10,000 ಹೂಡಿಕೆ ಮಾಡಿ 16 ಲಕ್ಷ ಸಂಪಾದಿಸಿ, Post Office ಈ ಸ್ಕೀಮ್ ನೀಡುತ್ತೆ ಜಬರ್ದಸ್ತ್ ರಿಟರ್ನ್
ರಿಕರಿಂಗ್ ಡಿಪಾಸಿಟ್ (RD)ಯಲ್ಲಿ ಮಾಡಿದ ಹೂಡಿಕೆಯ ಮೇಲೆ ವಾರ್ಷಿಕವಾಗಿ TDS ಕಡಿತಗೊಳಿಸಲಾಗುತ್ತದೆ, ಒಂದು ವೇಳೆ ನಿಮ್ಮ ಹೂಡಿಕೆ 40,000 ರೂ.ಗಳಿಗಿಂತ ಹೆಚ್ಚಾಗಿದ್ದರೆ ವಾರ್ಷಿಕವಾಗಿ ಶೇ.10 ರಷ್ಟು ಟ್ಯಾಕ್ಸ್ ಪಾವತಿಸಬೇಕು. RD ಖಾತೆಗೆ ಸಿಗುವ ಬಡ್ಡಿಯ ಮೇಲೂ ಕೂಡ ಟ್ಯಾಕ್ಸ್ ಪಾವತಿಸಬೇಕು. ಆದರೆ, ಮ್ಯಾಚುರಿಟಿ ಅಮೌಂಟ್ ಮೇಲೆ ನೀವು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಹೂಡಿಕೆದಾರರಿಗೆ ಯಾವುದೇ ರೀತಿಯ ಟ್ಯಾಕ್ಸೇಬಲ್ ಇನ್ಕಂ ಇಲ್ಲ ಎಂದಾದಲ್ಲಿ ಅಂತಹ ಹೂಡಿಕೆದಾರರು ಫಾರ್ಮ್ 15G ಭರ್ತಿ ಮಾಡಿ FD ರೀತಿಯಲ್ಲಿ TDS ನಿಂದ ಮುಕ್ತಿ ಪಡೆಯಬಹುದು.
ನೀವು ನಿಯಮಿತವಾಗಿ ಹಣವನ್ನು ಖಾತೆಯಲ್ಲಿ ಜಮಾ ಮಾಡಬೇಕಾಗುತ್ತದೆ, ನೀವು ಹಣವನ್ನು ಠೇವಣಿ ಮಾಡದಿದ್ದರೆ, ನೀವು ಪ್ರತಿ ತಿಂಗಳುಶೇ.1ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. 4 ಕಂತುಗಳು ತಪ್ಪಿದ ಬಳಿಕ ನಿಮ್ಮ ಖಾತೆಯನ್ನು ಬಂದ್ ಮಾಡಲಾಗುವುದು.
ಒಂದು ವೇಳೆ ನೀವು ಪೋಸ್ಟ್ ಆಫೀಸ್ RDಯಲ್ಲಿ ತಿಂಗಳಿಗೆ 10 ಸಾವಿರ ರೂ. ಗಳನ್ನು 10 ವರ್ಷಗಳ ಕಾಲ ಹೂಡಿಕೆ ಮಾಡಿದರೆ, 10 ವರ್ಷಗಳ ಬಳಿಕ ನಿಮಗೆ ಶೇ.5.8 ರಷ್ಟು ಬಡ್ಡಿಯೊಂದಿಗೆ 16 ಲಕ್ಷ ರೂ. ಸಿಗಲಿವೆ.
ಮರುಕಳಿಸುವ ಠೇವಣಿ ಯೋಜನೆಯಲ್ಲಿ ಪ್ರಸ್ತುತ 5.8% ನಷ್ಟು ಬಡ್ಡಿ ಸಿಗುತ್ತದೆ. ಈ ಹೊಸ ದರವು ಏಪ್ರಿಲ್ 1, 2020 ರಿಂದ ಅನ್ವಯಿಸುತ್ತದೆ. ಭಾರತ ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ತನ್ನ ಎಲ್ಲಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಪರಿಷ್ಕರಿಸುತ್ತದೆ.