Dangerous Bird: ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿಯ ಬಗ್ಗೆ ನಿಮಗೆಷ್ಟು ಗೊತ್ತು..?
ಈ ಕಥೆಯು ವಿಶ್ವದ ಅತ್ಯಂತ ಅಪಾಯಕಾರಿ ಪಕ್ಷಿ(Worlds Most Dangerous Bird cassowary)ಯದ್ದಾಗಿದೆ. ಇದರ ಅಪಾಯಕಾರಿ ಕಠಾರಿಯಂತಹ ಕಾಲ್ಬೆರಳಿನಿಂದಾಗಿ ಇದು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿದೆ. ಕ್ಯಾಸೊವರಿಯನ್ನು ಸುಮಾರು 18 ಸಾವಿರ ವರ್ಷಗಳ ಹಿಂದೆ ಮನುಷ್ಯರು ಪೋಷಿಸಲು ಕಲಿತಿದ್ದರು.
ನ್ಯೂಯಾರ್ಕ್ ಟೈಮ್ಸ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಗಿಳಿಗಳು, ಪಾರಿವಾಳಗಳು ಮತ್ತು ಕೋಳಿಗಳಂತಹ ಸಾಕು ಪ್ರಾಣಿಗಳಿಗಿಂತಲೂ ಮುಂಚೆಯೇ ಪಂಜರಗಳಲ್ಲಿ ಕ್ಯಾಸೊವರಿಗಳಂತಹ ಆಕ್ರಮಣಕಾರಿ ಪಕ್ಷಿಗಳನ್ನು ಸೆರೆಹಿಡಿದು ಮನುಷ್ಯರು ಸಾಕುತ್ತಿದ್ದಂತೆ. ಇವುಗಳನ್ನು ಮೊದಲು ಸಾಕುಪ್ರಾಣಿಗಳಂತೆ ನಿಯಂತ್ರಿಸಲಾಗುತ್ತಿತ್ತು ಎಂದು ಹೊಸ ಸಂಶೋಧನೆಯು ಬಹಿರಂಗಪಡಿಸಿದೆ.
ಈ ವಿಷಯದ ಕುರಿತು ಅಧ್ಯಯನ ನಡೆಸುತ್ತಿರುವ ಅಮೆರಿಕದ ಪೆನ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಕ್ರಿಸ್ಟಿನಾ ಡೌಗ್ಲಾಸ್, ‘ಸಂಶೋಧನೆ ವೇಳೆ ಸಿಕ್ಕ ಈ ಪಕ್ಷಿಯ ಪಳೆಯುಳಿಕೆಗಳು ಮನುಷ್ಯರು 18 ಸಾವಿರ ಹಿಂದೆಯೇ ಕ್ಯಾಸೊವರಿಯನ್ನು ಸಾಕಲು ಆರಂಭಿಸಿದ್ದರು ಎಂಬುದನ್ನು ತೋರಿಸುತ್ತದೆ’ ಎಂದು ತಿಳಿಸಿದ್ದಾರೆ.
ಕ್ಯಾಸೊವರಿ ನೋಡಲು ತುಂಬಾ ದೊಡ್ಡದಾಗಿದೆ ಮತ್ತು ಆಕ್ರಣಕಾರಿಯಾಗಿದೆ. ಈ ಪಕ್ಷಿ ಅಪಾಯಕಾರಿ ಪ್ರವೃತ್ತಿ ಹೊಂದಿರುವುದರಿಂದ ಮನುಷ್ಯನನ್ನು ಕೊಲ್ಲಬಹುದು. ಆಸ್ಟ್ರೇಲಿಯಾ ಮತ್ತು ನ್ಯೂಗಿನಿಯಾದಲ್ಲಿ ಕಂಡುಬರುವ ಕ್ಯಾಸೊವರಿಯಿಂದ ಅದರ ಮೊಟ್ಟೆಗಳನ್ನು ಪಡೆಯುವುದು ಸುಲಭವಲ್ಲ. ಆದರೆ ಸಾವಿರಾರು ವರ್ಷಗಳ ಹಿಂದೆ ಮಾನವರು ತಮ್ಮ ದುರಾಸೆಗೆ ಈ ಪಕ್ಷಿಯನ್ನು ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಪಕ್ಷಿಯ ಬಗ್ಗೆ ಸಂಶೋಧನೆ ನಡೆಸಿದ ಪ್ರಾಧ್ಯಾಪಕರ ಪ್ರಕಾರ, ಹಿಂದೆ ಕ್ಯಾಸೊವರಿಯನ್ನು ಮಾಂಸ ಅಥವಾ ಅದರ ಗರಿಗಳಿಗಾಗಿ ಸಾಕುತ್ತಿದ್ದರು ಎಂದು ತಿಳಿಸಿದ್ದಾರೆ.
ಕ್ಯಾಸೊವರಿಯ ಪಾದಗಳ ದಪ್ಪ ಮತ್ತು ಮೊನಚಾದ ಕಾಲ್ಬೆರಳುಗಳು ಅದನ್ನು ಶಕ್ತಿಯುತ ಪಕ್ಷಿಯನ್ನಾಗಿ ಮಾಡಿವೆ. ಈ ಹಕ್ಕಿ ಪ್ರತಿ ವರ್ಷ ತನ್ನ ಗೂಡನ್ನು ಬದಲಿಸಲು ಇಷ್ಟಪಡುತ್ತದೆ.
2019ರಲ್ಲಿ ಫ್ಲೋರಿಡಾದಲ್ಲಿ ಈ ಅಪಾಯಕಾರಿ ಪಕ್ಷಿಯನ್ನು ಸಾಕಿದ್ದ ಮಾಲೀಕರೊಬ್ಬರು ತಮ್ಮ ತೋಟವೊಂದರಲ್ಲಿ ಕ್ಯಾಸೊವರಿಯ ದಾಳಿಯಿಂದ ಸಾವನ್ನಪ್ಪಿದ್ದರು. ಸಣ್ಣ ಮರಿಯಿದ್ದಾಗ ಕ್ಯಾಸೊವರಿಯನ್ನು ತಂದು ಅವರು ಸಾಕುತ್ತಿದ್ದರು. ಕೊನೆಗೆ ಅದರ ದಾಳಿಗೆ ಬಲಿಯಾದರು. ಪಪುವಾ ನ್ಯೂಗಿನಿಯಾದಲ್ಲಿ ಕ್ಯಾಸೊವರಿ ಪಕ್ಷಿಗಳ ಗರಿಗಳಿಗಾಗಿ ಇಂದಿಗೂ ಸಾಕಲಾಗುತ್ತದೆ. ಅವುಗಳ ಮೊಟ್ಟೆಗಳು ರಾಷ್ಟ್ರೀಯ ಆಹಾರದ ಸ್ಥಾನಮಾನವನ್ನು ಪಡೆದಿವೆ.