WhatsApp Privacy Policy: ಯಾರು ಸೇಫ್ ಮತ್ತು ಯಾರು Unsafe?
WhatsAppನ ಈ ವಿಕಲ್ಪ ಕೂಡ ಇತ್ತೀಚಿನ ದಿನಗಳಲ್ಲಿ ಭಾರಿ ಪಾಪ್ಯುಲರ್ ಆಗುತ್ತಿದೆ. ಈ ಆಪ್ ವಿಶೇಷತೆ ಎಂದರೆ, ಇದನ್ನು ಬಳಸಲು ನೀವು ನಿಮ್ಮ ಮೊಬೈಲ್ ಸಂಖ್ಯೆಯ ನೋಂದಣಿ ಮಾಡಬೇಕಾದ ಅವಶ್ಯಕತೆ ಇಲ್ಲ. ಈ ಆಪ್ ನಿಮ್ಮ ಖಾಸಗಿತನದ ಸಂಪೂರ್ಣ ಕಾಳಜಿವಹಿಸುತ್ತದೆ ಎಂಬುದು ಇದರ ಮತ್ತೊಂದು ವೈಶಿಷ್ಟ್ಯತೆ.
ಮೊಬೈಲ್ ಗೇಮ್ಸ್ ಆಟ ಆಡುವಾಗ ನೀವು Discord ಬಗ್ಗೆ ಕೇಳಿರಬಹುದು. ಆದರೆ, ಸದ್ಯ ಎಲ್ಲ ಬಳಕೆದಾರರು WhatsApp ಅನ್ನು ತ್ಯಜಿಸಿ. ವಿಕಲ್ಪಗಳತ್ತ ಮುಖಮಾಡಿರುವುದು ವಾಸ್ತವಿಕತೆ. ಇಂತಹುದರಲ್ಲಿ Discord ಕೂಡ ಒಂದು ಉತ್ತಮ ವಿಕಲ್ಪ ಸಾಬೀತಾಗುವ ಸಾಧ್ಯತೆ ಇದೆ. ಅತ್ಯದ್ಭುತ ವೈಶಿಷ್ಟ್ಯ ಹಾಗೂ ಇಮೋಜಿಗಳಿಗಾಗಿಯೂ ಕೂಡ ನೀವು ಈ ಆಪ್ ಅನ್ನು ಬಳಸಬಹುದು.
ಭಾರತದಲ್ಲಿ ಬಳಕೆದಾರರು ಇದೀಗ WhatsApp ಪರ್ಯಾಯದ ರೂಪದಲ್ಲಿ Viberಗೂ ಕೂಡ ಮಣೆಹಾಕುತ್ತಿದ್ದಾರೆ. ಈ ಆಪ್ ನ ಎಲ್ಲ ಚಾಟ್ ಗಳು ಪ್ರೈವೇಟ್ ಆಗಿವೆ. ಈ ಆಪ್ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ (end to end encryption) ನೊಂದಿಗೆ ಬರುತ್ತವೆ.
ಭಾರತದಲ್ಲಿ WhatsApp ಬಳಿಕ ಅತಿ ಹೆಚ್ಚು ಬಳಕೆಯಾಗುವ ಆಪ್ ಅಂದರೆ ಅದು ಟೆಲಿಗ್ರಾಮ್. ಈಗಾಗಲೇ ಹಲವು ಜನರು ಈ ಆಪ್ ಅನ್ನು ಬಳಸುತ್ತಿದ್ದಾರೆ. ಈ ಆಪ್ ಅನ್ನು ಡೌನ್ಲೋಡ್ ಮಾಡಿದ ಬಳಿಕ ನಿಮ್ಮ ಹಲವು ಬಂಧು-ಮಿತ್ರರು ಈಗಾಗಲೇ ಈ ಆಪ್ ಬಳಸುತ್ತಿರುವುದು ನಿಮ್ಮ ಗಮನಕ್ಕೂ ಕೂಡ ಬರುವ ಸಾಧ್ಯತೆ ಇದೆ.
ಪ್ರಸ್ತುತ ಸಮಯದಲ್ಲಿ Signal ಅನ್ನು WhatsAppನ ಅತ್ಯುತ್ತಮ ವಿಕಲ್ಪ ಎಂದು ಹೇಳಲಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಈ ಆಪ್ ಅತ್ಯಧಿಕ ಡೌನ್ಲೋಡ್ ಗೆ ಒಳಗಾಗಿದೆ. ಭಾರತದ ಹೆಸರಾಂತ ಕಂಪನಿಗಳು ಕೂಡ ತಮ್ಮ ಕಂಪನಿಯ ಜೊತೆಗಿನ ಸಂವಹನಕ್ಕಾಗಿ WhatsApp ತೊರೆದು Signal ಕೈಹಿಡಿದಿದ್ದಾರೆ.