ಬಾಕ್ಸ್‌ ಆಫೀಸ್‌ನಲ್ಲಿ ʼಮಾರ್ಟಿನ್‌ʼ ಅಬ್ಬರ! 10 ದಿನಗಳಲ್ಲಿ ಧ್ರುವ ಸರ್ಜಾ ಚಿತ್ರ ಗಳಿಸಿದ್ದೆಷ್ಟು..?

Mon, 21 Oct 2024-10:24 pm,

ಎ.ಪಿ.ಅರ್ಜುನ್‌ ನಿರ್ದೇಶನದ ʼಅದ್ಧೂರಿʼಯಲ್ಲಿ ನಟಿಸಿದ್ದ ಧ್ರುವ ಸರ್ಜಾ ಮತ್ತೊಮ್ಮೆ ಅವರೊಂದಿಗೆ ಕೈಜೋಡಿಸಿದ್ದರು. ಇದೇ ಕಾರಣಕ್ಕೆ ʼಮಾರ್ಟಿನ್‌ʼ ಸಿನಿಮಾ ಬಿಡುಗಡೆಗೆ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿತ್ತು. ಇದೀಗ ʼಮಾರ್ಟಿನ್‌ʼ ರಿಲೀಸ್‌ ಆಗಿ 10 ದಿನ ಪೂರ್ತಿಯಾಗಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು ಎನ್ನುವ ವಿವರ ಸಿಕ್ಕಿದೆ.

ಮೂಲಗಳ ಪ್ರಕಾರ ʼಮಾರ್ಟಿನ್‌ʼ ಸಿನಿಮಾ 10 ದಿನಗಳಲ್ಲಿ 20 ಕೋಟಿ ರೂ. ಕ್ಲಬ್‌ ಸೇರಿದೆ. ಇದುವರೆಗಿನ ಕಲೆಕ್ಷನ್‌ ಸುಮಾರು 21 ಕೋಟಿ ರೂ. ಎಂದು ಅಂದಾಜಿಸಲಾಗಿದೆ. 

ಮೊದಲ ದಿನ ವಿವಿ‍ಧ ಭಾಷೆಗಳಲ್ಲಿ ʼಮಾರ್ಟಿನ್‌ʼ 6.7 ಕೋಟಿ ರೂ. ಗಳಿಸಿತ್ತು. ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆ ಮುಂದಿನ ದಿನಗಳಲ್ಲಿ ಗಳಿಕೆ ಕುಂಟುತ್ತಾ ಸಾಗಿತು. 

ಮೊದಲ ವಾರ 19.4 ಕೋಟಿ ರೂ. ಗಳಿಸುವಲ್ಲಿ ಶಕ್ತವಾದ ಚಿತ್ರ 2ನೇ ವಾರವಾದ ಭಾನುವಾರ ಗಳಿಸಿದ್ದು ಕೇವಲ 45 ಲಕ್ಷ ರೂ. ಎಂದು ವರದಿಯಾಗಿದೆ.

ಸದ್ಯ ವಿವಿಧೆಡೆ ಸುರಿಯುತ್ತಿರುವ ಧಾರಾಕಾರ ಮಳೆಯೂ ಸಹ ʼಮಾರ್ಟಿನ್‌ʼ ಸಿನಿಮಾದ ಗಳಿಕೆಯ ಮೇಲೆ ಸ್ವಲ್ಪ ಮಟ್ಟಿನ ಪ್ರಭಾವ ಬೀರಿದೆ ಎಂದು ಸಿನಿಮಾ ತಜ್ಞರು ಊಹಿಸಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link