ಒಂದು ಕಾಲದಲ್ಲಿ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದ ʻಈʼ ನಟಿಗೆ ಇಂದು ತುತ್ತು ಅನ್ನಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿ!!
Pavitra Punia: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ಹಲವರು ಸ್ಪರ್ಧಿಗಳ ಜೀವನ ಬದಲಾದ ಅದೆಷ್ಟೋ ಉದಾಹರಣೆಗಳಿವೆ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಂತರ ಸ್ಪರ್ಧಿಗಳು ಸಕ್ಸಸ್ ಆಗುತ್ತಾರೆ. ಆದರೆ, ಈ ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದಿದ್ದ ಈ ನಟಿ, ಕಾರ್ಯಕ್ರಮದಿಂದ ನಿರ್ಗಮಿಸಿದ ನಂತರ ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು.
ನಾವು ಇಂದು ಹೇಳಲು ಹೊರಟಿರುವ ನಟಿಯ ಹೆಸರು ಪವಿತ್ರಾ ಪುನಿಯಾ. ಪವಿತ್ರಾ ಪುನಿಯಾ. ಅವರು 'ಬಿಗ್ ಬಾಸ್ 14' ಮತ್ತು 'ಸ್ಪ್ಲಿಟ್ಸ್ವಿಲ್ಲಾ 3' ಶೋಗಳಲ್ಲಿ ಭಾಗವಹಿಸಿ ಸಿಕ್ಕಾಪಟ್ಟೆ ದೊಡ್ಡ ಹೆಸರು ಮಾಡಿದ್ದರು. ಇತ್ತೀಚೆಗೆ ನಟಿ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರಿಗೆ ಆದ ತೊಂದರೆ ಹಾಗೂ ಸಮಸ್ಯೆಗಲ ಕುರಿತು ಬಿಚ್ಚಿಟ್ಟಿದ್ದಾರೆ.
ಪವಿತ್ರಾ ಪುನಿಯಾ ಅವರು ಬಿಗ್ ಬಾಸ್‌ನ ನಂತರ ಕೋವಿಡ್ ಲಾಕ್‌ಡೌನ್‌ನಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಎದುರಾಯಿತಿ. ನಂತರ ನಟಿ ಜೀವನವನ್ನು ನಡೆಸಲು ಆಧಾಯವಿಲ್ಲದೆ ತೊಂದರೆಗೆ ಸಿಲುಕಿದರು.
ನಟಿ 'ಬಿಗ್ ಬಾಸ್ 14' ನಲ್ಲಿ ಪ್ರಬಲ ಸ್ಪರ್ಧಿಯಾಗಿದ್ದರು. ಈ ವೇಳೆಗೆ ನಟಿ ಅನ್ಯ ಧರ್ಮದ ವ್ಯಕ್ತಿಯನ್ನು ಪ್ರೀತಿಸುತಿದ್ದರು, ಹಲವು ವರ್ಷಗಳ ಕಾಲ ಮುಂದುವರೆದಿದ್ದ ಇವರ ಸಂಬಂಧ ನಂತರ ಮುರಿದುಬಿದ್ದಿತ್ತು. ಇದರ ನಂತರ ನಟಿ ಆರ್ಥಿಕ ಸ್ಥಿತಿ ಕೂಡ ಹದಗೆಟ್ಟಿತ್ತು, ಎಲವನ್ನೂ ಕಳೆದುಕೊಂಡ ನಂತರ ನಟಿಗೆ ತುತ್ತು ಊಟಕ್ಕೂ ಭಕ್ಷೆ ಬೇಡುವ ಪರಿಸ್ಥಿತಿ ಎದುರಾಯಿತಿ. ನಂತರ ನಟಿ ತಮ್ಮ ಜೀವನವನ್ನು ಕೂಡ ಅಂತ್ಯಗೊಳಿಸುವ ನಿರ್ಧಾರಕ್ಕೂ ಸಹ ಬಂದಿದ್ದರಂತೆ.
"ಇದು ನನ್ನ ಸ್ವಂತ ಜವಾಬ್ದಾರಿ, ನನ್ನ ತಂದೆ ಬಿಗ್ ಬಾಸ್ ಮನೆಯಿಂದ ಹೊರಬಂದ ಸುಮಾರು ಒಂದು ತಿಂಗಳ ನಂತರ ಅಪಘಾತಕ್ಕೀಡಾದರು. ಅವರ ಚಿಕಿತ್ಸೆಗೆ ಹಣ ಸಾಕಾಗಲಿಲ್ಲ, ಈ ಅವಧಿಯಲ್ಲಿ ಸಾಕಷ್ಟು ಕಷ್ಟ ಪಡಬೇಕಾಗಿ ಬಂತು" ಎಂದಿದ್ದಾರೆ.
'ಬಿಗ್ ಬಾಸ್ 14' ನಿಂದ ಹೊರಬಂದ ನಂತರ, ಪವಿತ್ರಾ ಪುನಿಯಾ ಅವರಿಗೆ ಒಂದೂವರೆ ವರ್ಷ ಕಠಿಣವಾಗಿತ್ತು. ಖಿನ್ನತೆಗೆ ಒಳಗಾದಳು. ಆತ್ಮಹತ್ಯೆ ಮಾಡಿಕೊಂಡು ಜೀವನ ಕೊನೆಗೊಳಿಸುವ ನಿರ್ಧಾರಕ್ಕೆ ಬಂದಿದ್ದರು. ತಂದೆ-ತಾಯಿಯ ಒತ್ತಾಸೆಯಿಂದ ಈ ಕೆಟ್ಟ ಹಂತವನ್ನು ಜಯಿಸಲು ಸಾಧ್ಯವಾಯಿತು ಎಂದು ಪವಿತ್ರಾ ಹೇಳಿದ್ದಾರೆ.