ವಾಶಿಂಗ್ ಮೆಷಿನ್ ಮರೆತು ಬಿಡಿ ! ಇದೊಂದು ಬಕೆಟ್ ಇದ್ದರೆ ಸಾಕು, ನಿಮಿಷಗಳಲ್ಲಿ ಬಟ್ಟೆಗಳನ್ನು ಹೊಳೆಯುವಂತೆ ಮಾಡುತ್ತದೆ !ಖರ್ಚೂ ಕಡಿಮೆ, ಕೆಲಸವೂ ಸುಲಭ
ವಾಶಿಂಗ್ ಮೆಷಿನ್ ನಲ್ಲಿ ಬಟ್ಟೆಗಳನ್ನು ತೊಳೆಯುವುದು ಸುಲಭ. ಮಾರುಕಟ್ಟೆಯಲ್ಲಿ ಸೆಮಿ ಆಮ್ಯಾಟಿಕ್ ಮತ್ತು ಫುಲ್ಲಿ ಆಮ್ಯಾಟಿಕ್ ಎಂಬ ಎರಡು ರೀತಿಯ ವಾಶಿಂಗ್ ಮೆಷಿನ್ ಲಭ್ಯವಿವೆ. ಆದರೆ,ಅವುಗಳ ಬೆಲೆ ಸ್ವಲ್ಪ ಹೆಚ್ಚು. ಅವುಗಳನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.
ಇದೀಗ ವಾಶಿಂಗ್ ಮೆಷಿನ್ ಬದಲು ಬಕೆಟ್ ಮೆಷಿನ್ ಮಾರುಕಟ್ಟೆಗೆ ಕಾಲಿಟ್ಟಿದೆ. ಇದನ್ನು ಬಳಸಿದರೆ ಬೆಲೆಯೂ ಕಡಿಮೆ, ಕೆಲಸವೂ ಸುಲಭ.
ಇದನ್ನು ಪೋರ್ಟಬಲ್ ವಾಶಿಂಗ್ ಮೆಷಿನ್ ಎಂದು ಕರೆಯಲಾಗುತ್ತದೆ. ಇದು ನೋಡುವುದಕ್ಕೆ ಸಾಮಾನ್ಯ ಬಕೆಟ್‌ನಂತೆ ಕಾಣುತ್ತದೆ. ಆದರೆ, ಇದು ಬಟ್ಟೆ ತೊಳೆಯುವ ಯಂತ್ರವಾಗಿ ಬದಲಾಗುತ್ತದೆ.
ಪೋರ್ಟಬಲ್ ವಾಷಿಂಗ್ ಮೆಷಿನ್ ಅನ್ನು ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು. ಇದು ಸಾಂಪ್ರದಾಯಿಕ ವಾಷಿಂಗ್ ಮೆಷಿನ್‌ಗಿಂತ ಚಿಕ್ಕದು ಮತ್ತು ಹಗುರ.
ಈ ಬಕೆಟ್ ಥೇಟ್ ವಾಶಿಂಗ್ ಮೆಷಿನ್ ನಂತೆಯೇ ಕೆಲಸ ಮಾಡುತ್ತದೆ. ಮೊದಲು ಅದನ್ನು ಪ್ಲಗ್‌ಗೆ ಸಂಪರ್ಕಿಸಬೇಕು. ಅಗತ್ಯಕ್ಕೆ ತಕ್ಕಂತೆ ಬಟ್ಟೆ ಮತ್ತು ಡಿಟರ್ಜೆಂಟ್ ಮತ್ತು ನೀರನ್ನು ಸೇರಿಸಿ ಆನ್ ಮಾಡಬೇಕು. ಆಗ ಅದರಲ್ಲಿ ಬಟ್ಟೆ ಒಗೆಯಲು ಶುರುವಾಗುತ್ತದೆ.