ಮನೆಯ ಮುಂದೆ ಈ ನೀರನ್ನು ಸಿಂಪಡಿಸಿದರೆ ಸಾಕು... ಒಂದೇ ಒಂದು ಹಾವು ಕೂಡ ಅತ್ತಕಡೆ ತಲೆಹಾಕಲ್ಲ!
ಮಳೆಗಾಲ ಈಗಾಗಲೇ ಶುರುವಾಗಿದೆ. ಈ ಸಂದರ್ಭದಲ್ಲಿ ಹಾವು ಸೇರಿದಂತೆ ಹುಳ ಹುಪ್ಪಟೆಗಳು ಮನೆಯೊಳಗೆ ಎಂಟ್ರಿ ಕೊಡುವುದು ಸಾಮಾನ್ಯ, ಇಂತಹ ಸಮಸ್ಯೆಗಳಿಗೆ ಸುಲಭ ಪರಿಹಾರಗಳು ಇದ್ದು, ಅಂತಹ ವಿಷಯಗಳ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಸೊಳ್ಳೆ ಮತ್ತು ನೊಣಗಳು ಮನೆಗಳಿಗೆ ಬರದಂತೆ ತಡೆಯಲು ಹಲವಾರು ಮಾರ್ಗಗಳನ್ನು ಅನುಸರಿಸುತ್ತೇವೆ. ಆದರೆ ಹಾವುಗಳು ಬಾರದಂತೆ ತಡೆಯುವುದು ಹೇಗೆ. ಅದರಲ್ಲೂ ಮುಖ್ಯವಾಗಿ ಮಳೆಗಾಲದ ಸಮಯದಲ್ಲಿ ಈ ಸಮಸ್ಯೆ ತಪ್ಪಿದ್ದಲ್ಲ.
ಹೀಗಿರುವಾಗ ಈ ಸಮಸ್ಯೆಗೆ ಸುಲಭ ಪರಿಹಾರ ಒಂದಿದೆ. ಅನೇಕ ಮನೆಗಳಲ್ಲಿ ಫೀನಾಯಿಲ್ ಬಳಸಲಾಗುತ್ತದೆ. ಕಲ್ಮಶಗಳನ್ನು ತೆಗೆದುಹಾಕಲು ಇದನ್ನು ಬಳಸಲಾಗುತ್ತದೆ. ಆದರೆ ಈ ಫೀನಾಯಿಲ್ ಅಸಹನೀಯ ವಾಸನೆಯನ್ನು ನೀಡುತ್ತದೆ.
ಈ ವಾಸನೆ ಹಾವುಗಳಿಗೆ ಇಷ್ಟವಾಗುವುದಿಲ್ಲ. ಆದ್ದರಿಂದ, ಹಾವುಗಳು ಬರುವ ಸಾಧ್ಯತೆ ಇರುವಲ್ಲಿ ಫಿನಾಯಿಲ್ ಬೆರೆಸಿದ ನೀರನ್ನು ಸಿಂಪಡಿಸಬೇಕು. ಹಾವುಗಳು ಮನೆಯೊಳಗೆ ಬರಬಹುದು ಎಂದು ತೋರುವ ಸ್ಥಳಗಳಲ್ಲಿ, ಚರಂಡಿ ಬಳಿ, ಮೆಟ್ಟಿಲುಗಳ ಬಳಿ ಫಿನಾಯಿಲ್ ನೀರನ್ನು ಸಿಂಪಡಿಸಿ.
ಇನ್ನು ಫಿನಾಯಿಲ್ ಬಗ್ಗೆ ಎಚ್ಚರದಿಂದಿರಿ. ಮನೆಯಲ್ಲಿ ಮಕ್ಕಳಿದ್ದರೆ ಫಿನಾಯಿಲ್ ಬಳಸುವುದು ಅಪಾಯಕಾರಿ. ಅಲ್ಲದೆ ನಡೆದಾಡುವ ಕಡೆ ಫಿನಾಯಿಲ್ ಚೆಲ್ಲದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕಾಲಿಟ್ಟು ಜಾರಿ ಬೀಳುವ ಅಪಾಯವಿದೆ.
ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಈ ಟಿಪ್ಸ್ ಫಾಲೋ ಮಾಡಲಾಗುತ್ತಿದೆ.