ʼಹರಿವರಾಸನಂʼ ಹಾಡಿನ ಹಿಂದಿದೆ ಅದ್ಭುತ ಇತಿಹಾಸ..! `ಮಣಿಕಂಠ`ನನ್ನೇ ಮಲಗಿಸುವಂತಹ ಈ ಗೀತೆ ಹುಟ್ಟಿದ್ದು ಹೇಗೆ ಗೊತ್ತೆ..?

Wed, 27 Nov 2024-5:22 pm,

ಅಯ್ಯಪ್ಪ ಸ್ವಾಮಿ ಭಕ್ತಿ ಪ್ರಧಾನ ಗೀತೆ "ಹರಿವರಾಸನಂ" ಬಗ್ಗೆ ಸಾಕಷ್ಟು ಮಾಹಿತಿಗಳು ಹರಿದಾಡುತ್ತಿವೆ. ಇವುಗಳಲ್ಲಿ ಹಲವು ಭಕ್ತರ ಮನಸ್ಸಿನಲ್ಲಿ ಗೊಂದಲ ಮತ್ತು ಸಂದೇಹಕ್ಕೆ ಕಾರಣವಾಗಿವೆ. ಈ ಹಾಡು ಅಯ್ಯಪ್ಪನನ್ನ ನಿದ್ದೆಗೆ ಜಾರುವಂತೆ ಮಾಡುತ್ತೆ ಎನ್ನುವ ನಂಬಿಕೆಯೂ ಇದೆ.. ಹಾಗಾಗಿ ಇದನ್ನು ಹಗಲಿನಲ್ಲಿ ಹಾಡಬಾರದು ಎನ್ನುವ ಮಾತಿದೆ.. ಹಾಗಿದ್ರೆ ಇದು ಸತ್ಯವೇ..? ಬನ್ನಿ ತಿಳಿಯೋಣ..  

ಈ ಅಭಿಪ್ರಾಯಗಳಿಗೆ ಯಾವುದೇ ಪುರಾವೆಗಳು ಅಥವಾ ಮೂಲಗಳಿಲ್ಲ. ಅಯ್ಯಪ್ಪನ ಮಹಿಮೆಯನ್ನು ಸಾರುವ ಅನೇಕ ಹಾಡುಗಳಿದ್ದರೂ "ಹರಿವರಾಸನಂ" ಅತ್ಯಂತ ಜನಪ್ರಿಯ ಅಯ್ಯಪ್ಪ ಗೀತೆಯಾಗಿದೆ. ಈ ಹಾಡನ್ನು ಅಯ್ಯಪ್ಪನ ಭಕ್ತೆಯಾಗಿದ್ದ ಕೊನ್ನಕಟ್ಟು ಜಾನಕಿ ಅಮ್ಮಾಳ್ ಅವರು 1923 ರಲ್ಲಿ ರಚಿಸಿದ್ದಾರೆ. ಶ್ರೀನಿವಾಸ ಅಯ್ಯರ್ ಎಂಬ ಭಕ್ತನ ಮೂಲಕ ಈ ಕೀರ್ತನೆ ಜಗತ್ತಿಗೆ ತಲುಪಿತು.   

ಅಂದಿನಿಂದ ಇಂದಿನವರೆಗೆ ಅನೇಕ ಸಂಯೋಜಕರು ಈ ಹಾಡಿಗೆ ಸಂಗೀತ ಸಂಯೋಜಿಸಿದ್ದರೂ, ಯೇಸುದಾಸ್ ಅವರ ಧ್ವನಿಯಲ್ಲಿ ಬಂದ ಹರಿವರಾಸನಂ ಹಾಡು ಬಹಳ ಜನಪ್ರಿಯವಾಯಿತು. ಜಿ.ದೇವರಾಜನ್ ಸಂಗೀತದಲ್ಲಿ ಯೇಸುದಾಸ್ ಅವರು ಹಾಡಿರುವ ಈ ಹಾಡು 1952 ರಿಂದ ದೇವಸ್ಥಾನದಲ್ಲಿ ಪ್ರಸಾರವಾಗುತ್ತಿದೆ..   

ಮೊದಲು ಪೂಜೆಯ ವೇಳೆ ಹರಿವರಾಸನಂ ಹಾಡನ್ನು ಹಾಡುತ್ತಿದ್ದರು. ಈ ಹಾಡು ಮುಗಿಯುವ ಹೊತ್ತಿಗೆ ನಿಧಾನವಾಗಿ ಬಾಗಿಲನ್ನು ಮುಚ್ಚಿಕೊಂಡು ಎಲ್ಲರೂ ಹೊರಗೆ ಬರುತ್ತಿದ್ದರು. ಮಲಯಾಳಿಗಳು ಇದನ್ನು 'ಸ್ಲೀಪ್ ಸಾಂಗ್' ಎಂದು ಕರೆಯುತ್ತಾರೆ ಏಕೆಂದರೆ ಇದು ಅಯ್ಯಪ್ಪನನ್ನ ನಿದ್ದೆಗೆ ಜಾರುವಂತೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಯ್ಯಪ್ಪನ ನಿದ್ದೆಗೂ ಈ ಹಾಡಿಗೂ ಸಂಬಂಧವಿಲ್ಲ. ಈ ಹಾಡನ್ನು ಬರೆಯುವ ಮೊದಲು ಶಬರಿಮಲೆಗೆ ತೀರ್ಥಯಾತ್ರೆ ಮತ್ತು ಪೂಜೆ ನಡೆಯುತ್ತಿತ್ತು..  

