರಸ್ತೆ ಬಳಿ ಇರುವ ಡೈರೆಕ್ಟರ್ ಆಫ್ ಹೋಮ್ ಪ್ಲಾನಿಂಗ್ ಕಂಟ್ರಿ ತಿಪ್ಪೇಸ್ವಾಮಿ ಅವರ ಬಂಗಲೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ.
ಇನ್ನೂ ತಿಪ್ಪೇಸ್ವಾಮಿ ಅವರ ಮನೆಯಲ್ಲಿ 28ಕ್ಕೂ ಹೆಚ್ಚು ಜೊತೆ ಓಲೆ, ಎಂಟಕ್ಕೂ ಐಷಾರಾಮಿ ವಾಚ್ ಗಳು, 23ಕ್ಕೂ ಹೆಚ್ಚು ಚಿನ್ನದ ಸರ, ಮುತ್ತಿನ ಪಂಡೆಂಟ್ ಇರುವ ಸರ, ಉಂಗುರಗಳು ಮತ್ತು ಕೆಜಿಗಟ್ಟಲೆ ಬೆಳ್ಳಿ ವಸ್ತುಗಳು ಪತ್ತೆಯಾದ ಹಿನ್ನಲೆಯಲ್ಲಿ ಇವುಗಳ ಪರಿಶೀಲನೆಗಾಗಿ ಗಿರಿನಗರದ ಮನೆಗೆ ಅಕ್ಕಸಾಲಿಗರನ್ನು ಕೂಡ ಕರೆಸಲಾಗಿದೆ.
ಡೈರೆಕ್ಟರ್ ಆಫ್ ಹೋಮ್ ಪ್ಲಾನಿಂಗ್ ಕಂಟ್ರಿ ತಿಪ್ಪೇಸ್ವಾಮಿ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನ, ಬೆಳ್ಳಿ, ಏಳು ಲಕ್ಷ ನಗದು, ಆಸ್ತಿಪತ್ರ ಪತ್ತೆಯಾಗಿದ್ದು ಲೋಕಾ ಅಧಿಕಾರಿಗಳು ತಮ್ಮ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ.