ಹಾರ್ದಿಕ್ ವಿಚ್ಛೇದನಕ್ಕೆ ಕಾರಣವಾಗಿದ್ದು ʻಅದೊಂದುʼ ವಿಚಾರ..ಕೊನೆಗೂ ಮಾಜಿ ಪತ್ನಿ ನತಾಶರಿಂದ ಬಹಿರಂಗವಾಯಿತ ಕ್ರಿಕೆಟಿಗನ ಅಸಲಿ ಮುಖ..?
ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಕಳೆದ ತಿಂಗಳು ಪರಸ್ಪರ ಒಪ್ಪಿದಂದೆ ಮೇರೆಗೆ ತಮ್ಮ ದಾಂಪತ್ಯಕ್ಕೆ ಅಂತ್ಯಾ ಹಾಡಿದ್ದಾರೆ. ಈ ಜೋಡಿ ವಿಚ್ಛೇದನ ಪಡೆದಾಗಿನಿಂದಲೂ, ದಾಂಪತ್ಯದ ಬಿರುಕಿನ ಬಗ್ಗೆ ಹಲವು ಊಹಾಪೋಹಗಳು ಕೇಳಿ ಬರುತ್ತಲೇ ಇದೆ. ಇದೀಗ ಇವರಿಬ್ಬರ ವಿಚ್ಛೇದನದ ಹಿಂದಿನ ಸತ್ಯ ಬಹಿರಂಗವಾಗಿದೆ. ಈ ಕಾರಣವನ್ನು ಸ್ವತಹಃ ನತಾಶ ಬಹಿರಂಗ ಪಡಿಸಿದ್ದಾರೆ.
ಟೈಮ್ಸ್ ನೌ ವರದಿಯ ಪ್ರಕಾರ, ನತಾಶಾ ಸ್ಟಾಂಕೋವಿಕ್‌ಗೆ ಹಾರ್ದಿಕ್ ತುಂಬಾ ಸ್ಮಾರ್ಟ್ ಆಗಿದ್ದರು ಎಂದು ಮೂಲಗಳು ತಿಳಿಸಿವೆ. ಹಾರ್ದಿಕ್ ಪಾಂಡ್ಯ ತನ್ನದೇ ಆದ ಲೋಕದಲ್ಲಿ ಖುಷಿಯಾಗಿ ತೇಲಾಡುತ್ತಿದ್ದರು.
ಇನ್ನೂ ನತಾಶ ತಮಗೆ ಇಷ್ಟ ಬಂದಂತೆ ಇರಲು ಆರಂಭಿಸಿದ್ದರು. ಆದರೆ ಹಾರ್ದಿಕ್ ಪಾಂಡ್ಯಾಗೆ ನತಾಶ ಹಾಗೆ ಇರುವುದು ಇಷ್ಟ ಇರಲಿಲ್ಲ, ಆತ ಅಂದುಕೊಂಡಂತೆ ನತಾಶ ಇರಬೇಕು ಎಂಬುದು ಹಾರ್ದಿಕ್ ಶರತ್ತಾಗಿತ್ತು, ಇದೇ ಕಾರಣ ನತಾಶ ಹಾಗೂ ಹಾರ್ದಿಕ್ ಪಾಂಡ್ಯ ದಾಂಪತ್ಯ ಬಿರುಕಿಗೆ ಮುಖ್ಯ ಕಾರಣವಾಯಿತಂತೆ.
ಇದೇ ವಿಚಾರದ ಕುರಿತು ನತಾಶ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಹಾಗಾಗ ಜಗಳವಾಗುತ್ತಿತ್ತಂತೆ ಇದರ ಕಾರಣ ನತಾಶ ತುಂಬಾ ಸುಸ್ತಾಗಿದ್ದರಂತೆ. ಎಷ್ಟೆ ಪ್ರಯತ್ನಿಸಿದರೂ, ನತಾಶಗೆ ಹಾರ್ದಿಕ್ ಜೊತೆ ಸಮತೋಲನ ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲವಂತೆ.
ಇದೇ ಕಾರನದಿಂದ ನತಾಶಾ ಒಂದು ಹೆಜ್ಜೆ ಹಿಂದಕ್ಕೆ ತೆಗೆದುಕೊಳ್ಳಲು ನಿರ್ಧರಿಸಿದಳು. ತುಂಬಾ ಯೋಚಿಸಿದ ನಂತರ ಹಾಗೂ ತುಂಬಾ ಪ್ರಯತ್ನಿಸಿದ ನಂತರ ಕೂಡ ಹಾರ್ದಿಕ್ ಪಾಂಡ್ಯ ತನ್ನ ನಡುವಳಿಕೆಯನ್ನು ಬದಲಾಯಿಸಿಕೊಳ್ಳದ ಕಾರಣ ನತಾಶ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತಂತೆ.
ನತಾಶಾಗೆ ಇದು ತುಂಬಾ ನೋವಿನ ನಿರ್ಧಾರವಾಗಿತ್ತು ಆದರೆ ಈ ನಿರ್ಧಾರ ಮಾಡಲು ಅವರು ಒಂದು ದಿನ ಅಥವಾ ಒಂದು ವಾರದಲ್ಲಿ ಅಲ್ಲ, ವರ್ಷಗಳ ಕಾಲ ಈ ರೀತಿ ನೋವು ಅನುಭವಿಸಿದ ನಂತರ ನತಾಶ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ನತಾಶಾ ಸ್ಟಾಂಕೋವಿಕ್ ಮತ್ತು ಹಾರ್ದಿಕ್ ಪಾಂಡ್ಯ ಮೇ 2020 ರಲ್ಲಿ ವಿವಾಹವಾದರು, ಫೆಬ್ರವರಿ 2023 ರಲ್ಲಿ ಮತ್ತೊಮ್ಮೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯಗಳ ಪ್ರಕಾರ ವಿವಾಹವಾಗಿದ್ದರು.
ಈ ವರ್ಷ ಜುಲೈನಲ್ಲಿ ಇಬ್ಬರೂ ಬೇರ್ಪಡುವ ಮೂಲಕ ಈ ಜೋಡಿ 4 ವರ್ಷಗಳ ದಾಂಪತ್ಯಕ್ಕೆ ಇಂತಿ ಹಾಡಿದ್ದಾರೆ. ಈ ಜೋಡಿ ಅಗಸ್ತ್ಯ ಎಂಬ ಮಗನೂ ಇದ್ದಾನೆ.
ಬೇರ್ಪಟ್ಟ ನಂತರವೂ ಇಬ್ಬರೂ ತಮ್ಮ ಮಗನನ್ನು ಒಟ್ಟಿಗೆ ಬೆಳೆಸುವ ಬಗ್ಗೆ ಮಾತನಾಡಿಕೊಂಡು ಒಂದು ಒಪ್ಪಂದಕ್ಕೆ ಬಂದಿದ್ದಾರೆ.
ಹಾರ್ದಿಕ್ ಪಾಂಡ್ಯರಿಂದ ಬೇರ್ಪಟ್ಟ ನಂತರ, ನತಾಶಾ ಸ್ಟಾಂಕೋವಿಕ್ ಸರ್ಬಿಯಾದಲ್ಲಿರುವ ತಮ್ಮ ಮನೆಗೆ ಹೋಗಿದ್ದಾರೆ.
ಏತನ್ಮಧ್ಯೆ, ನತಾಶಾ ಅವರಿಂದ ಬೇರ್ಪಟ್ಟ ನಂತರ, ಹಾರ್ದಿಕ್ ಗಾಯಕಿ ಜಾಸ್ಮಿನ್ ವಾಲಿಯಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕೇಳಿ ಬರುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಫೋಟೊಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.