ತಂದೆ ಸಿನಿಮಾ ರಂಗವನ್ನೇ ಆಳಿದ ಸೂಪರ್ ಸ್ಟಾರ್, ನೂರಾರು ಕೋಟಿಯ ಒಡೆಯ! ಆದರೂ ಒಂದು ಹೊತ್ತಿನ ಊಟಕ್ಕಾಗಿ ಜಮೀನಿನಲ್ಲಿ ಕುರಿ ಕಾಯುತ್ತಾ ದುಡಿಯುತ್ತಿರುವ ಪುತ್ರ

Tue, 12 Nov 2024-8:35 pm,

ಸಾಮಾನ್ಯವಾಗಿ ಸಿನಿಮಾರಂಗದಲ್ಲಿ ಹೆತ್ತವರು ಗುರುತಿಸಿಕೊಂಡಿದ್ದರೆ ಮಕ್ಕಳು ಕೂಡಾ ಸಿನಿಮಾ ಬಿಟ್ಟು ಬೇರೆ ಕ್ಷೇತ್ರ ಆಯ್ಕೆ ಮಾಡಿಕೊಳ್ಳುವುದು ಬಹಳ ವಿರಳ.

ಆದರೆ ಮಲಯಾಳಂ ಚಿತ್ರರಂಗವನ್ನು ಹಲವು ವರ್ಷಗಳವರೆಗೆ ಆಳಿದ ಸೂಪರ್ ಸ್ಟಾರ್ ನಟ ಮೋಹನ್‌ಲಾಲ್ ಮತ್ತು ನಿರ್ಮಾಪಕಿ ಸುಚಿತ್ರಾ ಪುತ್ರ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎನ್ನುವುದೇ ಸದ್ಯದ ಸುದ್ದಿ. 

ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ ಸಣ್ಣ ವಯಸ್ಸಿನಲ್ಲಿಯೇ  ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಹೀರೋ ಆಗಿ ಮಿಂಚಿದವರು. ಹೃದಯಂʼ ಸಿನಿಮಾ ಮೂಲಕ ಎಲ್ಲರ ಮನ ಗೆದ್ದವರು.   

ಆದರೆ ನಂತರ ಚಿತ್ರ ರಂಗದಿಂದ ದೂರವಾಗಿ ಬಿಟ್ಟರು. ಈಗ ತಮ್ಮ ಪುತ್ರ ಎಲ್ಲಿದ್ದಾನೆ? ಏನು ಮಾಡುತ್ತಿದ್ದಾನೆ? ಯಾಕೆ ಹೀಗಾಗಿದ್ದಾನೆ ಎನ್ನುವುದರ ಬಗ್ಗೆ ತಾಯಿ ಸುಚಿತ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. 

ಮೋಹನ್ ಲಾಲ್ ಪುತ್ರ ಪ್ರಣವ್ ಈಗ ಸ್ಪೇನ್‌ನಲ್ಲಿದ್ದಾರೆ.ಅಲ್ಲಿ ಫಾರ್ಮ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಇಲ್ಲಿ ಅವರ ಕೆಲಸಕ್ಕೆ ವಸತಿ, ಆಹಾರ  ನೀಡಲಾಗುತ್ತದೆ.   

 ಸ್ಪೇನ್‌ನ ಜಮೀನಿನಲ್ಲಿ ಕೆಲಸ ಮಾಡುತ್ತಿರುವ ಪ್ರಣವ್ ಗೆ ಅಲ್ಲಿ ಕುದುರೆಗಳು, ಕುರಿಮರಿಗಳನ್ನು ನೋಡಿಕೊಳ್ಳುವ ಕೆಲಸ ಇಲ್ಲಿರುತ್ತದೆ.ಸ್ಲೋ ಲೈಫ್‌ಸ್ಟೈಲ್‌ ಅನ್ನು ಅನುಭವಿಸಲು  ಅವರು ಈ ರೀತಿಯ ಕೆಲಸ ಆಯ್ಕೆ ಮಾಡಿಕೊಂಡಿದ್ದಾರೆಯಂತೆ. 

ಹಾಗಂದ ಮಾತ್ರಕ್ಕೆ ಅವರು ಸಿನಿಮಾ ದುನಿಯಾದಿಂದ ದೂರ ಆಗಿದ್ದಾರೆ ಎಂದಲ್ಲ, ನಟನೆಯ ಬಗ್ಗೆಯೂ ಕೆಲಸ ನಡೆಯುತ್ತಿದೆ.ಸದ್ಯಕ್ಕೆ ನಟನೆಯಿಂದ ಸ್ವಲ್ಪ ಬ್ರೇಕ್‌ ಅಷ್ಟೇ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link