North Korea Rules: ಈ ದೇಶದಲ್ಲಿ ಅಳುವುದು ಕಡ್ಡಾಯ, ಇಲ್ಲದಿದ್ದರೆ ಸಿಗುತ್ತೆ ಮರಣದಂಡನೆ ಶಿಕ್ಷೆ
2011 ರಲ್ಲಿ ತಂದೆ ಕಿಮ್ ಜೊಂಗ್ ಇಲ್ ಅವರ ಮರಣದ ನಂತರ ಕಿಮ್ ಜೊಂಗ್ ಉನ್ ಉತ್ತರ ಕೊರಿಯಾದಲ್ಲಿ ಅಧಿಕಾರ ವಹಿಸಿಕೊಂಡಿದ್ದಾನೆ. ಕಿಮ್ ಜೊಂಗ್ ಅವರ ಅಜ್ಜ ಕಿಮ್- II ಸುಂಗ್ ಅವರನ್ನು ಉತ್ತರ ಕೊರಿಯಾದ ಸ್ಥಾಪಕ ಮತ್ತು ಮೊದಲ ನಾಯಕ ಎಂದು ಪರಿಗಣಿಸಲಾಗಿದೆ. ಉತ್ತರ ಕೊರಿಯಾದ ಪ್ರತಿಯೊಂದು ಮನೆಯಲ್ಲೂ ಕಿಮ್ ಜೊಂಗ್ ಉನ್ ಅವರ ತಂದೆ ಮತ್ತು ಅವರ ಅಜ್ಜನ ಚಿತ್ರವನ್ನು ತೂಗು ಹಾಕುವ ಕಾನೂನಿದೆ.
ಉತ್ತರ ಕೊರಿಯಾದಲ್ಲಿ ಪ್ರತಿ ವರ್ಷ ಕಿಮ್ ಜೊಂಗ್ ಉನ್ ಅವರ ತಂದೆ ಕಿಮ್ ಜೊಂಗ್ ಇಲ್ ಮತ್ತು ಅವರ ಅಜ್ಜ ಕಿಮ್- II ಸಂಗ್ ಅವರ ಶೋಕಾಚರಣೆ ನಡೆಸಲಾಗುತ್ತದೆ. ಈ ಸಂತಾಪ ಸಭೆಯಲ್ಲಿ, ಉತ್ತರ ಕೊರಿಯಾದ ನಾಗರಿಕರು , ಜೋರಾಗಿ ಕಿರುಚುತ್ತಾ ಅಳಬೇಕು ಮತ್ತು ಎದೆ ಬಡಿದುಕೊಳ್ಳಬೇಕು. ಕಿಮ್ ಕುಟುಂಬದ ಪ್ರತಿ ನಿಷ್ಠೆಗೆ ಇದು ಪುರಾವೆಯಾಗಿದೆ. ಮಕ್ಕಳು, ವೃದ್ಧರು, ಯುವಕರು ಮತ್ತು ಮಹಿಳೆಯರು ಅಳುವ ಕ್ರಮವನ್ನು ಪಾಲಿಸುವುದು ಕಡ್ಡಾಯವಾಗಿದೆ.
ಒಮ್ಮೆ, ಕಿಮ್ ಜೊಂಗ್ ಉನ್ ಅವರ ತಂದೆ ಕಿಮ್ ಜೊಂಗ್ ಇಲ್ ಅವರ ಶೋಕಾಚರಣೆಯಲ್ಲಿ, ಕೆಲವರು ಸರಿಯಾಗಿ ಅಳಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಆ ಜನರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು ಮತ್ತು ಸಾವಿರಾರು ಜನರನ್ನು ಅವರ ಮನೆಗಳಿಂದ ಎತ್ತಿ ಕಣ್ಮರೆಮಾಡಲಾಗಿದೆ. ಹೀಗಾಗಿ ಇಂದಿಗೂ, ಸಾರ್ವಜನಿಕ ಶೋಕ ಸಭೆಗಳಲ್ಲಿ, ಸಾರ್ವಜನಿಕರು ಕೂಗಬೇಕು, ಅಳಬೇಕು ಹಾಗೂ ಎದೆ ಬಡಿದುಕೊಳ್ಳಬೇಕು.