Budh Asta: ಸಂಕ್ರಮಣದ ಬಳಿಕ ಶನಿ ರಾಶಿಯಲ್ಲಿ ಅಸ್ತನಾಗಲಿದ್ದಾನೆ ಹಣ-ವ್ಯವಹಾರಕಾರಕ ಬುಧ, ಈ ಜನರಿಗೆ ಭಾರೀ ನಷ್ಟ
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಹಣ, ವ್ಯವಹಾರ, ತರ್ಕ, ಬುದ್ದಿಯ ಅಂಶ ಎಂದು ಪರಿಗಣಿಸಲಾಗಿರುವ ಬುಧನು ಇತ್ತೀಚೆಗಷ್ಟೇ ಶನಿಯ ರಾಶಿಯನ್ನು ಪ್ರವೇಶಿಸಿದ್ದಾನೆ.
ಶನಿಯ ರಾಶಿಯಾದ ಕುಂಭ ರಾಶಿಯಲ್ಲಿ ಬುಧನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ಯೋಗ, ಶನಿ, ಸೂರ್ಯ-ಬುಧರ ಸಂಯೋಗದಿಂದ ಶುಭಕರ ಗಜಕೇಸರಿ ಯೋಗಗಳು ರೂಪುಗೊಂಡಿವೆ.
ಆದಾಗ್ಯೂ, ಮಾರ್ಚ್ 01, 2024ರಂದು ಕುಂಭ ರಾಶಿಯಲ್ಲಿಯೇ ಬುಧ ಅಸ್ತಮಿಸಲಿದ್ದಾನೆ. ಇದರ ಪರಿಣಾಮವಾಗಿ ಕೆಲವು ರಾಶಿಯವರು ಭಾರೀ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
ಕರ್ಕಾಟಕ ರಾಶಿ: ಬುಧ ಅಸ್ತದ ಪರಿಣಾಮ ಕರ್ಕಾಟಕ ರಾಶಿಯವರ ಮೇಲೆ ಅಷ್ಟು ಉತ್ತಮವಾಗಿರುವುದಿಲ್ಲ. ಈ ಸಮಯದಲ್ಲಿ ನಿಮ್ಮ ಶತ್ರುಗಳ ಬಗ್ಗೆ ವಿಶೇಷವಾಗಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸಿ, ಇಲ್ಲದಿದ್ದರೆ ಭಾರೀ ನಷ್ಟ.
ಕನ್ಯಾ ರಾಶಿ: ಬುಧ ಅಸ್ತನಾದ ಬಳಿಕ ಕನ್ಯಾ ರಾಶಿಯವರ ಜೀವನದಲ್ಲಿ ಕಲಹಗಳು ಹೆಚ್ಚಾಗಬಹುದು. ಒಂದೆಡೆ ಉದ್ಯೋಗ ಕ್ಷೇತ್ರದಲ್ಲಿ ಸವಾಲುಗಳು ಹೆಚ್ಚಾದರೆ, ಮತ್ತೊಂದೆಡೆ ಹಠಾತ್ ಖರ್ಚುಗಳು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ಬೇರೆಯವರೊಂದಿಗೆ ಮಾತನಾಡುವಾಗ ತುಂಬಾ ಜಾಗರೂಕರಾಗಿರಿ.
ವೃಶ್ಚಿಕ ರಾಶಿ: ಬುಧ ಅಸ್ತವು ವೃಶ್ಚಿಕ ರಾಶಿಯವರಿಗೆ ಕೆಲಸ-ಕಾರ್ಯಗಳಲ್ಲಿ ತೊಡಕುಂಟುಮಾಡಬಹುದು. ಈ ಸಮಯದಲ್ಲಿ ಯಾವುದೇ ರೀತಿಯ ಕೆಲಸಕ್ಕೂ ಹೆಚ್ಚಿನ ಪರಿಶ್ರಮ ಬೇಕಾಗಬಹುದು. ಅನಗತ್ಯ ಖರ್ಚುಗಳು ಬಜೆಟ್ ಹಾಳುಮಾಡಬಹುದು.
ಮೀನ ರಾಶಿ: ಬುಧ ಅಸ್ತದ ಸಮಯದಲ್ಲಿ ಮೀನ ರಾಶಿಯ ಜನರು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ವೇಳೆ ಕಾಮಗಾರಿಗಳು ಪೂರ್ಣಗೊಳ್ಳಲು ತಡವಾಗಬಹುದು. ಇದು ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.