34 ವರ್ಷದ ಯುವತಿಯ ಹೆಗಲಿಗೆ ಟಾಟಾ ಸಾಮ್ರಾಜ್ಯದ ಸಾರಥ್ಯ!ರತನ್ ಟಾಟಾ 3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರೆ ಈಕೆ !

Thu, 10 Oct 2024-9:48 am,

 ರತನ್ ಟಾಟಾ ಅವರು ಕೋಟ್ಯಂತರ ರೂಪಾಯಿ ಸಂಪತ್ತಿನ ಒಡೆಯರಾಗಿದ್ದರೂ ಸರಳವಾದ ಜೀವನವನ್ನು ನಡೆಸಿದವರು. ಇದೀಗ ಇಹಲೋಕ ತ್ಯಜಿಸಿರುವ ಅವರು ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ.

ಅಡುಗೆ ಮನೆ ಉಪ್ಪಿನಿಂದ ಹಿಡಿದು ಹಡಗು ನಿರ್ಮಾಣ ಕಂಪನಿವರೆಗೆ ಎಲ್ಲಾ ಕ್ಷೇತ್ರದಲ್ಲಿಯೂ ಟಾಟಾ ಕಂಪನಿ ಪಾಲಿದೆ. ಟಾಟಾ ಬಿಸಿನೆಸ್ ಜಾಗ್ವಾರ್ ಲ್ಯಾಂಡ್ ರೋವರ್, ಏರ್ ಇಂಡಿಯಾ, ಟಿಸಿಎಸ್, ಟಾಟಾ ಮೋಟಾರ್ಸ್, ಟಾಟಾ ಸಾಲ್ಟ್, ಟಾಟಾ ಟೀ, ಟಾಟಾ ಪ್ಲೇ, ಟೈಟಾನ್, ಸ್ಟಾರ್‌ಬಕ್ಸ್, ವೋಲ್ಟಾಸ್, ಟಾಟಾ ಒನ್‌ಎಂಜಿ, ಟಾಟಾ ಕ್ಯಾಪಿಟಲ್, ಟಾಟಾ ಎಐಜಿ, ಟಾಟಾ ಎಐಎ ಲೈಫ್, ಜರಾ, ಫಾಸ್ಟ್ರ್ಯಾಕ್, ತನಿಷ್ಕ್, ಕಲ್ಟ್‌ಫಿಟ್ ಅನೇಕ ವೆಸ್ಟ್‌ಸೈಡ್‌ನಂತಹ ಬ್ರ್ಯಾಂಡ್‌ಗಳು ಟಾಟಾ ಕೊಡುಗೆಯಾಗಿದೆ. 

ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ,ರತನ್ ಟಾಟಾ ಅವರು 3800 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.ಅಪಾರ ಸಂಪತ್ತು ಹೊಂದಿದ್ದರೂ  ಸಾಮಾನ್ಯ ಮನುಷ್ಯನಂತೆ ಜೀವನ ನಡೆಸುತ್ತಿದ್ದವರು ರತನ್ ಟಾಟಾ.

ಹಾಗಿದ್ದರೆ  3800 ಕೋಟಿ ಮೌಲ್ಯದ ಆಸ್ತಿಯ ವಾರಸುದಾರ ಯಾರು ? ವಾಸ್ತವವಾಗಿ  ರತನ್ ಟಾಟಾ ಜೀವಂತವಿರುವಾಗಲೇ ಈ  ಪ್ರಶ್ನೆಗೆ ಉತ್ತರ ಸಿಕ್ಕಿತು ಎನ್ನಲಾಗಿದೆ. 34 ವರ್ಷದ ಮಾಯಾ ಟಾಟಾ ದೇಶದ ಅತಿದೊಡ್ಡ ವ್ಯಾಪಾರ ಸಾಮ್ರಾಜ್ಯವಾದ ಟಾಟಾ ಗ್ರೂಪ್ ಅನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

ಮಾಯಾ ಟಾಟಾ ಸಂಬಂಧದಲ್ಲಿ ರತನ್ ಟಾಟಾ ಅವರ ಮಲ ಸಹೋದರನ ಪುತ್ರಿ. ಮಾಯಾ ಟಾಟಾ, ನೋಯೆಲ್ ಟಾಟಾ ಮತ್ತು ಆಲೂ ಮಿಸ್ತ್ರಿ ದಂಪತಿಯ ಪುತ್ರಿ.

ಮಾಯಾ ಟಾಟಾ ಚಿಕ್ಕ ವಯಸ್ಸಿನಲ್ಲಿಯೇ ಟಾಟಾ ಸಮೂಹದ ಹಲವು ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದಾರೆ.ಅವರು ವಾರ್ವಿಕ್ ವಿಶ್ವವಿದ್ಯಾನಿಲಯ ಮತ್ತು UK ಯ ಬೇಯೆಸ್ ಬಿಸಿನೆಸ್ ಸ್ಕೂಲ್ ನಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು.  

ಟಾಟಾ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಟಾಟಾ ಡಿಜಿಟಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಯಾ ಟಾಟಾ ಹೊಸ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.  

ಟಾಟಾ ಸನ್ಸ್ ಎಜಿಎಂನಲ್ಲಿ ಮಾಯಾ ಅವರ ಪಾತ್ರವನ್ನು ನೋಡಿದ ನಂತರ,  ಭವಿಷ್ಯದಲ್ಲಿ ಮಾಯಾ ಟಾಟಾ ಅವರೇ ಟಾಟಾ ಸಾಮ್ರಾಜ್ಯದ ಉತ್ತರಾಧಿಕಾರಿ ಎನ್ನಲಾಗುತ್ತಿದೆ.

ಇನ್ನು ಮಾಯಾ ಟಾಟಾ ಜೊತೆಗೆ ಅವರ ಸಹೋದರ ಮತ್ತು ಸಹೋದರಿಯಾದ ನೆವಿಲ್ಲೆ ಟಾಟಾ ಮತ್ತು ಲಿಯಾ ಟಾಟಾ ರತನ್  ಕೂಡಾ ಈ ವ್ಯವಹಾರವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ.    

ZEENEWS TRENDING STORIES

By continuing to use the site, you agree to the use of cookies. You can find out more by Tapping this link