Manvitha Kamath : ನಟಿ ಮಾನ್ವಿತಾ ಕೈ ಹಿಡಿಯಲಿರುವ ಹುಡುಗ ಯಾರು ಗೊತ್ತೆ..? ಫೋಟೋ ವೈರಲ್‌

Thu, 25 Apr 2024-7:22 pm,

ಮೇ 1 ರಂದು ನಟಿ ಮಾನ್ವಿತಾ ಕಾಮತ್‌ ಅವರು ಮ್ಯೂಸಿಕ್ ಡೈರೆಕ್ಟರ್ ಅರುಣ್ ಕುಮಾರ್ ಜೊತೆ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ.   

ಮದುವೆ ತಯಾರಿಯಲ್ಲಿರುವ ಮಾನ್ವಿತ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಅವರಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಈ ವೇಳೆ, ಮದುವೆಯಾಗುವ ಹುಡುಗ ಅರುಣ್ ಕುಮಾರ್ ಕೂಡ ಹಾಜರಿದ್ದರು.  

ಅಶ್ವಿನಿ ಪುನೀತ್‌ ಅವರಿಗೆ ಮದುವೆ ಆಮಂತ್ರಣ ನೀಡಲು ಮಾನ್ವಿತಾ ತಮ್ಮ ಭಾವಿ ಪತಿಯೊಂದಿಗೆ ಬಂದಿದ್ದರು. ಈ ಕುರಿತು ಫೋಟೋ ವೈರಲ್‌ ಆಗುತ್ತಿದೆ.  

ಮಾನ್ವಿತಾ ಮದುವೆಯಾಗಲಿರುವ ವರನನ್ನು ನೋಡಿ ಅವರ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಜೋಡಿ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

ಮ್ಯೂಸಿಕ್ ಪ್ರೋಡ್ಯೂಸರ್ ಅರುಣ್ ಕುಮಾರ್ ಜೊತೆ ಮಾನ್ವಿತಾ ಮದುವೆ ಕೊಂಕಣಿ ಸಾಂಪ್ರದಾಯದಂತೆ ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ನಡೆಯಲಿದೆ.   

ಅರೇಂಜ್‌ ಮ್ಯಾರೇಜ್‌ ಆಗುತ್ತಿರುವ ನಟಿ, ಅಮ್ಮ ನೋಡಿದ ವರನನ್ನೇ ಮದುವೆಯಾಗುತ್ತಿದ್ದಾರೆ. ಈ ಮೂಲಕ ತಾಯಿಯ ಆಸೆ ಈಡೇರಿಸುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link