1923 ರಲ್ಲಿ ರಚಿತವಾದ ಈ ಕೀರ್ತನೆಯ 100ನೇ ವಾರ್ಷಿಕೋತ್ಸವವನ್ನು 2023 ರಲ್ಲಿ ಸಂಗೀತಗಾರ ಇಳಯರಾಜ ನೇತೃತ್ವದಲ್ಲಿ ಆಚರಿಸಲಾಯಿತು. ಸ್ವಾಮಿ ವಿಮೋಕಾನಂದರು 1950 ರಲ್ಲಿ ಶಬರಿಮಲೆಯಲ್ಲಿ ಈ ಕೀರ್ತನೆಯನ್ನು ಮೊದಲು ಹಾಡಿದರು. ನಂತರ, ವಿಷಣ್ಣರಾದ ವಡಕಿಲ್ಲಂ ಈಶ್ವರನ್ ನಂಬೂತಿರಿ ಅವರು ರಾತ್ರಿಯ ಹೊತ್ತಿನಲ್ಲಿ ಈ ಗೀತೆಯನ್ನು ನಿರಂತರವಾಗಿ ಪಠಿಸಲು ಪ್ರಾರಂಭಿಸಿದರು. ವಡಕಿಲ್ಲಂ ಈಶ್ವರನ್ ನಂಬೂತಿರಿಯವರು ಇದನ್ನು ಮುಂದುರೆಸಿದರು.. ನಂತರದ ಮೇಳಸಂತಿಯರು ಪಾಲಿಸುತ್ತಾ ಬಂದರು.. ಇಂದಿಗೂ ರಾತ್ರಿ 12 ಗಂಟೆಗೆ ಈ ಹಾಡನ್ನು ಹಾಡಲಾಗುತ್ತದೆ..    

ಈ ಹಾಡನ್ನು ಬರೆದ ಭಕ್ತರು ಇದನ್ನು ನಿದ್ರೆಯ ಹಾಡಿನ ಕಲ್ಪನೆಯಿಂದ ಬರೆದಿಲ್ಲ. ರಾತ್ರಿ ಹಾಡುತ್ತಿದ್ದರಿಂದ ಈ ಗೀತೆ ಮಣಿಕಂಠನನ್ನು ಮಲಗಿಸುವ ಗೀತೆಯಾಗಿ ಪ್ರಚಾರ ಪಡೆದುಕೊಂಡಿತು.. ಆದ್ರೆ ಇದೊಂದು ಅದ್ಭುತ ಭಕ್ತಿ ಗೀತೆ.. ಹರಿಹರ ಪುತ್ರನನ್ನು ಮನದಾಳದಲ್ಲಿ ಪ್ರತಿಷ್ಠಾಪಿಸುವಂತಹ ಗೀತೆ..  

ದೇವರು ನಿದ್ರಿಸುವುದಿಲ್ಲ.. ನಂಬಿದ ದೈವ ನಿದ್ರೆಗೆ ಜಾರಿದರೆ ಜಗತ್ತೆ ಕತ್ತಲಾಗುತ್ತದೆ.. ಹಾಗಯೇ ರಾತ್ರಿ ಹೊತ್ತು ಪಂದಳಕಂದನ ಮುಂದೆ ಹಾಡುತ್ತಿದ್ದ ಈ ಹಾಡು ಇದೀಗ ಅಯ್ಯಪ್ಪನ ಲಾಲಿ ಹಾಡಾಗಿ ಪ್ರಚಾರ ಪಡೆದಿದೆ.. ಭಕ್ತಿಯಿಂದ ಈ ಗೀತೆಯನ್ನು ಯಾವಾಗಬೇಕಾದರೂ ಹಾಡಬಹುದು..   

ದೇಹವೇ ದೇವಾಲಯ, ಹೃದಯವೇ ದೇಗುಲ, ನಮ್ಮ ಆತ್ಮವೇ ಭಗವಂತ... ಹಾಗಾಗಿ ವಿಲ್ಲಾಳಿ ವೀರನನ್ನು ಮನದೊಳಗೆ ಇರಿಸಿ ನೀವು ಎಲ್ಲಿ ಬೇಕಾದರೂ ಭಕ್ತಿಯಿಂದ ಈ ಸ್ತುತಿಯನ್ನು ಹಾಡಬಹುದು.. ಮಹೀಷಿಗೆ ಮೋಕ್ಷ ನೀಡಿದ ಹರಿಹರ ಸುತ ನಿಮಗೆ ಒಳ್ಳೆಯದನ್ನ ಮಾಡಲಿ... "ಓಂ ಅಯ್ಯಪ್ಪ ಸ್ವಾಮಿಯೇ ನಮಃ"  

(ಸೂಚನೆ : ಈ ಲೇಖನವನ್ನು ಸಂಪೂರ್ಣವಾಗಿ ಆಧ್ಯಾತ್ಮಿಕ ನಂಬಿಕೆಯ ಮೇಲೆ ಬರೆಯಲಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಅಥವಾ ವಿವರಣೆಗಳಿಲ್ಲ. ಈ ಮಾಹಿತಿಯನ್ನು Zee Kannada News ಪರಿಸೀಲನೆ ನಡೆಸಿಲ್ಲ..)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link