ಜಗತ್ತಿನ ಅತ್ಯಂತ ದುಬಾರಿ ಕಾಫಿ, ಈ ಪ್ರಾಣಿಯ ಹಿಕ್ಕೆಯಿಂದ ತಯಾರಿಸೋದಂತೆ! ಶ್ರೀಮಂತರ ಮೊದಲ ಆಯ್ಕೆ ಇದು..
Most expensive coffee in the world: ಕಾಫಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಜಗತ್ತಿನಲ್ಲಿ ಕಾಫಿ ಪ್ರಿಯರಿಗೆ ಕೊರತೆಯಿಲ್ಲ. ಹೊರ ದೇಶಗಳ ಜನರು ಹೊಸ ಬಗೆಯ ಕಾಫಿ ಕುಡಿಯಲು ಇಷ್ಟಪಡುತ್ತಾರೆ.
ವಿಶ್ವದ ಅತ್ಯಂತ ದುಬಾರಿ ಕಾಫಿ ʻಕೋಪಿ ಲುವಾಕ್ʼ ಶ್ರೀಮಂತರ ಮೊದಲ ಆಯ್ಕೆ ಎಂದು ಹೇಳಲಾಗುತ್ತದೆ. ಇದು ವಿಶೇಷ ರೀತಿಯಲ್ಲಿ ತಯಾರಿಸಿದ ಕಾಫಿಯಾಗಿದೆ.
ಕೋಪಿ ಲುವಾಕ್ ಅನ್ನು "ಲುವಾಕ್" ಎಂಬ ಹೆಸರಿನಿಂದ ಪಡೆಯಲಾಗಿದೆ. ಇದನ್ನು ಸಿವೆಟ್ ಕಾಫಿ ಎಂದೂ ಸಹ ಕರೆಯಲಾಗುತ್ತದೆ. ಇದನ್ನು ಸಿವೆಟ್ ಬೆಕ್ಕು ಅಥವಾ ಪುನುಗು ಬೆಕ್ಕಿನ ಮಲದಿಂದ ತಯಾರಿಸಲಾಗುತ್ತದೆ.
ಈ ಸಿವೆಟ್ ಬೆಕ್ಕು ಇಂಡೋನೇಷ್ಯಾದಲ್ಲಿ ಕಂಡುಬರುವ ಬೆಕ್ಕುಗಳ ಜಾತಿಗೆ ಸೇರಿದೆ. ಇದರ ಬಾಲ ಕೋತಿಯಂತೆ ಉದ್ದವಾಗಿರುತ್ತದೆ.
ಒಂದು ಕಪ್ ಕೋಪಿ ಲುವಾಕ್ ಕುಡಿಯಲು ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ. ಇದರ ರುಚಿಗೆ ಬೆರಗಾಗಿ ವ್ಹಾವ್ ಎನ್ನುತ್ತ ಕಾಫಿ ಕುಡಿಯುತ್ತಾರೆ.
ಲುವಾಕ್ ಕಾಫಿಯನ್ನು ಸಿವೆಟ್ ಕ್ಯಾಟ್ ಪೂಪ್ ನಿಂದ ತಯಾರಿಸಲಾಗುತ್ತದೆ. ಇದಕ್ಕಾಗಿ ಬೆಕ್ಕಿಗೆ ಮೊದಲು ಕಚ್ಚಾ ಕಾಫಿ ಬೀಜಗಳನ್ನು ನೀಡಲಾಗುತ್ತದೆ. ಸಿವೆಟ್ ಬೆಕ್ಕುಗಳು ಕಾಫಿ ಬೀಜಗಳನ್ನು ಇಷ್ಟಪಟ್ಟು ತಿನ್ನುತ್ತವೆ.
ಈ ಬೆಕ್ಕುಗಳು ಕಾಫಿ ಬೀಜಗಳನ್ನು ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಆಗುವುದಿಲ್ಲ. ಕಾಫಿಯ ಆ ಭಾಗವು ಬೆಕ್ಕಿನ ಮಲದೊಂದಿಗೆ ಹೊರಬರುತ್ತದೆ. ನಂತರ ಅದನ್ನು ಶುದ್ಧೀಕರಿಸಲಾಗುತ್ತದೆ.
ಅದರ ಸ್ಟೂಲ್ ಜೊತೆಗೆ ಹೊರಬರುವ ಭಾಗದಿಂದ ಕಾಫಿ ತಯಾರಿಸಲಾಗುತ್ತದೆ. ಬೆಕ್ಕಿನ ಕರುಳಿನ ಮೂಲಕ ಹಾದುಹೋದ ನಂತರ ಕಾಫಿ ಹೆಚ್ಚು ಟೇಸ್ಟಿ ಆಗುತ್ತದೆ ಎಂದು ನಂಬಲಾಗಿದೆ.
ಈ ಬೆಕ್ಕಿನ ಸ್ಟೂಲ್ ನಿಂದ ಕಾಫಿ ಬೀಜ ಬೇರ್ಪಡಿಸಿ, ಎಲ್ಲಾ ರೀತಿಯ ಸೂಕ್ಷ್ಮಜೀವಿಗಳಿಂದ ಮುಕ್ತಗೊಳಿಸಲಾಗುತ್ತದೆ. ನಂತರ ಸಂಸ್ಕರಣೆ ಪ್ರಕ್ರಿಯೆ ನಡೆಯುತ್ತದೆ. ಆ ಬಳಿಕ ಬೀಜಗಳನ್ನು ತೊಳೆದು ಹುರಿದು ಪುಡಿ ಮಾಡಿ ಕಾಫಿ ಸಿದ್ಧವಾಗುತ್ತದೆ.
ಕೋಪಿ ಲುವಾಕ್ ಕಾಫಿಯನ್ನು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ತಯಾರಿಸಲಾಗುತ್ತದೆ ಎಂಬುದು ಗಮನಾರ್ಹವಾಗಿದೆ. ಇಂಡೋನೇಷ್ಯಾದಲ್ಲಿ ಇದನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಈ ಕಾಫಿ ಬೆಲೆ ಒಂದು ಕೆಜಿಗೆ 20 ರಿಂದ 25 ಸಾವಿರ ರೂಪಾಯಿ ಆಗಿದೆ.